Asianet Suvarna News Asianet Suvarna News

ಅಪ್ಪ ಪೊಲೀಸ್..ಅಮ್ಮ ಟೀಚರ್..ಮಗ ರೌಡಿ..! ಬರ್ತಡೇಗೆ ಬರಲ್ಲ ಅಂದಿದಕ್ಕೆ ಮುಗಿಸಿಬಿಡೋದಾ ?

ಮೀಸೆ ಚಿಗುರದ ಹುಡುಗರಿಗೆ ರೌಡಿಗಳಾಗೋ ಆಸೆ..!
ಕೊಲೆ ಮಾಡಿ ಎಸ್ಕೇಪ್ ಆದವನಿಗೆ ಗುಂಡೇಟು..!
ಕೊಂದು ಮೈಮೇಲೆ R ಮತ್ತು S ಎಂದು ಗೀಚಿದ್ರು..!

ಅವನಿನ್ನೂ ಮೀಸೆ ಚಿಗುರದ ಹುಡುಗ. ಆಟ ಪಾಟ ಅಂತ ಇರಬೇಕಿದ್ದ ವಯಸ್ಸು. ಆದ್ರೆ ಈ ವಯಸ್ಸಿಗೆ ಆತ ಡಾನ್ ಆಗಲು ಹೊರಟಿದ್ದ. ಏರಿಯಾದಲ್ಲಿ ನನಗೊಂದು ಹೆಸರಿರಬೇಕು. ಎಲ್ರೂ ನನ್ನ ನೋಡಿ ಭಯಪಡಬೇಕು ಅಂತ ಕನಸುಕಂಡಿದ್ದ. ಹೀಗಾಗಿ ಕೈಗೆ ಸಿಗ್ತಿದ್ದ ಬಡಪಾಯಿಗಳನ್ನ ಹಿಡಿದು ಹಲ್ಲೆ(Attack) ಮಾಡ್ತಿದ್ದ. ಆದ್ರೆ ಆವತ್ತು ಹೀಗೆ ಡಾನ್ ಆಗಲು ಹೊರಟು ಬಾಲಕನ ಕೈಯಲ್ಲಿ ಒಬ್ಬ ಅಮಾಯಕ ತಗ್ಲಾಕಿಕೊಂಡಿದ್ದ. ಅವನನ್ನ ಈ ಕಿರಾತಕ ಬರ್ಬರವಾಗಿ ಕೊಂದು ಬಿಟ್ಟ. ಇನ್ನೂ ಈತ ಕೊಂದದ್ದೇನು ಬೇರೆಯಾರೋ ಆಗಿರಲಿಲ್ಲ ಬದಲಿಗೆ ಇವನ ಜೊತೆ ಆಡಿ ಬೆಳೆದವನೇ.ಆವತ್ತು ನವೆಂಬರ್ ಮೂರನೇ ತಾರೀಖು ಶುಕ್ರವಾರ. ಕೋಲಾರ(Koalr) ನಗರದ ಪಿಸಿ ಬಡಾವಣೆಯ ಜನ ಬೆಚ್ಚಿ ಬಿದ್ದಿದ್ರು. ಯಾಕಂದ್ರೆ ಅದೇ ಊರಿನ ಸರ್ಕಾರಿ ಶಾಲೆಯ ಎದುರಲ್ಲಿ ಒಂದು ಭೀಕರ ಕೊಲೆ(Murder) ನಡೆದು ಹೋಗಿತ್ತು. ರಕ್ತದ ಮಡುವಿನಲ್ಲಿ ಒಬ್ಬ ಯುವಕ ಬರ್ಬರವಾಗಿ ಕೊಲೆಯಾಗಿ ಹೋಗಿದ್ದ. ಸರ್ಕಾರಿ ಶಾಲೆಯ ಆವರಣದಲ್ಲಿ ಒಬ್ಬ ಯುವಕನ ಶವ ಪತ್ತೆಯಾಗಿತ್ತು. ಆತನನ್ನ ಹೇಗೆ ಕೊಂದಿದ್ರು ಅಂದ್ರೆ ಅವನ ಮೈಮೇಲೆಲ್ಲಾ ಬರೀ ಚಾಕು ಇರಿತದ ಗಾಯಗಳೇ ಇದ್ವು. ಇನ್ನೂ ರಕ್ತ ಅಂತೂ ಕೋಡಿ ಹರಿದಂತೆ ಹರದುಬಿಟ್ಟಿತ್ತು. ಇನ್ನೂ ಭಿಕರ ದೃಶ್ಯವನ್ನ ನೋಡಿದ ಸ್ಥಳೀಯರು ಪೊಲೀಸ್ ಠಾಣೆಗೆ ದೂರು ನೀಡಿದ್ರು. ಇನ್ನೂ ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿ ಡಾಗ್ ಸ್ಕ್ವಾಡ್ ಅನ್ನೂ ಕರೆಸಿ ಏನಾದ್ರೂ ಮಾಹಿತಿ ಸಿಗುತ್ತಾ ಅಂತ ಪರಿಶೀಲಿಸಿದ್ರು. ಭೀಕರವಾಗಿ ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದು ಹೆಣವಾದವನು ಅದೇ ಗ್ರಾಮದ ನಿವಾಸಿ ಅರುಣ್ ಸಿಂಗ್ ಮತ್ತು ಸುಶೀಲ ಭಾಯಿ ಅನ್ನೋರ ಮಗ 16 ವರ್ಷದ ಕಾರ್ತೀಕ್.

ಇದನ್ನೂ ವೀಕ್ಷಿಸಿ:  ಅತಿಯಾದ ಧರ್ಮ ಪಾಲನೆಯೇ ಮುಸ್ಲಿಮರಿಗೆ ಸಮಸ್ಯೆನಾ ? ಅಂಬೇಡ್ಕರ್ ಸಂವಿಧಾನ ಅವರಿಗೆ ಅನ್ವಯಿಸಲ್ವಾ ?