ಬಾಲ್ಯ ವಿವಾಹ..ಗಂಡನ ಸಾವು..ಅಕ್ಕನ ಕಾರಣಕ್ಕೆ ತಮ್ಮನ ಕೊಲೆ..!

ಅವನು ಬಾರ್‌ನಲ್ಲಿರುವ ಸುದ್ದಿ ಹಂತಕರಿಗೆ ಬಂದಿತ್ತು..!
ಸಾಯೋದಕ್ಕೂ ಮೊದಲು ತಾಯಿಯಿಂದ ಕರೆ ಬಂದಿತ್ತು..!
ಮೊಹರಂ ಮೆರವಣಿಗೆಗೆ ಹೋದವನು ಹೆಣವಾಗಿದ್ದ..!

First Published Aug 1, 2023, 12:47 PM IST | Last Updated Aug 1, 2023, 12:47 PM IST

ಅವನೊಬ್ಬ ಬೈಕ್ ಕಳ್ಳ.. ಬೇಲ್ ಮೇಲೆ ಹೊರಗೆ ಬಂದಿದ್ದ.. ಆದ್ರೆ ಮೊನ್ನೆ ಮೊಹರಂ (Muharram) ಕೊನೆಯ ದಿನ ಅವನನ್ನ ಹಂತಕರು ಬರ್ಬರವಾಗಿ ಕೊಂದು ಹಾಕಿದ್ರು. ಮೊಹರಂ ಪ್ರೊಸೆಷನ್ನಲ್ಲಿ ಭಾಗಿಯಾಗಿದ್ದ ಆತ ನಂತರ ಎಣ್ಣೆ ಹಾಕಲು ಸಂಬಂಧಕಿರ ಜೊತೆ ಬಾರ್ಗೆ ಹೋಗಿದ್ದ. ರಾತ್ರಿ 10 ಗಂಟೆಗೆ ಮಗನಿಗೆ ಕಾಲ್ ಮಾಡಿದ ಆತನ ತಾಯಿಗೆ ಕೇಳಿಸಿದ್ದು ಚೀರಾಟ ಕೂಗಾಟ. ಅವಳಿಗೆ ಅನುಮಾನ ಬಂದಿತ್ತು ಹೋಗಿ ನೋಡಿದ್ರೆ ಮಗ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಹಾಗಾದ್ರೆ ಆತನನ್ನ ಕೊಂದವರು ಯಾರು..? ಆವತ್ತು ಮೊಹರಂ ಮೆರವಣಿಗೆಯಲ್ಲಿ ನಡೆದಿದ್ದೇನು..? ಬಾನರ್‌ನಲ್ಲಿ ಎಣ್ಣೆ ಪಾರ್ಟಿ ಮಾಡಬೇಕಾದ್ರೆ ಗಲಾಟೆ ಏನಾದ್ರೂ ಆಯ್ತು..? ಅಥವಾ ಬೈಕ್ ಕಳ್ಳತನ(Theft) ಮಾಡಿದ್ದೇ ಅವನಿಗೆ ಮುಳುವಾಯ್ತಾ..?. ಮೊಹರಂ ಮೆರವಣಿಗೆಗೆ ಹೋದ ಮಹಾಂತಪ್ಪ ಹೆಣವಾಗಿ ಹೋಗಿದ್ದ. ಆದ್ರೆ ಆತ ಕೊಲೆಯಾಗುವ (murder) ಕೊನೆ ಕ್ಷಣದಲ್ಲಿ ಆತನಿಗೆ ತನ್ನ ತಾಯಿಯಿಂದ ಫೋನ್ ಕಾಲ್ ಬಂದಿತ್ತು. ಆ ಫೋನ್ ರಿಸೀವ್ ಮಾಡಿದ್ದ ಮಹಾಂತಪ್ಪ ಕೊಲೆಗಾರರ ಸುಳಿವು ಕೊಟ್ಟಿದ್ದ. ಫೋನ್ನಲ್ಲಿ ಆತ ಹೇಳಿದ್ದ ಎರಡು ಹೆಸರುಗಳು ಕೇಳ್ತಿದ್ದಂತೆ ಆ ಕುಟುಂಬವೇ ಒಂದು ಕ್ಷಣ ಶಾಕ್ ಆಗಿತ್ತು. ಯಾಕಂದ್ರೆ ಒಂದುವರೆ ವರ್ಷದ ಹಿಂದಷ್ಟೇ ಮಹಾಂತಪ್ಪ ಅವರ ಕಾಲು ಮುರಿದಿದ್ದ. ಪರಶುರಾಮ್ ಮತ್ತು ದಶರಥ ಇಬ್ಬರೂ ಸೇರಿ ಮಹಾಂತಪ್ಪನನ್ನ ಕೊಲೆ ಮಾಡಿದ್ದು ಪೊಲೀಸರಿಗೆ ಗೊತ್ತಾಗಿತ್ತು.

ಇದನ್ನೂ ವೀಕ್ಷಿಸಿ:  "ಶಾಸಕ Vs ಸಚಿವ" ಸಂಘರ್ಷಕ್ಕೆ ಹೈಕಮಾಂಡ್ ಎಂಟ್ರಿ: "ಲಕ್ಷ್ಮಣ ರೇಖೆ" ಎಳೆಯಲಿದ್ದಾರಾ ಖರ್ಗೆ,ರಾಹುಲ್ ಗಾಂಧಿ..?