"ಶಾಸಕ Vs ಸಚಿವ" ಸಂಘರ್ಷಕ್ಕೆ ಹೈಕಮಾಂಡ್ ಎಂಟ್ರಿ: "ಲಕ್ಷ್ಮಣ ರೇಖೆ" ಎಳೆಯಲಿದ್ದಾರಾ ಖರ್ಗೆ,ರಾಹುಲ್ ಗಾಂಧಿ..?

ಕೈ ಕೋಟೆಯಲ್ಲಿ ಮತ್ತೆ ಭುಗಿಲೆದ್ದ ದಾಯಾದಿ ಕಲಹ..!
ಅಂತರ್ಯುದ್ಧಕ್ಕೆ ಮದ್ದು ಅರೆಯಲು ಹೈಕಮಾಂಡ್ ಎಂಟ್ರಿ..!
ಆಗಸ್ಟ್ 2ಕ್ಕೆ ದೆಹಲಿಯಲ್ಲಿ ಹೈವೋಲ್ಟೇಜ್ ಮೀಟಿಂಗ್..!
 

First Published Aug 1, 2023, 12:40 PM IST | Last Updated Aug 1, 2023, 12:40 PM IST

ರಾಜ್ಯ ಕಾಂಗ್ರೆಸ್‌ನಲ್ಲಿ ಸರ್ಕಾರದ ಕೋಟೆಯಲ್ಲಿ ನಡೀತಾ ಇರೋ ದಾಯಾದಿ ಕಲಹದ ಅಂಗಳಕ್ಕೆ ಕೈ ಹೈಕಮಾಂಡ್ ಎಂಟ್ರಿ ಕೊಟ್ಟಿದೆ. ಸಚಿವರ ವಿರುದ್ಧ ಶಾಸಕರ ಕೋಪ, ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್(Congress) ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ಆಕ್ರೋಶ. ಹೀಗೆ ಜ್ವಾಲಾಮುಖಿ ಸ್ಫೋಟಗೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡಿರೋ ಕಾಂಗ್ರೆಸ್ ಹೈಕಮಾಂಡ್, ಆಗಸ್ಟ್ ಎರಡರಂದು ದೆಹಲಿಯಲ್ಲಿ(Delhi) ಹೈವೋಲ್ಟೇಜ್ ಮೀಟಿಂಗ್ ಫಿಕ್ಸ್ ಮಾಡಿದೆ. ರಾಜ್ಯ ನಾಯಕರ ಜೊತೆ ಮೀಟಿಂಗ್ ಅಂದ್ರೆ ಅಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಇರ್ಲೇಬೇಕು. ಆದ್ರೆ ಇಲ್ಲಿ ಸಿಎಂ ಡಿಸಿಎಂ ಜೊತೆ ಸಚಿವರ ದಂಡೇ ದೆಹಲಿಗೆ ಹೋಗ್ತಾ ಇದೆ. ಸಿದ್ದರಾಮಯ್ಯ(Siddaramaiah) ಸಂಪುಟದ 17 ಮಂತ್ರಿಗಳಿಗೆ ಸಭೆಗೆ ಬರುವಂತೆ ಬುಲಾವ್ ಬಂದಿದೆ. ಇವ್ರ ಜೊತೆ ಮತ್ತೂ ಒಂದಷ್ಟು ನಾಯಕರುಗಳು ಸೇರಿದಂತೆ ಒಟ್ಟು 37 ಮಂದಿ ಬುಧವಾರ ನಡೆಯುವ ಸಭೆಯಲ್ಲಿ(Meeting) ಭಾಗಿಯಾಗಲಿದ್ದಾರೆ. ಅಷ್ಟಕ್ಕೂ ಮೂರ್ನಾಲ್ಕು ಮಂದಿ ಕೂತು ನಡೆಸಬೇಕಿಲ್ಲ ಸಭೆಗೆ 37 ಮಂದಿಯನ್ನು ಕಾಂಗ್ರೆಸ್ ಹೈಕಮಾಂಡ್ ಆಹ್ವಾನಿಸಿದೆ. ಈ ಹೈವೋಲ್ಟೇಜ್ ಸಭೆಯ ಹಿಂದಿರೋ ಅಸಲಿ ಗುಟ್ಟೇನು..? ಈ ಪ್ರಶ್ನೆಗೆ ಸಿಗ್ತಿರೋ ಉತ್ತರವೇ ಕೈ ದಾಯಾದಿ ಕಲಹ.

ಇದನ್ನೂ ವೀಕ್ಷಿಸಿ:  ಪಬ್ಜಿ ಗುಬ್ಬಿಗಳ ಲವ್ ಸ್ಟೋರಿ ಹಿಂದೆ ಷಡ್ಯಂತ್ರ..?: ಭಾರತಕ್ಕೆ ಬಂದಳಾ ಗೂಢಚಾರಿಣಿ..?