ಹಬ್ಬದ ಖುಷಿಯಲ್ಲಿದ್ದವರಿಗೆ ಡಬಲ್ ಮಾರ್ಡರ್ ಶಾಕ್..! ಅಥಿತಿ ಎದುರೇ ಹೆಂಡತಿ-ಅತ್ತೆ ಮರ್ಡರ್‌..!

ಎರಡು ಹೆಣ ಹಾಕಿ ಸೀದಾ ಪೊಲೀಸ್ ಠಾಣೆಗೆ ಹೋದ..!
ಹೆಂಡತಿ-ಅತ್ತೆಯನ್ನೇ ಕೊಂದಿದ್ದೇಕೆ ಪಾಪಿ ಗಂಡ..!
ಎಷ್ಟೇ ಬುದ್ಧಿ ಹೇಳಿದ್ರೂ ಕೇಳಿರಲಿಲ್ಲ ಹೆಂಡತಿ..!
 

First Published Sep 26, 2023, 3:08 PM IST | Last Updated Sep 26, 2023, 3:08 PM IST

ಅವರಿಬ್ಬರು ಮದುವೆಯಾಗಿ 15 ವರ್ಷವಾಗಿತ್ತು. ಇದಕ್ಕೆ ಸಾಕ್ಷಿಯಾಗಿ ಮೂವರು ಪುಟ್ಟಪುಟ್ಟ ಗಂಡು ಮಕ್ಕಳು ಕೂಡ ಆಗಿದ್ವು. ಆದರೆ ಇತ್ತೀಚೆಗೆ ಸುಖ ಸಂಸಾರದಲ್ಲಿ ಸಮಸ್ಯೆಗಳು ಆರಂಭವಾಗಿದ್ದವು. ಎಲ್ಲರ ಮನೆಯಂತೆ ಅವರ ಮನೆಯಲ್ಲೂ ಸಂಸಾರದ ಜಗಳ ಮಾಮೂಲೆಂಬಂತೆ ಇತ್ತು. ಆದರೆ ಆವತ್ತು ತಡರಾತ್ರಿ ನಡೆದ ಘಟನೆ ಮಾತ್ರ ಭಯಂಕರವಾಗಿತ್ತು. ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಪತ್ನಿ ಹಾಗೂ ಆಕೆಯ ಅತ್ತೆ ಮೇಲೆ ಪತಿ ಮಹಾರಾಯ ಪೌರುಷ ತೋರಿದ್ದ. ಪುಟ್ಟ ಪುಟ್ಟ ಮೂವರು ಮಕ್ಕಳ ಭವಿಷ್ಯವನ್ನೂ ಚಿಂತಿಸದೇ ಮಾಡಬಾರದ ಕೆಲಸ ಮಾಡಿದ್ದ. ಗಣೇಶ ಚತುರ್ಥಿ ಸಡಗರಕ್ಕೆ ಸಾಕ್ಷಿಯಾಗಬೇಕಿದ್ದ ಮನೆಯಲ್ಲಿ ಸೂತಕವನ್ನೇ ಸೃಷ್ಟಿಸಿ ಬಿಟ್ಟಿದ್ದ. ತಂದೆಯ ಕೈಯ್ಯಲ್ಲಿ ತಾಯಿ ಹಾಗೂ ಅಜ್ಜಿ ಕೊಲೆಯಾದಳು(Murder), ತಾಯಿಯನ್ನು ಕೊಲೆ ಮಾಡಿದ ತಂದೆ ಜೈಲು ಪಾಲಾದ. ಮನೆಯಲ್ಲಿ ಉಳಿದಿರೋದು ಮೂವರು ಪುಟ್ಟ ಪುಟ್ಟ ಮಕ್ಕಳು ಮಾತ್ರ. ಮೂವರು ಮಕ್ಕಳಿಗೆ ಯಾರು ದಿಕ್ಕು ಎಂಬ ಪ್ರಶ್ನೆ ಮಾತ್ರ ಕಾಡುತ್ತಿದೆ. ಆತ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ಪೊಲೀಸ್ ಪೇದೆಯಾಗಿದ್ದ. ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದ ಆತನಿಗೆ ನಾಲ್ಕು ತಿಂಗಳ ಮುದ್ದಾದ ಮಗುವಿತ್ತು. ಆದ್ರೆ ಮದುವೆ ವೇಳೆ ತನಗೆ ಪಲ್ಸರ್ ಬೈಕ್ ಕೊಡಲಿಲ್ಲ ಅನ್ನೋ ಒಂದೇ ಕಾರಣಕ್ಕೆ ಪತ್ನಿಗೆ ಕಿರುಕುಳ ನೀಡಲು ಶುರು ಮಾಡಿದ್ದ. ಆತನಿಗೆ ಮಗುವಿನ ನಗುವಿಗಿಂತ ವರದಕ್ಷಿಣೆಯದ್ದೇ ಚಿಂತೆಯಾಗಿಬಿಟ್ಟಿತ್ತು. ಅದೇ ಚಿಂತೆಯಲ್ಲಿ ಆವತ್ತು ಹೆಂಡತಿ ಮನೆಗೆ ಎಂಟ್ರಿ ಕೊಟ್ಟಿದ್ದ. ಊರಲ್ಲಿ ಜಾತ್ರೆ ಇದೆ ಮಗು ಕರೆದುಕೊಂಡು ಹೋಗ್ತೀನಿ ಅಂತಾ ಕ್ಯಾತೆ ತಗೆದಿದ್ದ. ಆದ್ರೆ ಯಾವಾಗ ಹೆಂಡತಿ ಬೇಡ ಅಂದಳೋ ಹುಟ್ಟಿಸಿದ ಅಪ್ಪನೇ 4 ತಿಂಗಳ ತನ್ನದೇ ಮಗುವಿನ ಉಸಿರು ನಿಲ್ಲಿಸಿದ್ದ. ಅದೇನೇ ಇರಲಿ ಗಣೇಶೋತ್ಸವ ಸಂಭ್ರಮ ಇರಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು, ಪಾಪಿ ತಂದೆಗೆ ಇಡೀ ಊರಿನ ಜನ ಹಿಡಿಶಾಪ ಹಾಕುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  ಮಾತು ಜೋರು.. ನಿರ್ಧಾರ ನಿಧಾನ.. ನಡೆ ನಿಗೂಢ..! ಸಿದ್ದು ಸೈಲೆಂಟ್ ಆಟದ ಹಿಂದಿದ್ಯಾ ಪೊಲಿಟಿಕಲ್ ಗೇಮ್‌ಪ್ಲಾನ್..?

Video Top Stories