ಮಾತು ಜೋರು.. ನಿರ್ಧಾರ ನಿಧಾನ.. ನಡೆ ನಿಗೂಢ..! ಸಿದ್ದು ಸೈಲೆಂಟ್ ಆಟದ ಹಿಂದಿದ್ಯಾ ಪೊಲಿಟಿಕಲ್ ಗೇಮ್‌ಪ್ಲಾನ್..?
ಕಾವೇರಿ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಸೈಲೆಂಟ್ ಆಗಿದ್ದೇಕೆ..?
ರಾಜಕೀಯ ವೈರತ್ವ ಮರೆತು ದೇವೇಗೌಡರ ಮನೆಗೆ ಹೋಗಿದ್ದರು ಸಿದ್ದು..!
ಸಿದ್ದರಾಮಯ್ಯನವರ ನಿಗೂಢ ನಡೆಯ ಹಿಂದಿದ್ಯಾ ರಾಜಕೀಯದಾಟ..?
ಸಿದ್ದರಾಮಯ್ಯನವರು ಆಡಳಿತದಲ್ಲಿ ಪಳಗಿದ ರಾಜಕಾರಣಿ. ರಾಜಕೀಯ ಅಂತ ಬಂದಾಗ್ಲೂ ಅಷ್ಟೇ, ಮಾಸ್‌ಗೂ ಸೈ, ಕ್ಲಾಸ್‌ಗೂ ಸೈ. ಆದ್ರೆ ಅದೇ ಸಿದ್ದರಾಮಯ್ಯನವರು ಕಳೆದ ಒಂದು ತಿಂಗಳಿಂದ ಕಾವೇರಿ(Cauvery) ವಿಷ್ಯದಲ್ಲಿ ಸೈಲೆಂಟಾಗಿದ್ದಾರೆ. ಕಾವೇರಿ ಅನ್ನೋದು ರಾಜ್ಯದ ಅತ್ಯಂತ ಗಂಭೀರ ವಿಚಾರ. ಕಾವೇರಿ ಜಲ ಸಂಘರ್ಷ ರಾಜ್ಯದ ಎಷ್ಟೋ ಸರ್ಕಾರಗಳನ್ನು ಬೆನ್ನು ಬಿಡದೆ ಕಾಡಿದ್ದಿದೆ. ಸರ್ಕಾರಕ್ಕೆ ಅಗ್ನಿಪರೀಕ್ಷೆಯಾಗಿ ಹಲವಾರು ಮುಖ್ಯಮಂತ್ರಿಗಳ ಕುರ್ಚಿಯನ್ನೇ ಗಢ ಗಢ ಅಂತ ಅಲುಗಾಡಿಸಿದ್ದೂ ಇದೆ. ಕಾವೇರಿ ಸಂಘರ್ಷ ಅಂದ್ರೆ ಹಾಗೇನೇ.. ಈಗ್ಲೂ ಅಂಥದ್ದೇ ಸಂಘರ್ಷ ರಾಜ್ಯ ಸರ್ಕಾರವನ್ನು ಕಾಡ್ತಾ ಇದೆ. ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಒಂದು ರೀತಿನಲ್ಲಿ ಕಾವೇರಿ ಕುಲುಮೆಯಲ್ಲಿ ಬೇಯ್ತಾ ಇದೆ. ಆದ್ರೂ ಸಿದ್ದರಾಮಯ್ಯನವರು(Siddaramaiah) ತಮ್ಮ ಎಂದಿನ ಶೈಲಿಯ ಗಟ್ಟಿತನವನ್ನು ತೋರಿಸ್ತಾ ಇಲ್ಲ. ಹಾಗ್ ನೋಡಿದ್ರೆ, ಕಾವೇರಿ ಕಾಲಂಚಿನ ರೈತ ಕುಟುಂಬದಿಂದಲೇ ಬಂದಿರೋ ಸಿದ್ದರಾಮಯ್ಯನವರಿಗೆ ಈ ಕಾವೇರಿ ವಿವಾದ ಹೊಸತೇನಲ್ಲ. ಅವ್ರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ್ಲೇ ಕಾವೇರಿ ಜಲ ವಿವಾದದ(Cauvery water dispute) ಬಿಸಿಯನ್ನು ನೋಡಿದವ್ರು. ಆದ್ರೆ ಅವತ್ತು ಸಿದ್ದರಾಮಯ್ಯನವರ ಇಟ್ಟ ಹೆಜ್ಜೆ, ಈಗ ಕಾಣ್ತಾ ಇಲ್ಲ. ಅಂದಿನ ಸಿದ್ದರಾಮಯ್ಯನವರೇ ಬೇರೆ, ಇಂದಿನ ಸಿದ್ದರಾಮಯ್ಯನವರೇ ಬೇರೆ. 2016ರಲ್ಲೂ ಸಿದ್ದರಾಮಯ್ಯನವರಿಗೆ ಕಾವೇರಿ ಕಂಟಕ ಎದುರಾಗಿತ್ತು. 2016ರಲ್ಲೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ವಿವಾದ ಭುಗಿಲೆದ್ದು ನಿಂತಿತ್ತು.* ಆಗ ಸಿದ್ದರಾಮಯ್ಯನವರು ಕಾನೂನಾತ್ಮಕ ಹೋರಾಟದಲ್ಲಿ ಬಹಳಷ್ಟು ಮುನ್ನೆಚ್ಚರಿಕೆ ವಹಿಸಿದ್ದರು. ದೆಹಲಿಯಲ್ಲಿದ್ದ ಕಾವೇರಿ ಲೀಗಲ್ ಟೀಮ್"ನ ವಕೀಲರನ್ನು 3 ಬಾರಿ ಬೆಂಗಳೂರಿಗೆ ಕರೆಸಿದ್ದರು. ಕ್ಯಾಬಿನೆಟ್ ಮೀಟಿಂಗ್ಗೆ ವಕೀಲರನ್ನು ಕರೆಸಿ ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲೇ ಚರ್ಚಿಸಿದ್ದರು. ಅಷ್ಟೇ ಅಲ್ಲ.. ರಾಜಕೀಯ ವೈರತ್ವವನ್ನು ಮರೆತು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಮನೆಗೆ ದೌಡಾಯಿಸಿದ್ರು ಸಿದ್ದು.
ಇದನ್ನೂ ವೀಕ್ಷಿಸಿ: ಹೇಗೆ ನಡೆಯುತ್ತಿದೆ ಗೊತ್ತಾ ಶತ್ರು ನಾಶ ಯಾಗ..? ಉಗ್ರ ಸಂಗ ಮಾಡಿ ಕೆಟ್ಟು ಕೂತನಾ ಟ್ರುಡೊ?