Asianet Suvarna News Asianet Suvarna News

ಮಲಗಿದ್ದವನನ್ನ ಎಬ್ಬಿಸಿ ಕೊಂದಿದ್ದು ಯಾಕೆ? ರೊಟ್ಟಿ ಕೇಳಿದ್ದೇ ತಪ್ಪಾಗಿ ಹೊಯ್ತಲ್ಲ..!

ನೇಹಾ ಹತ್ಯೆ ಬಳಿಕ ಯಾದಗಿರಿಯಲ್ಲಿ ಹಿಂದು ಯುವಕನ ಕೊಲೆ
ರೊಟ್ಟಿ ಕೇಳಿದ್ದಕ್ಕೆ ಹಿಂದು ಯುವಕ ರಾಕೇಶ್ ಖಲ್ಲಾಸ್..!
ರಾಕೇಶನ ಮನೆಗೆ ನುಗ್ಗಿ ಫಯಾಜ್ ಹಿಗ್ಗಾಮುಗ್ಗಾ ಥಳಿಸಿ ಕೊಲೆ!

ಅವನು ಕೂಲಿ ಕಾರ್ಮಿಕ. ಕಿರಾಣಿ ಅಂಗಡಿಯಲ್ಲಿ ಮೂಟೆ ಹೊತ್ತು ಜೀವನ ಮಾಡ್ತಿದ್ದ. ಹಗಲೆಲ್ಲ ದುಡಿದು ರಾತ್ರಿಯಾದ್ರೆ ಮನೆಗೆ ಬಂದು ಮಲಗಿಬಿಡ್ತಿದ್ದ. ತಾನು ಅಯ್ತು ತನ್ನ ಕೆಲಸವಾಯ್ತು ಅಂತ ಇದ್ದವನು ಆವತ್ತು ತನ್ನದೇ ಮನೆಯಲ್ಲಿ ಹೆಣವಾಗಿದ್ದ. ಆವತ್ತು ರಾತ್ರಿ ಊಟ ಮಾಡಿ ಮಲಗಿದವನ ಮನೆಗೆ ಎಂಟ್ರಿ ಕೊಟ್ಟು ಎಬ್ಬಿಸಿ ಹಂತಕರು ಕೊಂದು(Murder) ಮುಗಿಸಿದ್ರು. ನೇಹ ಕೊಲೆ ಕೇಸ್‌ನ ಕಾವಿರುವಾಗ್ಲೇ ಹಿಂದೂ ದಲಿತ ಯುವಕ(Dalith hindu youth) ರಾಕೇಶನ ಕೊಲೆ ರೊಚ್ಚಿಗೇಳುವಂತೆ ಮಾಡಿತ್ತು. ಅವನು ಒಂದು ರೊಟ್ಟಿ ಕೇಳೋಕೆ ಹೋಗಿದ್ದ. ಆದ್ರೆ ರೊಟ್ಟಿ ಕೇಂದ್ರದಲ್ಲಿ ರೊಟ್ಟಿ ಖಾಲಿ ಆಗಿದ್ರಿಂದ ಅಲ್ಲಿದ್ದ ಮಹಿಳೆ ಇಲ್ಲ ಅಂದಿದ್ಲು. ಆಗ ರಾಕೇಶ ಆಕೆಗೆ ಆವಾಜ್ ಹಾಕಿ ಬಂದಿದ್ದ. ಆದ್ರೆ ಯಾವಾಗ ಅಣ್ಣ ಬಂದನೋ ಆಕೆ ನಡೆದಿದ್ದನ್ನೆಲ್ಲಾ ಹೇಳಿದ್ಲು. ಸಿಟ್ಟಾದ ಅಣ್ಣ ಫಾಯಜ್ ಸೀದಾ ರಾಕೇಶನ ಮನೆಗೆ ನುಗ್ಗಿದ್ದ. ಮಲಗಿದ್ದ ರಾಕೇಶನನ್ನ ಎಬ್ಬಿಸಿ ಮನ ಬಂದಂತೆ ಹಲ್ಲೆ(Attack) ನಡೆಸಿದ್ದ. ಹೊಡೆಯಬಾರದ ಜಾಗಕ್ಕೆ ಒದ್ದುಬಿಟ್ಟ. ರಾಕೇಶ ಅಲ್ಲೇ ಕುಸಿದುಬಿದ್ದು ಪ್ರಾಣ ಬಿಟ್ಟ. ಇನ್ನೂ ಯಾವಾಗ ಸತ್ತನೋ ಫಯಾಜ್ ಕುಟುಂಬ ರಾಜಿ ಪಂಚಾಯ್ತಿಗೆ ಕುಳಿತಿತ್ತು. ಆದ್ರೆ ಸುದ್ದಿ ಹರಡುತ್ತಿದ್ದಂತೆ ಅಲ್ಲಿಗೆ ಪೊಲೀಸರು(Police) ಬಂದು ಫಯಾಜ್ ಹೆಡೆಮುರಿ ಕಟ್ಟಿದ್ರು.

ಇದನ್ನೂ ವೀಕ್ಷಿಸಿ:  Sam Pitroda: ಮೋದಿ ಕೈಗೆ ಮಾತಿನ ಬ್ರಹ್ಮಾಸ್ತ್ರ ಕೊಡ್ತಾ ಇರೋದ್ಯಾರು..? ಸ್ಯಾಮ್ ಪಿತ್ರೋಡಾ ಹೇಳಿಕೆಯಿಂದ ಆಗಿದ್ದೇನೇನು..?

Video Top Stories