Asianet Suvarna News Asianet Suvarna News
breaking news image

Sam Pitroda: ಮೋದಿ ಕೈಗೆ ಮಾತಿನ ಬ್ರಹ್ಮಾಸ್ತ್ರ ಕೊಡ್ತಾ ಇರೋದ್ಯಾರು..? ಸ್ಯಾಮ್ ಪಿತ್ರೋಡಾ ಹೇಳಿಕೆಯಿಂದ ಆಗಿದ್ದೇನೇನು..?

ಎದುರಾಳಿ ಮಾತನ್ನೇ ಬ್ರಹ್ಮಾಸ್ತ್ರವಾಗಿಸಿಕೊಂಡ ಮೋದಿ!
ರಾಜೀವ್ ಗಾಂಧಿ ಆಪ್ತ.. ರಾಹುಲ್ ಗಾಂಧಿ ಸಲಹೆಗಾರ!
ಪಿತ್ರಾರ್ಜಿತ ಆಸ್ತಿ ತೆರಿಗೆ ರದ್ದಾಗಿದ್ದು ಯಾಕಂತೆ ಗೊತ್ತಾ..?

ದೇಶದಲ್ಲೀಗ ಮತದಾನದ ಹಬ್ಬ ನಡೀತಿದೆ. ಮತದಾರರಿಗೆ ಇದೇನೋ ಹಬ್ಬ. ಆದ್ರೆ ಮತ ಹಾಕಿಸಿಕೊಳ್ಳೋ ರಾಜಕಾರಣಿಗಳಿಗೆ, ಇದು ಯುದ್ಧ. ಚುನಾವಣೇಲಿ ರಾಜಕೀಯ ಪಕ್ಷಗಳು ತಮ್ಮ ತಮ್ಮ ಗೆಲುವಿಗೋಸ್ಕರ ಸಮಾವೇಶ ನಡೆಸ್ತಾರೆ. ಭಾಷಣ ಮಾಡ್ತಾರೆ.ಆದ್ರೆ ಅದ್ಯಾಕೋ ಏನೋ, ಚುನಾವಣೆ ವಿಚಾರ ಅಂದ್ರೆ ಕಾಂಗ್ರೆಸ್(Congress) ಎದುರಾಳಿ ಪಾಳಯಕ್ಕೇ ಉಪಯೋಗವಾಗುವಂಥಾ ಆಯುಧ ಪ್ರಯೋಗ ಮಾಡುತ್ತೆ. ಕಳೆದ ಒಂದೂವರೆ ದಶಕಗಳಿಂದಲೂ ಇದನ್ನೇ ಮಾಡ್ಕೊಂಡ್ ಬಂದಿರೋ ಕಾಂಗ್ರೆಸ್, ಈಗಲೂ ಅದನ್ನೇ ಮಾಡಿದೆ. ಅದರ ಪ್ರಯೋಜನ ಮೋದಿ(Narendra Modi) ಪಡೀತಿದ್ದಾರೆ. ಕಾಂಗ್ರೆಸ್ ಏನಾದ್ರೂ ಸರ್ಕಾರ ರಚಿಸಿದ್ರೆ, ಇದ್ದವರ ಹತ್ರ ಜಾಸ್ತಿ ತೆರಿಗೆ ಪಡೆಯುತ್ತೆ. ಮರಣ ಹೊಂದಿದ ಮೇಲೆ ಸತ್ತವರ ಆಸ್ತಿ ಮೇಲೆ ತೆರಿಗೆ ಹಾಕುತ್ತೆ ಎಂದು ಸ್ಯಾಮ್‌ ಪಿತ್ರೋಡಾ(Sam Pitroda ) ಹೇಳಿದ್ದಾರೆ. ಒಟ್ಟಾರೆ, ಜನರನ್ನ ನೆಮ್ಮದಿಯಾಗಿರೋಕೆ ಬಿಡಲ್ಲ ಅನ್ನೋ ಅರ್ಥದಲ್ಲಿ ಮೋದಿ ಭಾಷಣ ಮಾಡ್ತಾ ಇದಾರೆ. ಜನರ ಮಧ್ಯೆ ಇದೇ ವಿಚಾರವಾಗಿಯೇ ದೊಡ್ಡ ಚರ್ಚೆಯಾಗ್ತಾ ಇದೆ. ಭಾರತದಲ್ಲಿ ಪಿತ್ರಾರ್ಜಿತ ಆಸ್ತಿಗೂ ತೆರಿಗೆ ಹಾಕ್ಬೇಕು ಅಂತ ಹೇಳಿಬಿಟ್ರು. ಅಷ್ಟು ಸಾಕಾಗಿತ್ತು, ಬಿಜೆಪಿ ನಾಯಕರು, ಕಾಂಗ್ರೆಸ್ ವಿರುದ್ಧ ದಾಳಿ ನಡೆಸೋಕೆ. ವೇದಿಕೆ ಮೇಲೆ ಮೋದಿ  ಅಬ್ಬರಿಸೋದಕ್ಕೆ. 

ಇದನ್ನೂ ವೀಕ್ಷಿಸಿ:  Rahul Ghandhi: ಅದೃಷ್ಟ ಪರೀಕ್ಷೆಗೂ ಮುನ್ನ ರಾಮಜನ್ಮಭೂಮಿಗೆ ಅಣ್ಣ-ತಂಗಿ? ಅಯೋಧ್ಯೆ ಭೇಟಿ ಹಿಂದಿನ ಗುಟ್ಟೇನು..?

Video Top Stories