Asianet Suvarna News Asianet Suvarna News

Actress Vidya Murder: ಗಂಡನ ಮನೆಗೆ ಹೋದವಳ ಮರ್ಡರ್ ..! ನ್ಯಾಯ ಕೇಳಲು ಹೋಗಿ ಹೆಣವಾಗಿಬಿಟ್ಟಳಾ..?

ಅವಳ ಕಥೆ ಮುಗಿಸಿ ಎಸ್ಕೇಪ್ ಆದ ಗಂಡ..!
ಮದುವೆಯಾಗಿ 2ನೇ ತಿಂಗಳಿಗೆ ಜಗಳ ಶುರು..!
ಅವಳ ನಟನೆಗೆ ಸಿನಿ ರಸಿಕರು ಫಿದಾ ಆಗಿದ್ರು..!

ಅವಳು ಪ್ರತಿಭಾನ್ವಿತ ನಟಿ. ಸಿಕ್ಕ ಅವಕಾಶದಲ್ಲೇ ನೋಡುಗರ ಗಮನ ಸೆಳೆದವಳು. ಇನ್ನೂ ಚಿತ್ರರಂಗದ ಜೊತೆ ಆಕೆ ರಾಜಕೀಯದಲ್ಲಿ ಆ್ಯಕ್ಟೀವ್ ಆಗಿದ್ಲು. ಕಾಂಗ್ರೆಸ್(Congress) ಪಕ್ಷದಲ್ಲಿ ನಿಷ್ಟಾವಂತ ಕಾರ್ಯಕರ್ತೆಯಾಗಿದ್ಲು. ಆಕೆಗೆ ಇಬ್ಬರು ಹೆಣ್ಣುಮಕ್ಕಳು. ಗಂಡನ ಜೊತೆ ಸಂಬಂಧ ಸರಿ ಇಲ್ಲದಿದ್ದರಿಂದ ತವರು ಮನೆಯಲ್ಲಿ ಸೆಟಲ್ ಆಗಿದ್ಲು. ಇಂಥವಳು ಬರ್ಬರವಾಗಿ ಕೊಲೆಯಾಗಿ(Murder) ಹೋಗಿದ್ದಾಳೆ. ಗಂಡನ(Husband) ಮನೆಗೆ ನ್ಯಾಯ ಕೇಳಲು ಹೋದವಳನ್ನ ಆಕೆಯ ಗಂಡ ಕೊಂದು ಮುಗಿಸಿದ್ದಾನೆ. ವಿದ್ಯಾ(actress Vidya) 2 ತಿಂಗಳ ಪ್ರಗ್ನೆಂಟ್ ಆದಾಗಿನಿಂದ ನಂದೀಶ ಅವಳಿಗೆ ಟಾರ್ಚರ್ ಕೊಡೋದಕ್ಕೆ ಶುರು ಮಾಡಿದ್ದ. ವಿದ್ಯಾ ಕೂಡ ಎಲ್ಲವನ್ನ ಸಹಿಸಿಕೊಂಡು ಹೋಗಿದ್ಲು. ಆದ್ರೆ ಇದೀಗ ಆಕೆಯ ಕಥೆಯನ್ನೇ ಮುಗಿಸಿಬಿಟ್ಟಿದ್ದಾನೆ. ಮದುವೆಯಾಗಿ 2 ತಿಂಗಳಿಗೇ ವಿದ್ಯಾ ಗರ್ಭಿಣಿಯಾದಳು. ಆಗಿನಿಂದಲೇ ಗಂಡ, ಹೆಂಡಿರ ನಡುವೆ ಜಗಳ ಶುರುವಾಗಿತ್ತು. ಎರಡು ಮಕ್ಕಳಾದಮೇಲೆ ಜಗಳ ವಿಕೋಪಕ್ಕೆ ಹೋದಾಗ ಡಿವೋರ್ಸ್ ಅಪ್ಲಿಕೇಷನ್ ಕೂಡ ಹಾಕಲಾಯ್ತು. ಆದ್ರೂ ಇಬ್ಬರೂ ಆಗ್ಗಾಗೆ ಭೇಟಿ ಮಾಡೋದು, ಗಂಡ ವಿದ್ಯಾ ಮನೆಯಲ್ಲೇ ಉಳಿದುಕೊಳ್ಳೋದು ನಡೆಯುತ್ತಲೇ ಇತ್ತು. ಆದ್ರೆ ಅದೇನು ಜಗಳವಾಯ್ತೋ ಏನೋ ಗಂಡ ವಿದ್ಯಾಳಿಗೆ ಫೋನ್ನಲ್ಲೇ ಆವಾಜ್ ಹಾಕಿದ್ದಾನೆ. ಆಕೆ ಕೂಡ ಜಗಳದ ಕೋಪದಲ್ಲಿ ಗಂಡನ ಮನೆಗೆ ಹೊರಟು ಬಂದಿದ್ದಾಳೆ. ಅದ್ರೆ ಮನೆ ಎದುರು ಬಂದವಳನ್ನ ಸುತ್ತಿಗೆ ಇಂದ ಹೊಡೆದು ಕೊಂದು ಮುಗಿಸಿದ್ದಾನೆ.

ಇದನ್ನೂ ವೀಕ್ಷಿಸಿ:  ಇಬ್ಬರೂ ಮಕ್ಕಳಿದ್ದರೂ ಆಂಟಿಯ ಸಹವಾಸ ಮಾಡಿದ್ದ..! ಆ ರಾತ್ರಿ.. ಆ ಮನೆಯಲ್ಲಿ ನಡೆದಿದ್ದೇನು..?