ಇಬ್ಬರೂ ಮಕ್ಕಳಿದ್ದರೂ ಆಂಟಿಯ ಸಹವಾಸ ಮಾಡಿದ್ದ..! ಆ ರಾತ್ರಿ.. ಆ ಮನೆಯಲ್ಲಿ ನಡೆದಿದ್ದೇನು..?

ಅವಳ ಕಣ್ಣು ತಪ್ಪಿಸಿ ಅಕ್ಕನ ಮಗಳನ್ನ ಮದುವೆಯಾಗಿದ್ದ..!
ಮದುವೆಯ ವಿಷಯ ಕೇಳಿ ಅವಳು ಕೆಂಡಮಂಡಲಳಾದಳು..!
ಮೂರು ದಿನದ ನಂತರ ಇಬ್ಬರು ಮನೆಯ್ಲಿ ಶವವಾಗಿ ಸಿಕ್ಕಿದ್ರು..!

First Published May 23, 2024, 5:24 PM IST | Last Updated May 23, 2024, 5:24 PM IST

ಮೇಲೆ ಇಡೀ ಕುಟುಂಬದ ಜವಬ್ದಾರಿಯನ್ನ ಹೊತ್ತಿದ್ದ. ಇನ್ನೂ ಒಳ್ಳೆ ಕೆಲಸದಲ್ಲಿದ್ದವನಿಗೆ ಅಕ್ಕ ತನ್ನ ಮಗಳನ್ನ ಕೊಟ್ಟು ವರ್ಷದ ಹಿಂದಷ್ಟೇ ಮದುವೆಮಾಡಿದ್ಲು. ಹಂಡತಿಯನ್ನ ತವರು ಮನೆಯಲ್ಲೇ ಬಿಟ್ಟು ತನಗೆ ಪೋಸ್ಟಿಂಗ್ ಆಗಿದ್ದ ಜಾಗದಲ್ಲೇ ಮನೆ ಮಾಡಿಕೊಂಡು ಕೆಲಸ ಮಾಡ್ತಿದ್ದ. ಆದ್ರೆ ಆವತ್ತೊಂದು ದಿನ ಆತ ಹೆಣವಾಗಿ ಸಿಕ್ಕಿದ್ದ. ತನ್ನದೇ ಮನೆಯಲ್ಲಿ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಕಂಡಿದ್ದ. ಇನ್ನೂ ಆತನಿದ್ದ ಕುಣಿಕೆಯಲ್ಲಿ ಮತ್ತೊಬ್ಬ ಹೆಂಗಸು ಕೂಡ ಪ್ರಾಣಬಿಟ್ಟಿದ್ದಳು. ಆಕೆ ಅವನ ಹೆಂಡತಿ ಆಗಿರಲಿಲ್ಲ. ಅಲ್ಲಿ ಜೊತೆಯಲ್ಲೇ ಪ್ರಾಣಬಿಟ್ಟವರು ಅಮರ ಪ್ರೇಮಿಗಳೇನೂ ಅಲ್ಲ. ಅವರಿಬ್ಬರಿಗೂ ಅವರವರದ್ದೇ ಜೀವನವಿತ್ತು. ಮಕ್ಕಳಿದ್ರೂ ಆದ್ರೂ ಇಬ್ಬರೂ ಒಂದೇ ಮನೆಯಲ್ಲಿ ಒಂದೇ ಕುಣಿಕೆಗೆ ಕೊರಳೋಡ್ಡಿದ್ರು. ಅವನು ಪೊಲೀಸ್ ಕಾನ್‌ಸ್ಟೇಬಲ್‌(Police constable) ಆದ್ರೆ ಆವಳು ಬೀದಿ ಬದಿಯಲ್ಲಿ ಪಡ್ಡು ಮಾರುತ್ತಿದ್ದ ಆಂಟಿ. ಪ್ರತೀ ನಿತ್ಯ ಪಡ್ಡು ತಿನ್ನಲು ಹೋದವನು ಅವಳ ಪ್ರೇಮ ಪಾಷಕ್ಕೆ ಸಿಲುಕಿಬಿಟ್ಟಿದ್ದ. ಇಬ್ಬರೂ ಲವ್‌ನಲ್ಲಿ(Love) ಬಿದ್ದಿದ್ರು. ಆದ್ರೆ ಈ ಆಂಟಿಯ ಲವ್ ಸ್ಟೋರಿ ಆಕೆಯ ಗಂಡನಿಗೆ(Husband) ಗೊತ್ತಾದಾಗ ಆತ ಇವಳನ್ನ ಬಿಟ್ಟುಬಿಟ್ಟಿದ್ದ. ನಂತರ ಇವರಿಬ್ಬರೂ ಒಟ್ಟಿಗೇ ಇದ್ರೂ. ಆದ್ರೆ ಒಂದು ವರ್ಷದ ಹಿಂದೆ ತನ್ನ ಪ್ರೇಯಸಿಗೆ ಹೇಳದಂತೆ ಮಹೇಶ ತನ್ನ ಅಕ್ಕನ ಮಗಳನ್ನ ಮದುವೆಯಾಗಿಬಿಟ್ಟ.. ಆದ್ರೆ ಯಾವಾಗ ಈ ಸುದ್ದಿ ಪ್ರೇಯಸಿ(Lover) ವಿಜಯಲಕ್ಷ್ಮಿಗೆ ಗೊತ್ತಾಯ್ತೋ ಮಹೇಶನ ಜೊತೆ ಜಗಳ ತೆಗೆದಳು. ಮಹೇಶ ಮತ್ತು ವಿಜಯಲಕ್ಷ್ಮಿ ಸಾವಿನ ಕಾರಣವನ್ನ ಪೊಲೀಸರು ಪತ್ತೆ ಮಾಡೇ ಮಾಡ್ತಾರೆ.. ಆದ್ರೆ ಇವರಿಬ್ಬರ ಸಾವಿನಿಂದ ಇತ್ತ ವಿಜಯಲಕ್ಷ್ಮಿ ಮಕ್ಕಳು ಅನಾಥವಾದ್ರೆ ಮಹೇಶನನ್ನ ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಹೆಣ್ಣುಮಗಳಿಗೆ ಈಗ ದಿಕ್ಕೇ ಇಲ್ಲದಂತಾಗಿದೆ.

ಇದನ್ನೂ ವೀಕ್ಷಿಸಿ:  ಇಬ್ರಾಹಿಂ ರೈಸಿ ಸಾವನ್ನು ಸಂಭ್ರಮಿಸಿದ ಇರಾನಿ ಜನ..! ಈ ಸಾವು ಆಕಸ್ಮಿಕವೋ..ಷಡ್ಯಂತ್ರವೋ..?

Video Top Stories