ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್: ಸಿಡಿ ಕೇಸ್‌ನ ಕಥಾ ನಾಯಕ ಕಾಂಗ್ರೆಸ್‌ನ ಡಿಕೆಶಿ?

ಮಹಾನಾಯಕನ ಕೈವಾಡ ಎಂದು ದೇವರಾಜೇಗೌಡ ಆರೋಪ
ಪ್ರಕರಣ ದೊಡ್ಡದು ಮಾಡುವಂತೆ ಡಿಕೆಶಿಯಿಂದ ದೊಡ್ಡ ಆಫರ್
ಡಿಕೆ ಶಿವಕುಮಾರ್ ವಿರುದ್ಧ ದೇವರಾಜೇಗೌಡ ಗಂಭೀರ ಆರೋಪ
 

Share this Video
  • FB
  • Linkdin
  • Whatsapp

ಪ್ರಜ್ವಲ್ ರೇವಣ್ಣರದ್ದು(Prajwal Revanna) ಎನ್ನಲಾಗುತ್ತಿರುವ ಕಾಮಕಾಂಡ ಪ್ರಕರಣ ದಿಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಆದ್ರೆ ಇದಕ್ಕೆ ಸಿಕ್ಕ ಟ್ವಿಸ್ಟ್ ಇಡೀ ಕೇಸ್ ಅನ್ನೇ ಉಲ್ಟಾ ಮಾಡಿದಂತೆ ಕಾಣ್ತಿದೆ. ಪೆನ್‌ಡ್ರೈವ್‌(Pendrive) ಕಥೆಗಾರನೇ ಕಾಂಗ್ರೆಸ್(Congress) ಸರ್ಕಾರ ಅನ್ನೋ ಮಹತ್ದ ಆರೋಪ ಕೇಳಿ ಬಂದಿದೆ. ಪೆನ್‌ಡ್ರೈವ್‌ ವೈರಲ್ ಪ್ರಕರಣದಲ್ಲಿ ಎಸ್‌ಐಟಿ(SIT) ಎದುರು ಹಾಜರಾಗಿದ್ದ ದೇವರಾಜೇಗೌಡರು(Lawyer Devarajegowda) ಇವತ್ತು ಬಾಂಬ್‌ಗಳನ್ನೇ ಸಿಡಿಸಿದ್ರು. ಅಷ್ಟೇ ಅಲ್ಲ ಡಿಕೆಶಿ ಜೊತೆಗಿನ ಫೋನ್ ಸಂಭಾಷಣೆಯನ್ನ ಬಿಡುಗಡೆ ಮಾಡಿದ್ದು ಹಲವು ಮಹತ್ತರ ಆರೋಪಗಳನ್ನ ಮಾಡಿದ್ದಾರೆ. ಎಲೆಕ್ಷನ್ ಹೊತ್ತಲ್ಲಿ ಹಾಸನ(Hassan) ಸಂಸದ ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ರಾಸಲೀಲೆ ವಿಡಿಯೋಗಳು ವೈರಲ್ ಆಗಿದ್ದೇ ಬಂತು.. ರಾಜ್ಯ ರಾಜಕಾರಣದಲ್ಲಷ್ಟೇ ಅಲ್ಲ ಇಡೀ ಕರ್ನಾಟಕವನ್ನೇ ಥಂಡಾ ಹೊಡೆಯುವಂತೆ ಮಾಡಿದೆ... ಇನ್ನೂ ಮೊನ್ನೆಯಷ್ಟೇ ರೇವಣ್ಣ ಕಿಡ್ನ್ಯಾಪ್ ಕೇಸ್ನಲ್ಲಿ ಅರೆಸ್ಟ್ ಆದ್ರೆ ಮಗ ಪ್ರಜ್ವಲ್ ರೇವಣ್ಣ ಇನ್ನೂ ವಿದೇಶದಿಂದ ಬೆಂಗಳೂರಿಗೆ ಬರುವ ಮನಸ್ಸು ಮಾಡಿಲ್ಲ.

ಇದನ್ನೂ ವೀಕ್ಷಿಸಿ: Narendra Modi: ಮೋದಿ ಬಳಿಕ ಉತ್ತರಾಧಿಕಾರಿಯಾಗ್ತಾರಾ ಯೋಗಿ!? ಮೋದಿ-ಯೋಗಿ..ಎಷ್ಟು ಸಾಮ್ಯತೆ? ಏನು ವ್ಯತ್ಯಾಸ ?

Related Video