Narendra Modi: ಮೋದಿ ಬಳಿಕ ಉತ್ತರಾಧಿಕಾರಿಯಾಗ್ತಾರಾ ಯೋಗಿ!? ಮೋದಿ-ಯೋಗಿ..ಎಷ್ಟು ಸಾಮ್ಯತೆ? ಏನು ವ್ಯತ್ಯಾಸ ?
ಮೋದಿಯ ಒಂದು ಭಾಷಣ ಸೃಷ್ಟಿಸಿತೇಕೆ ತಲ್ಲಣ!?
ಹೊಸ ಚರ್ಚೆಗೆ ಕಾರಣವಾಯ್ತು ಮೋದಿ ಮಾತು!
ಉತ್ತರಾಧಿಕಾರಿ ಗೊಂದಲಕ್ಕೆ ಉತ್ತರ ಸಿಕ್ಕಿತಾ..?
ಯೋಗಿ ರಾಜ್ಯವನ್ನು ಹಾಡಿ ಹೊಗಳಿದ ಮೋದಿ!
ಪ್ರಧಾನಿ ನರೇಂದ್ರ ಮೋದಿ ಅವರು, ಇತ್ತೀಚಿಗಷ್ಟೇ ಅಯೊಧ್ಯೆಗೆ(Ayodhya) ಭೇಟಿ ನೀಡಿದ್ರು. ಪ್ರಭು ಶ್ರೀರಾಮ ಚಂದ್ರನ ದರ್ಶನ ಪಡೆದ್ರು. ಜೊತೆಗೆ, ಚುನಾವಣಾ ರ್ಯಾಲಿನೂ ನಡೆಸಿದ್ರು. ಆದ್ರೆ, ಇವತ್ತು ದೇಶದಲ್ಲಿ ಹೊಸದೊಂದು ಚರ್ಚೆಗೆ ಕಾರಣವಾಗಿದ್ದು, ಮೋದಿ(Narendra Modi) ಅವರಾಡಿದ ಭಾಷಣ. ಅದು ಸಾಮಾನ್ಯರ ಕಣ್ಣಿಗೆ ಚುನಾವಣಾ ಭಾಷಣ. ಆದ್ರೆ ರಾಜಕೀಯದ ಸೂಕ್ಷ್ಮ ತಿಳಿದುಕೊಂಡೋರಿಗೆ, ದಿಕ್ಸೂಚಿ ಭಾಷಣ. ಪ್ರಧಾನಿ ನರೇಂದ್ರ ಮೋದಿ ಅವರು, ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ಮಾಡಿದ್ಮೇಲೆ, ಇದೇ ಮೊದಲ ಬಾರಿಗೆ ಅಯೋಧ್ಯೆಗೆ ಭೇಟಿ ನೀಡಿದ್ರು. ಬಳಿಕ, ಉತ್ತರ ಪ್ರದೇಶದ(Uttar Pradesh) ಇಟಾವಾದಲ್ಲಿ ಬಿಜೆಪಿ(BJP) ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದ್ರು.ಅಲ್ಲಿ ಮಾತಾಡುವಾಗ,ಮೋದಿ ಒಂದು ಮಾತು ಹೇಳಿದ್ರು.ಮೋದಿ ಅವರ ಆ ಮಾತು, ಚುನಾವಣಾ ಹಣಾಹಣಿಯಲ್ಲಿ ಹೇಳೊ ಮಾತಾಗಿ ಮಾತ್ರವೇ ಕಾಣಲಿಲ್ಲ. ಅದರ ಹಿಂದೆ ಬೇರೊಂದು ಕತೆಯೇ ಅಡಗಿದೆಯೇನೋ ಅನ್ನೋ ಚರ್ಚೆ ಶುರುವಾಯ್ತು. ಸಮಾಜವಾದಿ ಪಾರ್ಟಿ, ಕಾಂಗ್ರೆಸ್(Congress) ಪಾರ್ಟಿಗಳೆಲ್ಲಾ, ತಮ್ಮ ಭವಿಷ್ಯಕ್ಕೋಸ್ಕರ ಪರದಾಡ್ತಾ ಇದ್ರೆ, ನಾನೂ ಮತ್ತೆ ಯೋಗಿ ಆದಿತ್ಯನಾಥ್(Yogi Adityanath), ಇಬ್ಬರೂ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ, ಅವರ ಒಳಿತಿಗಾಗಿ ಹೋರಾಡ್ತಾ ಇದೀವಿ ಅಂತ ಹೇಳಿದ್ರು. ಈ ಮಾತುಗಳನ್ನೇ ಹೇಳ್ತಾ ಹೇಳ್ತಾ ಮೋದಿ ಈ ಬಾರಿ ಭಾವುಕರಾಗಿಬಿಟ್ರು.
ಇದನ್ನೂ ವೀಕ್ಷಿಸಿ: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್! ರಾಹುಲ್ ಗಾಂಧಿ ವಿರುದ್ಧ ಏಕವಚನದಲ್ಲೇ ಕಿಡಿಕಾರಿದ ಹೆಚ್‌ಡಿಕೆ!