Asianet Suvarna News Asianet Suvarna News

ಕತ್ತು ಕೊಯ್ದು ಎಸ್ಕೇಪ್​​ ಆದ ಪ್ರೇಮಿ: ಮಲಗಿದ್ದಲ್ಲೇ ಹೆಣವಾದಳು ಅಮ್ಮ ಇಲ್ಲದ ತಬ್ಬಲಿ ಮಗಳು

ಆಕೆಗಿನ್ನು 20 ವರ್ಷ, ತಾನಾಯ್ತು ತನ್ನ ಪಾಡಾಯ್ತು ಅಂತ ಇದ್ದವಳು, ಆಕೆಯ ಅಮ್ಮ 4 ವರ್ಷದ ಹಿಂದೆಯೇ ಅನಾರೋಗ್ಯದಿಂದ ಸಾವೀಗೀಡಾಗಿದ್ರು. ಹೀಗಾಗಿ ಅಜ್ಜಿ ನೆರಳಲ್ಲಿ ವಾಸವಿದ್ದ ಆಕೆ ಮಲಗಿದ್ದಲ್ಲಿಯೇ ಮರ್ಡರ್ ಆಗಿದ್ದಳು. 

ಅವಳು 20 ವರ್ಷದ ಮುಗ್ಧ ಹುಡುಗಿ... ಅಮ್ಮ ಇಲ್ಲದ ತಬ್ಬಲಿ.. ಅಜ್ಜಿಯ ನೆರಳಲ್ಲಿ ಬದುಕುತ್ತಿದ್ದ ಅವಳು ಓದನ್ನ ಅರ್ಧಕ್ಕೆ ನಿಲ್ಲಿಸಿ ಕ್ಯಾಟರಿಂಗ್​​ ಕೆಲಸಕ್ಕೆ ಸೇರಿಕೊಂಡು ಮನೆಗೆ ಆಧಾರವಾಗಿದ್ಲು.. ತಾನಾಯ್ತು ತನ್ನ ಕೆಲಸವಾಯ್ತು ಅಂತ ಇದ್ದವಳು ಆವತ್ತು ಬೆಳ್ಳಂಬೆಳಗ್ಗೆ ಮರ್ಡರ್​​ ಆಗಿಬಿಟ್ಟಿದ್ದಳು.. ಹಂತಕ ಮಲಗಿದ್ದವಳ ಮೇಲೆಯೇ ಎರಗಿ ಚಿರನಿದ್ರೆಗೆ ಕಳುಹಿಸಿಬಿಟ್ಟಿದ್ದ.. ಇನ್ನೂ ಇದು ನಡೆದಿದ್ದು ತಿಂಗಳ ಹಿಂದಷ್ಟೇ ಬರ್ಬರವಾಗಿ ಕೊಲೆಯಾಗಿದ್ದ ನೇಹಾ ಹಿರೇಮಠಳ ಮನೆಯಿಂದ ಕೂಗಳತೆ ದೂರದಲ್ಲಿ.. ಆವತ್ತಿನ ಘಟನೆಯಿಂದ ಹುಬ್ಬಳಿ ಜನ ಹೊರಬರುವ ಮೊದಲೇ ಮತ್ತೊಂದು ಬ್ರೂಟಲ್​ ಮರ್ಡರ್​​ ಅದೇ ಏರಿಯಾದಲ್ಲಿ ನಡೆದು ಹೋಗಿದೆ.. ಹೀಗೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಮತ್ತೊಂದು ಅಮಾಯಕ ಹೆಣ್ಣುಮಗಳ ಬರ್ಬರ ಕೊಲೆಯ ಕಥೆಯೇ ಇವತ್ತಿನ ಎಫ್​.ಐ.ಆರ್​​..