ಕಳಚಿ ಬಿತ್ತು ಹೋರಾಟಗಾರ್ತಿಯ ಮುಖವಾಡ: ಸಲೂನ್‌ನಲ್ಲಿ ರೆಡಿಯಾಗಿತ್ತು ಆಕೆಯ ಮಾಸ್ಟರ್ ಪ್ಲಾನ್!

ಬಿಜೆಪಿ ಟಿಕೆಟ್ ಕೊಡುಸ್ತೀನಿ ಅಂದು ನಾಮ ಹಾಕಿದ  ಚೈತ್ರಾ!
ಉದ್ಯಮಿ ಗೋವಿಂದ ಬಾಬು ಪೂಜಾರಿಗೆ 5 ಕೋಟಿ ವಂಚನೆ..!
ಹೇಗೆ ಸಿದ್ಧವಾಗಿತ್ತು.? ಹೇಗಿತ್ತು..?  ಚೈತ್ರಾ ಮಾಸ್ಟರ್ ಪ್ಲಾನ್?

Share this Video
  • FB
  • Linkdin
  • Whatsapp

ಚೈತ್ರಾ ಕುಂದಾಪುರ.. ಕಳೆದ ಐದಾರು ವರ್ಷಗಳಿಂದ ರಾಜ್ಯದಲ್ಲಿ ಮೆಲ್ಲಮೆಲ್ಲಗೆ ಸದ್ದಾಗೋಕೆ ಶುರುವಾದ ಹೆಸರಿದು. ನೋಡನೋಡ್ತಿದ್ದ ಹಾಗೆ, ಧಾರ್ಮಿಕ ಕಾರ್ಯಕ್ರಮಗಳಾಗ್ತಾ ಇದಾವೆ ಅಂದ್ರೆ, ಅಲ್ಲಿನ ವೇದಿಕೆ ಮೇಲೆ ನಿಂತು ಭಾಷಣ ಮಾಡೋಕೆ ನಿಂತಿದ್ರು. ಹಿಂದೂ ಧರ್ಮದ ಬಗ್ಗೆ ಮಾತಾಡ್ತಾ ಮಾತಾಡ್ತಾ, ಹಿಂದೂ ನಾಯಕಿಯೇ ಆಗೋದ್ರು. ಜನ ಅವತ್ತೇ ಎಚ್ಚರಗೊಂಡಿದ್ದಿದ್ರೆ, ಹೀಗೆ ಬಿಟ್ಟಿ ಮಾತಾಡೋರನ್ನ ಕಟ್ಟಿಹಾಕೋಕೆ ಸಾಧ್ಯವಿತ್ತೋ ಏನೋ. ಆದ್ರೆ, ಇಂಥವರಿಗೆ ಸಿಕ್ಕ ಇಮೇಜೂ, ಬೂಮೂ ಇವತ್ತು, ಸಮಾಜದಲ್ಲಿ ಏನೇನಲ್ಲಾ ಅನಾಹುತಕ್ಕೆ ಕಾರಣವಾಗ್ಬೋದು ಅನ್ನೋಕೆ ಈಗೊಂದು ಎಕ್ಸಾಂಪಲ್ ಸಿಕ್ಕಂತಾಗಿದೆ. ತಾನೇ ಹಿಂದೂ ಲೀಡರ್ ಅನ್ನೋ ಸೋಗಿನಲ್ಲಿದ್ದ ಚೈತ್ರಾ ಕುಂದಾಪುರ(Chaitra Kundapur) ಮುಖವಾಡ ಈಗ ಬಯಲಾಗಿದೆ. ಕೋಟಿ ಕೋಟಿ ಹಣ ಪೀಕಿದ ಕೇಸಲ್ಲಿ, ವಿಲವಿಲ ಒದ್ದಾಡೋ ಹಾಗಾಗಿದೆ. ಚೈತ್ರಾ ಕುಂದಾಪುರ ನಾಲ್ವರು ಹುಡುಗರ ಟೀಂ ಒಂದನ್ನ ಕಟ್ಟಿಕೊಂಡು 5 ಕೋಟಿ ಪಂಗನಾಮ ಹಾಕೋಕೆ ಮುಂದಾಗಿದ್ರು. ಈಗ ಅದೇ ಕೇಸ್ ಸಿಸಿಬಿ ಅಧಿಕಾರಿಗಳಿಂದ(CCB officials) ತನಿಖೆಗೊಳಗಾಗಿದೆ. ಹಿಂದೂ ನಾಯಕಿ ಚೈತ್ರಾ ಕುಂದಾಪುರನಾ ಸಿಸಿಬಿ ವಶಕ್ಕೆ ಪಡೆದಿದೆ. ಒಂದೊಂದು ವಿಚಾರ ಬಯಲಾದಾಗ್ಲೂ ಒಂದೊಂದು ವಿಸ್ಫೋಟನಕಾರಿ ಸಂಗತಿಗಳು ಆಚೆ ಬರ್ತಿದ್ದಾವೆ.

ಇದನ್ನೂ ವೀಕ್ಷಿಸಿ: ಸತ್ಯ-ಮಿಥ್ಯಗಳ ಮಧ್ಯೆ ಏನಿದು ಮಹಿಷ ದಸರಾ..? ಏನಿದರ ಮರ್ಮ..?

Related Video