ಮೂರು ದಿನ ನಾಪತ್ತೆಯಾದವಳು ಸಿಕ್ಕಿದ್ದು ಹೆಣವಾಗಿ: ರುಂಡ.. ಮುಂಡ ಕತ್ತರಿಸಿ ಒಂದೊಂದು ದಿಕ್ಕಿಗೆ ಎಸೆದಿದ್ರು..!

ಒಂಟಿ ಮಹಿಳೆಯನ್ನ ಕೊಂದು ಪೀಸ್ ಪೀಸ್ ಮಾಡಿದ್ರು..!
ಹಂತಕರನ್ನ ಹಿಡಿಯಲು ಹೋದ್ರೆ ಕಲ್ಲೆಸೆದ್ರು ಗ್ರಾಮಸ್ಥರು..!
ಮಹಿಳೆಯನ್ನು ಕೊಂದವರು ಪಕ್ಕದ ಮನೆಯಲ್ಲೇ ಇದ್ರು..!

Share this Video
  • FB
  • Linkdin
  • Whatsapp

ಆಕೆ 52 ವರ್ಷದ ಮಹಿಳೆ ಗಂಡ ಸತ್ತು ವರ್ಷಗಳೇ ಕಳೆದಿವೆ. ಮನೆಗೆಲಸ ಮಾಡಿಕೊಂಡು ಒಂಟಿಯಾಗಿ ಜೀವನ ನಡೆಸುತ್ತಿದ್ಲು. ಸರ್ಕಾರ ಆಶ್ರಯ ಯೋಜನೆಯಡಿಯಲ್ಲಿ ಕೊಟ್ಟಿದ್ದ ಮನೆಯಲ್ಲೇ ಒಂದೆರಡು ಪೋರ್ಷನ್ ಅನ್ನ ಬಾಡಿಗೆ ಕೊಟ್ಟಿಕೊಂಡು ತಾನಾಯ್ತು ತನ್ನ ಪಾಡಾಯ್ತು ಅಂತ ಇದ್ದವಳು.. ಆದ್ರೆ ಆವತ್ತೊಂದು ದಿನ ಒಂಟಿಯಾಗಿದ್ದ ಆ ಮಹಿಳೆ ನಾಪತ್ತೆಯಾಗಿದ್ದಳು. ಆಕೆಯ ಮಕ್ಕಳು ಹುಡುಕಬಾರದ ಜಾಗದಲ್ಲೆಲ್ಲಾ ಹುಡುಕಾಡಿದ್ರು . ಆದ್ರೆ ಮಹಿಳೆ ಮಾತ್ರ ಸಿಕ್ಕಿರಲಿಲ್ಲ. ಹೀಗಿರುವಾಗ್ಲೇ ಎರಡ್ಮೂರು ದಿನಗಳ ನಂತರ ಆ ಮಹಿಳೆಯ ಮನೆ ಹಿಂದೆ ಇದ್ದ ಕಸದ ತೊಟ್ಟಿಯಿಂದ ವಾಸನೆ ಬರೋದಕ್ಕೆ ಶುರುವಾಗುತ್ತೆ. ಹೋಗಿ ನೋಡಿದ್ರೆ ಮಹಿಳೆಯ ಡೆಡ್ ಬಾಡಿ... ರುಂಡ ಇಲ್ಲ ಕೈಕಾಲುಗಳೂ ಇಲ್ಲ.. ಆದ್ರೆ ಆ ಮುಂಡ ಕಾಣೆಯಾಗಿದ್ದ ಮಹಿಳೆಯದ್ದೇ ಅನ್ನೋದು ಗೊತ್ತಾಗುತ್ತೆ. ಪೊಲೀಸರು ತನಿಖೆಗಿಳಿಯುತ್ತಾರೆ.ಬಿಹಾರದಿಂದ ಇಂದಲ್ ಕುಮಾರ್‌ನನ್ನ ಬಂಧಿಸಿ ತಂದು ಪೊಲೀಸರು ವಿಚಾರಣೆ ಶುರು ಮಾಡ್ತಾರೆ. ಆಗ ಇಂದಲ್ ಕುಮಾರ್ ಕೊಟ್ಟ ಒಂದೊಂದು ಹೇಳಿಕೆಗಳು ಪೊಲೀಸರ ತಲೆ ತಿರುಗುವಂತೆ ಮಾಡುತ್ತವೆ. ಆಸ್ತಿಗಾಗಿ ಮಹಿಳೆಯನ್ನ ಆರು ಜನ ಬಿಹಾರಿ ಯುವಕರು ಕೊಲೆ ಮಾಡಿದ್ದಾರೆ. ಸದ್ಯ ಓರ್ವನನ್ನು ಪೊಲೀಸರು ಬಂಧಿಸಿದ್ದು, ಇನ್ನುಳಿದ ಆರೋಪಿಗಳಿಗೆ ಬನ್ನೇರುಘಟ್ಟ ಪೊಲೀಸರು ಬಲೆ ಬೀಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಇಷ್ಟರಲ್ಲೇ ದೊರೆಯಲಿದೆಯಂತೆ ಗುಡ್ ನ್ಯೂಸ್! : ಕಡಿಮೆಯಾಗುತ್ತಾ ಪೆಟ್ರೋಲ್.. ಡೀಸೆಲ್ ರೇಟು!

Related Video