Asianet Suvarna News Asianet Suvarna News

ದರ್ಶನ್​​​ ಇಬ್ಬರನ್ನು ಮೇಂಟೇನ್​ ಮಾಡ್ತಿಲ್ವಾ, ನಾನೂ ಮಾಡ್ತೀನಿ..! ಇದು ಹೆಂಡತಿಯನ್ನ ಕೊಂದ ದರ್ಶನ್​ ಫ್ಯಾನ್​ ಕಥೆ..!

ರೇಣುಕಾಸ್ವಾಮಿ ಕೊಲೆ ಮಾಡಿದ ಆರೋಪದಡಿ ನಟ ದರ್ಶನ್ ಈಗಾಗಲೇ ಜೈಲು ಸೇರಿದ್ದಾರೆ. ಇದೀಗ ದರ್ಶನ್ ಅನುಕರಿಸಿದ ಅಭಿಮಾನಿಯೊಬ್ಬ ಪತ್ನಿ ಸಾವಿಗೆ ಕಾರಣವಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

First Published Sep 8, 2024, 11:12 AM IST | Last Updated Sep 8, 2024, 11:58 AM IST

ಬೆಂಗಳೂರು: ಅದೊಂದು ಸುಂದರ ಸಂಸಾರ. ಗಂಡ ಹೆಂಡತಿ ಮತ್ತು ಪುಟ್ಟ ಮಗು. ಗಂಡ ಐಟಿ ಕಂಪನಿಯಲ್ಲಿ ಕೆಲಸ.. ಕೈ ತುಂಬಾ ಸಂಬಳ. ಹೆಂಡತಿ ಮಗುವನ್ನ ನೋಡಿಕೊಂಡಿದ್ದಳು. ಆದ್ರೆ ಆವತ್ತು ಬಾಥ್​​ರೂಮ್​ಗೆ ಹೋದ ಹೆಂಡತಿ ಇದ್ದಕ್ಕಿದ್ದಂತೆ ಪೆಟ್ರೋಲ್​​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಳು. ನೋಡ ನೋಡ್ತಿದ್ದಂತೆ ಆ ಹೆಣ್ಣುಮಗಳು ಬೆಂಕಿಯಲ್ಲಿ ಬೆಂದು ಹೋದಳು.

ಈ ಕೇಸ್‌ನ ಕುರಿತಾದ ಇನ್ನಷ್ಟು ಮಾಹಿತಿ: Bengaluru: 'ರತಿಯಂತ ಹೆಂಡ್ತಿ ಇದ್ರೂ ಮತ್ತೊಬ್ಬಳ ಆಸೆಗೆ ಬಿದ್ದ..' ಗಂಡನ ಕಾಟಕ್ಕೆ ಬೇಸತ್ತು ಜೀವನಕ್ಕೆ ಗುಡ್‌ಬೈ ಎಂದ ಪತ್ನಿ!

ಆದ್ರೆ ಮನೆಯಲ್ಲೇ ಇದ್ದ ಗಂಡ ಶಾಕ್​ ಆಗಿ ಕೂತುಬಿಟ್ಟಿದ್ದ. ಇನ್​​​ಫ್ಯಾಕ್ಟ್​​ ಹೆಂಡತಿ ಬೆಂಕಿ ಹಚ್ಚಿಕೊಳ್ಲಲು ಕಾರಣನೇ ಗಂಡ.. ಗಂಡ ತನ್ನ ಬಾಸ್​​ ದರ್ಶನ್​ ರೀತಿ ಮಾಡ್ತೀನಿ ಅಂತ ಹೋಗಿ ಇವತ್ತು ಹೆಂಡತಿಯನ್ನೇ ನುಂಗಿಕೊಂಡಿದ್ದಾನೆ. ಅಷ್ಟಕ್ಕೂ ಏನಿದು ದರ್ಶನ್​ ಫ್ಯಾನ್​ ಕಥೆ..? ಆ ಹೆಣ್ಣುಮಗಳ ಸಾವಿಗೆ ಕಾರಣವಾದ್ರೂ ಏನು..? ಒಬ್ಬ ಅಮಾಯಕ ಹೆಣ್ಣುಮಗಳೊಬ್ಬಳ ದುರಂತ ಅಂತ್ಯದ ಕಥೆ ಇಲ್ಲಿದೆ ನೋಡಿ

ಈ ಕೇಸ್‌ನ ಕುರಿತಾದ ಇನ್ನಷ್ಟು ಮಾಹಿತಿ: Bengaluru: 'ಸಂಬಂಧ ಅಂದ್ಕೊಂಡು ಹೆಣ್ಣು ಕೊಟ್ವಿ, ಹೆಣ್ಣು ಹೆತ್ತವರ ಸಂಕಟ ಅವನನ್ನ ಸುಮ್ನೆ ಬಿಡಲ್ಲ..' ಮೃತ ಅನುಶಾ ತಾಯಿ ರೋದನ!