Asianet Suvarna News Asianet Suvarna News

ಪಿಂಕ್ ಬಾಲ್ ಟೆಸ್ಟ್: ಮೊದಲ ದಿನದ ಹೈಲೈಟ್ಸ್

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ತಂಡಕ್ಕೆ ಟೀಂ ಇಂಡಿಯಾ ವೇಗಿಗಳು ಆಘಾತ ನೀಡಿದರು. ಇಶಾಂತ್ 5 ವಿಕೆಟ್ ಪಡೆದರೆ, ಉಮೇಶ್ 3 ಹಾಗೂ ಶಮಿ 2 ವಿಕೆಟ್ ಪಡೆದರು. ಬಾಂಗ್ಲಾದೇಶದ ಮೂವರು ಬ್ಯಾಟ್ಸ್’ಮನ್’ಗಳನ್ನು ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್’ಮನ್’ಗಳು ಎರಡಂಕಿ ಮೊತ್ತ ದಾಖಲಿಸಲಿಲ್ಲ. 

ಕೋಲ್ಕತಾ(ನ.23): ಭಾರತ-ಬಾಂಗ್ಲಾದೇಶ ನಡುವಿನ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸಂಪೂರ್ಣ ಮೇಲುಗೈ ಸಾಧಿಸಿದೆ. ಮೊದಲ ದಿನವೇ ಬಾಂಗ್ಲಾದೇಶವನ್ನು ಆಲೌಟ್ ಮಾಡಿದ ಭಾರತ, ಆ ಬಳಿಕ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿದೆ.

ಪಿಂಕ್ ಟೆಸ್ಟ್: ಅಪರೂಪದ ದಾಖಲೆ ಬರೆದ ಕೊಹ್ಲಿ-ಸಾಹ

ಹೌದು, ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ತಂಡಕ್ಕೆ ಟೀಂ ಇಂಡಿಯಾ ವೇಗಿಗಳು ಆಘಾತ ನೀಡಿದರು. ಇಶಾಂತ್ 5 ವಿಕೆಟ್ ಪಡೆದರೆ, ಉಮೇಶ್ 3 ಹಾಗೂ ಶಮಿ 2 ವಿಕೆಟ್ ಪಡೆದರು. ಬಾಂಗ್ಲಾದೇಶದ ಮೂವರು ಬ್ಯಾಟ್ಸ್’ಮನ್’ಗಳನ್ನು ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್’ಮನ್’ಗಳು ಎರಡಂಕಿ ಮೊತ್ತ ದಾಖಲಿಸಲಿಲ್ಲ. 

ಗಮನಿಸಿದ್ರಾ..? ಟೆಸ್ಟ್‌ನಲ್ಲಿ ಮೊದಲ ಬಾರಿ 2 ಬದಲಿ ಆಟಗಾರರು..!

ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಮೊದಲ ದಿನದಾಟ ಹೇಗಿತ್ತು ಎನ್ನುವುದರ ಕಂಪ್ಲೀಟ್ ವಿವರ ಇಲ್ಲಿದೆ ನೋಡಿ...
 

Video Top Stories