Virat Kohli

(Search results - 1584)
• IPL8, Aug 2020, 4:43 PM

ಈ ಸಲ ಕಪ್ ನಮ್ದೇ ಅಂದ RCB ಅಭಿಮಾನಿ: ವಾರ್ನರ್‌ನಿಂದ ಕೂಲ್‌ ರಿಯಾಕ್ಷನ್..!

ಐಪಿಎಲ್ ಯಾವಾಗ ಎಂದು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಈ ಸುದ್ದಿ ಕುಣಿದು ಕುಪ್ಪಳಿಸುವಂತೆ ಮಾಡಿದೆ. ಇದೀಗ ದೇಶದಲ್ಲಿ ಹಾಗೂ ವಿದೇಶಗಳಲ್ಲಿ ಐಪಿಎಲ್ ಜ್ವರ ನಿಧಾನವಾಗಿ ಕಾವೇರಲಾರಂಭಿಸಿದೆ. ಐಪಿಎಲ್ ಟೂರ್ನಿ ಆಯೋಜನೆ ಖಚಿತವಾಗುತ್ತಿದ್ದಂತೆ ಹಲವು ಪ್ರಮುಖ ಆಟಗಾರರು ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಭಾಗವಹಿಸುವುದಕ್ಕೆ ಎದುರು ನೋಡುತ್ತಿರುವುದಾಗಿ ಹೇಳಿದ್ದರು.

Chopra said that RCB has a limited bowling attack, but it can come good in the UAE due to the bigger grounds and he also said that spinners would have a big role to play in this year's edition.

IPL8, Aug 2020, 4:01 PM

ವಿರಾಟ್ ನೇತೃತ್ವದ RCB ಪರ ಆಡಲು ತುದಿಗಾಲಿ ನಿಂತಿದ್ದೇನೆ ಎಂದ ವಿಸ್ಫೋಟಕ ಬ್ಯಾಟ್ಸ್‌ಮನ್..!

2018ರಲ್ಲಿ ಬಾಲ್ ಟ್ಯಾಂಪರಿಂಗ್ ವಿವಾದದ ಬಳಿಕ ಸೀಮಿತ ಓವರ್‌ಗಳ ತಂಡದ ನಾಯಕನನ್ನಾಗಿ ಆ್ಯರೋನ್ ಫಿಂಚ್ ಅವರನ್ನು ನೇಮಕ ಮಾಡಲಾಗಿದೆ. ಈ ಅವಕಾಶವನ್ನು ಎರಡು ಕೈಯಲ್ಲಿ ಬಾಚಿಕೊಂಡ ಫಿಂಚ್ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಸೆಮಿಫೈನಲ್‌ವರೆಗೂ ಯಶಸ್ವಿಯಾಗಿ ಮುನ್ನಡೆಸಿದ್ದರು.

IPL 2020 Orange Cap

IPL6, Aug 2020, 5:16 PM

IPL 2020: ಈ ಐವರು ಬ್ಯಾಟ್ಸ್‌ಮನ್‌ಗಳು ಈ ಬಾರಿ ಆರೆಂಜ್ ಕ್ಯಾಪ್ ಗೆಲ್ಲಬಲ್ಲರು..!

ಬೆಂಗಳೂರು: ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾಗಲಿದೆ. ಈ ಹಿಂದೆ 2014ರಲ್ಲಿ ಯುಎಇನಲ್ಲಿ ಅರ್ಧ ಟೂರ್ನಿ ಯುಎಇನಲ್ಲಿ ನಡೆದಿತ್ತು.
ಹೊಡಿ ಬಡಿ ಆಟಕ್ಕೆ ಹೆಸರುವಾಸಿಯಾದ ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದ ತಂಡವೇ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.  ಯುಎಇ ಪಿಚ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತ ಪ್ರದರ್ಶನ ತೋರಿದ್ದಾರೆ. ಈ ಬಾರಿ ಯಾವ ಆಟಗಾರರು ಆರೆಂಜ್ ಕ್ಯಾಪ್(ಗರಿಷ್ಠ ರನ್ ಬಾರಿಸುವ ಆಟಗಾರ) ಗೆಲ್ಲಬಹುದು ಎನ್ನುವುದನ್ನು ನೋಡೋಣ ಬನ್ನಿ.

করোনায় ক্ষতিগ্রস্তদের সাহায্যে ফেসবুকের উদ্যোগে ভার্চুয়াল কনসার্ট,বলি তারকাদের সঙ্গে যোগ দেবেন কোহলি, রোহিতরা

Cricket6, Aug 2020, 10:39 AM

ಏಕದಿನ ರ‍್ಯಾಂಕಿಂಗ್ ಅಗ್ರ ಸ್ಥಾನ ಉಳಿಸಿಕೊಂಡ ಕೊಹ್ಲಿ-ರೋಹಿತ್

871 ರೇಟಿಂಗ್ ಅಂಕಗಳೊಂದಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲೇ ಭದ್ರವಾಗಿದ್ದರೆ, 855 ರೇಟಿಂಗ್ ಅಂಕ ಹೊಂದಿರುವ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲೇ ಮುಂದುವರೆದಿದ್ದಾರೆ.

Eoin Morgan

Cricket5, Aug 2020, 5:24 PM

ಧೋನಿ ಹೆಸರಿನಲ್ಲಿದ್ದ ಅಪರೂಪದ ವಿಶ್ವದಾಖಲೆ ಅಳಿಸಿ ಹಾಕಿದ ಇಂಗ್ಲೆಂಡ್ ನಾಯಕ ಮಾರ್ಗನ್..!

ದಾಖಲೆಗಳು ಇರುವುದೇ ಬ್ರೇಕ್ ಮಾಡುವುದಕ್ಕೆ ಎನ್ನುವ ಮಾತಿದೆ. ಇದೀಗ ಕೆಲವು ವರ್ಷಗಳಿಂದ ಮಾಜಿ ನಾಯಕ ಧೋನಿ ಹೆಸರಿನಲ್ಲಿದ್ದ ದಾಖಲೆಯನ್ನು ಅಳಸಿಹಾಕುವಲ್ಲಿ ಇಂಗ್ಲೆಂಡ್ ಏಕದಿನ ತಂಡದ ನಾಯಕ ಇಯಾನ್ ಮಾರ್ಗನ್ ಯಶಸ್ವಿಯಾಗಿದ್ದಾರೆ.
ಹೌದು, ಐರ್ಲೆಂಡ್ ವಿರುದ್ಧದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಮಾರ್ಗನ್ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ನಾಯಕ ಎನ್ನುವ ದಾಖಲೆ ಬರೆದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕನಾಗಿ ಧೋನಿ 211 ಸಿಕ್ಸರ್ ಬಾರಿಸಿದ್ದರು. ಇದೀಗ ಆ ದಾಖಲೆ ಮಾರ್ಗನ್ ಪಾಲಾಗಿದೆ. ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ ಆಟಗಾರರ ಪಟ್ಟಿಯನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 117  ಸಿಕ್ಸರ್‌ಗಳೊಂದಿಗೆ 11ನೇ ಸ್ಥಾನದಲ್ಲಿದ್ದು, ಮಾರ್ಗನ್ ಹಿಂದಿಕ್ಕುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

Kohli is all set to participate in the upcoming edition of the Indian Premier League (IPL 2020)

Cricket1, Aug 2020, 11:39 AM

ಕೊಹ್ಲಿಯನ್ನು ಅರೆಸ್ಟ್ ಮಾಡಿ ಎಂದು ಕೋರ್ಟಲ್ಲಿ ಅರ್ಜಿ!

ಆನ್‌ಲೈನ್‌ನಲ್ಲಿ ಜೂಜಾ​ಡಲು ಹಣ ಪಡೆದು, ಬಾಕಿ ನೀಡಲು ಸಾಧ್ಯ​ವಾ​ಗದ್ದಕ್ಕೆ ಯುವ​ಕ​ನೊಬ್ಬ ಆತ್ಮ​ಹತ್ಯೆ ಮಾಡಿ​ಕೊಂಡ ಪ್ರಸಂಗವನ್ನು ವಕೀ​ಲ​ರು ದೂರಿನಲ್ಲಿ ಉಲ್ಲೇಖಿ​ಸಿ​ದ್ದಾರೆ. ಈ ಪ್ರಕ​ರಣದ ವಿಚಾರಣೆ ಮಂಗ​ಳ​ವಾರಕ್ಕೆ ನಿಗ​ದಿ​ಯಾ​ಗಿದೆ.

লকডাউনে অনুষ্কার সঙ্গে কাটানো সেরা মুহূর্তের কথা জানালেন বিরাট কোহলি

Cricket27, Jul 2020, 8:33 AM

ಅನುಷ್ಕಾ ಹುಟ್ಟುಹಬ್ಬ ವಿಶೇಷ ಗಿಫ್ಟ್ ನೀಡಿದ್ದ ಕೊಹ್ಲಿ..!

ದೇಶದಲ್ಲಿ ಕೊರೋನಾ ವೈರಸ್ ಹೆಚ್ಚುತ್ತಿರುವ ಹಿನ್ನೆಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಹೀಗಾಗಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ.

ben stokes

Cricket21, Jul 2020, 6:10 PM

2ನೇ ಟೆಸ್ಟ್ ಮುಗಿದ ಬೆನ್ನಲ್ಲೇ ಐಸಿಸಿ ನೂತನ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪ್ರಕಟ..!

ಕೊರೋನಾ ಭೀತಿಯಿಂದಾಗಿ ಸ್ತಬ್ಧವಾಗಿದ್ದ ಕ್ರಿಕೆಟ್ ಚಟುವಟಿಕೆಗಳು ಕ್ರಿಕೆಟ್ ಜನಕರ ನಾಡಾದ ಇಂಗ್ಲೆಂಡ್‌ನಲ್ಲೇ ಆರಂಭವಾಗಿದೆ. ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಜಂಟಲ್‌ಮನ್ ಕ್ರೀಡೆಗೆ ಮತ್ತಷ್ಟು ಮೆರುಗನ್ನು ಹೆಚ್ಚಿಸಿವೆ.
ಇದೀಗ ಎರಡನೇ ಟೆಸ್ಟ್ ಪಂದ್ಯ ಮುಕ್ತಾಯವಾಗಿದ್ದು, ಆತಿಥೇಯ ಇಂಗ್ಲೆಂಡ್ ತಂಡ 113 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಎರಡನೇ ಟೆಸ್ಟ್ ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಐಸಿಸಿ ಬ್ಯಾಟ್ಸ್‌ಮನ್‌ಗಳ ನೂತನ ರ‍್ಯಾಂಕಿಂಗ್ ಬಿಡುಗಡೆಗೊಳಿಸಿದ್ದು, ಬೆನ್ ಸ್ಟೋಕ್ಸ್ 6 ಸ್ಥಾನ ಮೇಲೇರಿ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್ ಟಾಪ್ 10 ರ‍್ಯಾಂಕಿಂಗ್ ಬ್ಯಾಟ್ಸ್‌ಮನ್‌ಗಳ ಪಟ್ಟಿಯನ್ನು ಮುಂದಿಡುತ್ತಿದೆ ನೋಡಿ.

Dhoni-Kohli-Rohit

Cricket20, Jul 2020, 6:49 PM

ಅತಿ ಹೆಚ್ಚು ಸಂಪಾದಿಸುವ ಟಾಪ್ 10 ಟೀಂ ಇಂಡಿಯಾ ಕ್ರಿಕೆಟಿಗರಿವರು..!

ಭಾರತದಲ್ಲಿ ಕ್ರಿಕೆಟ್ ಬರೀ ಕ್ರೀಡೆಯಾಗಿ ಉಳಿದಿಲ್ಲ, ಅದೊಂದು ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ. ಅಭಿಮಾನಿಗಳ ಪಾಲಿಗೆ ಕ್ರಿಕೆಟ್ ಧರ್ಮ ಎಂದರೆ ಅತಿಶಯೋಕ್ತಿಯಾಗಲಾರದು. ಭಾರತದಲ್ಲಿ ಕ್ರಿಕೆಟಿಗರು ಕೇವಲ ಆಟಗಾರರು ಮಾತ್ರವಲ್ಲ, ಸ್ಟಾರ್ ಸೆಲಿಬ್ರಿಟಿಗಳು ಕೂಡಾ ಹೌದು.
2008ರಲ್ಲಿ ಮಿಲಿಯನ್ ಡಾಲರ್ ಟೂರ್ನಿಯಾದ ಐಪಿಎಲ್ ಆರಂಭವಾಗುತ್ತಿದ್ದಂತೆ ಆಟಗಾರರ ಲಕ್ ಬದಲಾಗಿ ಹೋಯಿತು. ಇದೀಗ 12 ಆವೃತ್ತಿಗಳು ಮುಕ್ತಾಯವಾಗಿದ್ದು, ಪ್ರತಿ ಹರಾಜಿನಲ್ಲೂ ಯಾರೂ ನಿರೀಕ್ಷಿಸದ ಮೊತ್ತಕ್ಕೆ ಹರಾಜಾಗುತ್ತಿದ್ದಾರೆ. ಸ್ಪಾನ್ಸರ್‌ಗಳು, ಜಾಹಿರಾತುಗಳಿಂದ ಕ್ರಿಕೆಟಿಗರು ಕೋಟಿ ಕೋಟಿ ಗಳಿಸುತ್ತಿದ್ದಾರೆ. ಈ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ಅಗ್ರಸ್ಥಾನದಲ್ಲಿದ್ದಾರೆ. ಗರಿಷ್ಠ ಸಂಪಾದನೆ ಮಾಡುವ ಟಾಪ್ 10 ಟೀಂ ಇಂಡಿಯಾ ಆಟಗಾರರ ಪಟ್ಟಿಯನ್ನು ಸುವರ್ಣ ನ್ಯೂಸ್. ಕಾಂ ನಿಮ್ಮ ಮುಂದಿಡುತ್ತಿದೆ ನೋಡಿ.

• Cricket17, Jul 2020, 10:20 AM

ಕುಮಟಾದಿಂದ ಟೀಂ ಇಂಡಿಯಾವರೆಗೆ: ವಿಶ್ವದಲ್ಲೇ ನಂ.1 ಥ್ರೋಡೌನ್ ತಜ್ಞನ ರೋಚಕ ಸ್ಟೋರಿಯಿದು..!

ಜೀವನ ಈ ಹುಡುಗನ ಮೇಲೆ ಅನೇಕ ಬೌನ್ಸರ್'ಗಳನ್ನು ಎಸೆದಿದೆ. ಆ ಎಲ್ಲಾ ಬೌನ್ಸರ್'ಗಳನ್ನು ಎದುರಿಸಿ ತಾನು ಕಟ್ಟಿದ್ದ ಕನಸಿನ ಗೋಪುರವನ್ನು ಏರಿದ ಛಲದಂಕಮಲ್ಲ ಈ ರಘು. ಅವರ ಕ್ರಿಕೆಟ್ ಪ್ರಯಾಣ ಅಡೆತಡೆಗಳಿಂದಲೇ ತುಂಬಿತ್ತು. ಆದರೆ ದೃಢ ನಿಶ್ಚಯ, ನೋವನ್ನು ಯಾರಲ್ಲೂ ಹಂಚಿಕೊಳ್ಳದೆ ತಾವೊಬ್ಬರೇ ಎದುರಿಸಿ ನಿಲ್ಲುವ ಮನೋಭಾವ ಮತ್ತು ಗೆಲ್ಲುವ ಕಲೆಯಿಂದ ಎಲ್ಲಾ ಅಡೆತಡೆಗಳನ್ನು ತೆರವುಗೊಳಿಸಿದ ರೀತಿ ಎಂಥವರಿಗಾದರೂ ಅದ್ಭುತ ಅನ್ನಿಸದೆ ಇರದು.

• ಕಬಡ್ಡಿ ಲೆ ಪಂಗಾ ಚಾಲೆಂಜ್ ಸ್ವೀಕರಿಸಿದ ಡೆಲ್ಲಿ ಡ್ಯಾಶರ್

Cricket11, Jul 2020, 7:34 PM

ವಿರಾಟ್ ಕೊಹ್ಲಿ ಕನ​ಸಿನ ಕಬ​ಡ್ಡಿ ಟೀಂನಲ್ಲಿ ಸ್ಥಾನ ಪಡೆದಿದ್ದಾರೆ 7 ಸ್ಟಾರ್ ಕ್ರಿಕೆಟರ್ಸ್..!

ಭಾರತ ಕ್ರಿಕೆಟ್‌ ತಂಡದ ನಾಯ​ಕ ವಿರಾಟ್‌ ಕೊಹ್ಲಿ ತಮ್ಮ ಕನ​ಸಿನ ಕಬಡ್ಡಿ ತಂಡ​ವನ್ನು ಆಯ್ಕೆ ಮಾಡಿದ್ದು, ಅದ​ರಲ್ಲಿ ಮಾಜಿ ನಾಯಕ ಎಂ.ಎಸ್‌.ಧೋ​ನಿಗೆ ಮೊದಲ ಸ್ಥಾನ ನೀಡಿ​ದ್ದಾರೆ.

ಪ್ರೊ ಕಬಡ್ಡಿ ಟೂರ್ನಿಯ ಆಯೋ​ಜ​ಕರ ಮನವಿ ಮೇರೆಗೆ ಕೊಹ್ಲಿ ತಂಡದ ಆಯ್ಕೆ ನಡೆ​ಸಿ​ದ್ದಾರೆ. ಈ ತಂಡದಲ್ಲಿ ಬಲಿಷ್ಠ ಆಟಗಾರರನ್ನೇ ಕಿಂಗ್ ಕೊಹ್ಲಿ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಸೀಮಿತ ಓವರ್‌ಗಳ ತಂಡದ ಉಪನಾಯಕ, ಹಿಟ್‌ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಮತ್ತೊಬ್ಬ ಹಾರ್ಡ್‌ ಹಿಟ್ಟರ್ ಹಾರ್ದಿಕ್ ಪಾಂಡ್ಯ ಕೂಡಾ ಕೊಹ್ಲಿ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿಲ್ಲ. ಕೊಹ್ಲಿಯ ಕನ​ಸಿನ ತಂಡದ ಬಗ್ಗೆ ಸಾಮಾ​ಜಿಕ ತಾಣಗಳಲ್ಲಿ ಭಾರೀ ಚರ್ಚೆ ನಡೆ​ದಿದೆ. ಕೊಹ್ಲಿ ಕನಸಿನ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

• Cricket11, Jul 2020, 5:40 PM

ವಿರಾಟ್ ಕೊಹ್ಲಿ ಡಯೆಟ್‌ ಸೀಕ್ರೆ​ಟ್‌ ಬಿಚ್ಚಿಟ್ಟ ಪತ್ನಿ ಅನು​ಷ್ಕಾ!

ಇಂತಿಷ್ಟೇ ಪ್ರಮಾಣದಲ್ಲಿ ಆಹಾರ ಸ್ವೀಕ​ರಿ​ಸ​ಬೇಕು ಎನ್ನುವ ಉದ್ದೇ​ಶ​ದಿಂದ ಕೊಹ್ಲಿ ತಮ್ಮ ಮನೆಯ ಅಡುಗೆ ಕೋಣೆಯಲ್ಲಿ ತಕ್ಕ​ಡಿ​ಯೊಂದನ್ನು ಇಟ್ಟು​ಕೊಂಡಿ​ದ್ದಾರೆ. ಕೊಹ್ಲಿ 100 ಗ್ರಾಂ ಅವ​ಲಕ್ಕಿಯನ್ನು ತೂಕ ಮಾಡಿ ಸೇವಿ​ಸು​ತ್ತಿ​ರುವ ವಿಡಿ​ಯೋ​ವನ್ನು ಅನುಷ್ಕಾ ಇನ್‌ಸ್ಟಾಗ್ರಾಂನಲ್ಲಿ ಹಾಕಿ​ಕೊಂಡಿ​ದ್ದು, ವಿಡಿಯೋ ವೈರಲ್‌ ಆಗಿ​ದೆ.

• Cricket9, Jul 2020, 11:18 AM

ಕ್ಯಾಪ್ಟನ್ ಕೊಹ್ಲಿಗೆ ನೀರ್‌ ದೋಸೆ ಕೊಟ್ಟ ಶ್ರೇಯಸ್‌ ಅಯ್ಯರ್‌!

ನೀರ್‌ ದೋಸೆ ಸವಿದ ವಿರಾಟ್‌, ‘ಇತ್ತೀಚಿನ ದಿನಗಳಲ್ಲಿ ಇಷ್ಟು ರುಚಿಯಾದ ದೋಸೆಯನ್ನು ತಿಂದೇ ಇರಲಿಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ. ಕೊಹ್ಲಿ ತಮ್ಮ ಮನೆಯಲ್ಲಿ ಮಾಡಿದ ಮಶ್ರೂಮ್‌ ಬಿರ್ಯಾನಿಯನ್ನು ಶ್ರೇಯಸ್‌ ಕುಟುಂಬಕ್ಕೆ ನೀಡಿದ್ದಾರೆ.

• Cricket7, Jul 2020, 4:20 PM

ಮಹಿ ಬರ್ತ್‌ ಡೇಗೆ ಹೃದಯಸ್ಪರ್ಷಿಯಾಗಿ ಶುಭಕೋರಿದ ಕೊಹ್ಲಿ..!

ವಿರಾಟ್ ಕೊಹ್ಲಿಗೂ ಮುನ್ನ ಹಲವು ಮಂದಿಗೆ CSK ನಾಯಕನಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. ರೋಹಿತ್ ಶರ್ಮಾ, ವಿರೇಂದ್ರ ಸೆಹ್ವಾಗ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಹಲವು ಕ್ರಿಕೆಟಿಗರು ಮಹಿ ಹುಟ್ಟುಹಬ್ಬಕ್ಕೆ ವಿನೂತನವಾಗಿ ಶುಭ ಕೋರಿದ್ದಾರೆ.

उन्होंने कहा,‘नंबर एक बल्लेबाज होने के कारण उसका अहंकार होगा। यदि किसी गेंद पर रन नहीं बनता है तो उसके अहम को ठेस पहुंचेगी। ऐसे में उसे फंसाकर आउट किया जा सकता है। यह सब दिमागी खेल है।’

Cricket5, Jul 2020, 9:13 PM

ವಿರಾಟ್ ಕೊಹ್ಲಿ ಮೇಲೆ ಸ್ವಹಿತಾಸಕ್ತಿ ಆರೋಪ; ಬಿಸಿಸಿಐಗೆ ಪತ್ರ!

ಲೋಧ ಸಮಿತಿ ಶಿಫಾರಸಿನ ಬಳಿಕ ಬಿಸಿಸಿಐನಲ್ಲಿ ಸ್ವಹಿತಾಸಕ್ತಿ ಸಂಘರ್ಷ ಆರೋಪದ ಮೇಲೆ ಹಲವು ಮಾಜಿ ಕ್ರಿಕೆಟಿಗರು ಕೆಲ ಹುದ್ದೆ ತೊರೆದಿದ್ದಾರೆ. ಇತ್ತೀಚೆಗೆ ರಾಹುಲ್ ದ್ರಾವಿಡ್ ಮೇಲೂ ಸ್ವಹಿತಾಸಕ್ತಿ ಸಂಘರ್ಷ ಆರೋಪ ಕೇಳಿ ಬಂದಿತ್ತು. ಇದೀಗ ಈ ಆರೋಪ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೇಲೆ ಬಂದಿದೆ. ಈ ಕುರಿತು ಬಿಸಿಸಿಐ ಎಥಿಕ್ಸ್ ಆಫೀಸರ್‌ಗೆ ಪತ್ರ ರವಾನೆಯಾಗಿದೆ.