ಕೋಲ್ಕತಾ[ನ.23]: ಭಾರತ-ಬಾಂಗ್ಲಾದೇಶ ಡೇ & ನೈಟ್ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ ಪ್ರವಾಸಿಗರ ಎದುರು ಭರ್ಜರಿ ಮುನ್ನಡೆ ಸಾಧಿಸಿದೆ.ಮೊದಲ ದಿನದಾಟದಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ವೃದ್ದಿಮಾನ್ ಸಾಹ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

ಬಾಂಗ್ಲಾ ಕ್ರಿಕೆಟಿಗನ ತುರ್ತು ಚಿಕಿತ್ಸೆಗೆ ಭಾರತೀಯ ಫಿಸಿಯೋ ಕರೆದ ಕೊಹ್ಲಿ!

’ಕ್ರಿಕೆಟ್ ಕಾಶಿ’ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆರಂಭವಾದ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಸುಮಾರು 60 ಸಾವಿರಕ್ಕೂ ಅಧಿಕ ಪ್ರೇಕ್ಷಕರೆದುರು ಕೊಹ್ಲಿ ಹಾಗೂ ಸಾಹ ಅಮೂಲ್ಯ ದಾಖಲೆ ಮಾಡಿದ್ದಾರೆ.

ಡೇ & ನೈಟ್ ಟೆಸ್ಟ್ ಪಂದ್ಯದಲ್ಲಿ ದಾಖಲೆ ಬರೆಯಲು ಕೊಹ್ಲಿ ರೆಡಿ..!

ಕೊಹ್ಲಿ ದಾಖಲೆ:
ಬಾಂಗ್ಲಾ ವಿರುದ್ಧದ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ (59) ರನ್‌ಗಳಿಸಿ ಬ್ಯಾಟಿಂಗ್‌ ನಡೆಸುತ್ತಿರುವ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಯಕನಾಗಿ ವೇಗದ 5 ಸಾವಿರ ರನ್‌ ಪೂರೈಸಿದರು. ಕೊಹ್ಲಿ ಕೇವಲ 86 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು. ಒಟ್ಟಾರೆ 5 ಸಹಸ್ರ ರನ್‌ ಪೂರೈಸಿದ 6ನೇ ನಾಯಕ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾದರು. ರಿಕ್ಕಿ ಪಾಂಟಿಂಗ್‌ (97 ಇನ್ನಿಂಗ್ಸ್‌), ಕ್ಲೈವ್‌ ಲಾಯ್ಡ್‌ (106 ಇನ್ನಿಂಗ್ಸ್‌), ಗ್ರೇಮ್‌ ಸ್ಮಿತ್‌ (110 ಇನ್ನಿಂಗ್ಸ್‌), ಆಲನ್‌ ಬಾರ್ಡರ್‌ (116 ಇನ್ನಿಂಗ್ಸ್‌), ಸ್ಟೀಫನ್‌ ಫ್ಲೆಮಿಂಗ್‌ (130 ಇನ್ನಿಂಗ್ಸ್‌) 5000 ರನ್‌ ಪೂರೈಸಿದ್ದರು.

ಸಾಹ 100 ಕ್ಯಾಚ್‌:

ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ವಿಕೆಟ್‌ ಕೀಪರ್‌ ವೃದ್ಧಿಮಾನ್‌ ಸಾಹ 100 ಕ್ಯಾಚ್‌ ಪಡೆದರು. ಬಾಂಗ್ಲಾ ವಿರುದ್ಧದ ಐತಿಹಾಸಿಕ ಪಂದ್ಯದಲ್ಲಿ ಸಾಹ ಈ ಸಾಧನೆ ಮಾಡಿದರು. ಟೆಸ್ಟ್‌ನಲ್ಲಿ 100 ಕ್ಯಾಚ್‌ ಪಡೆದ ಭಾರತದ 5ನೇ ವಿಕೆಟ್‌ ಕೀಪರ್‌ ಎನಿಸಿದರು. ಈ ಪಟ್ಟಿಯಲ್ಲಿ ಧೋನಿ (294), ಸಯ್ಯದ್‌ ಕೀರ್ಮಾನಿ (198), ಕಿರಣ್‌ ಮೋರೆ (130) ಹಾಗೂ ನಯನ್‌ ಮೋಂಗಿಯಾ (107) ಮೊದಲ 4 ಸ್ಥಾನದಲ್ಲಿದ್ದಾರೆ.