ಪದೇ ಪದೇ ಭೇಟಿಯಾಗುತ್ತಿರುವ ಯಶ್ - ಪ್ರಭಾಸ್; ಇಬ್ಬರ ಸ್ನೇಹ ಹೇಗಿದೆ?

ನ್ಯಾಷನಲ್ ಸ್ಟಾರ್ ಯಶ್ ಹಾಗೂ ಟಾಲಿವುಡ್‌ನ ರೆಬೆಲ್ ಸ್ಟಾರ್ ಪ್ರಭಾಸ್ ಇತ್ತೀಚಿನ ದಿನಗಳಲ್ಲಿ ಅನೇಕ ಬಾರಿ ಮೀಟ್ ಆಗಿದ್ದಾರೆ. ಯಶ್, ಪ್ರಭಾಸ್‌ಗಾಗಿ ಹೈದ್ರಾಬಾದ್‌ಗೆ ಹೋಗೋದು. ಪ್ರಭಾಸ್, ಯಶ್ ಗಾಗಿ ಬೆಂಗಳೂರಿಗೆ ಬರೋದು ಕಾಮನ್ ಆಗಿದೆ. ಇವರಿಬ್ಬರ ಸ್ನೇಹಕ್ಕೆ ಹೊಂಬಾಳೆ ಸಂಸ್ಥೆಯೇ ಸೇತುವೆ.

Share this Video
  • FB
  • Linkdin
  • Whatsapp

ನ್ಯಾಷನಲ್ ಸ್ಟಾರ್ ಯಶ್ ಹಾಗೂ ಟಾಲಿವುಡ್‌ನ ರೆಬೆಲ್ ಸ್ಟಾರ್ ಪ್ರಭಾಸ್ ಇತ್ತೀಚಿನ ದಿನಗಳಲ್ಲಿ ಅನೇಕ ಬಾರಿ ಮೀಟ್ ಆಗಿದ್ದಾರೆ. ಯಶ್, ಪ್ರಭಾಸ್‌ಗಾಗಿ ಹೈದ್ರಾಬಾದ್‌ಗೆ ಹೋಗೋದು. ಪ್ರಭಾಸ್, ಯಶ್ ಗಾಗಿ ಬೆಂಗಳೂರಿಗೆ ಬರೋದು ಕಾಮನ್ ಆಗಿದೆ. ಇವರಿಬ್ಬರ ಸ್ನೇಹಕ್ಕೆ ಹೊಂಬಾಳೆ ಸಂಸ್ಥೆಯೇ ಸೇತುವೆ. ಮೊದಲಿಗೆ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು ಕೆಜಿಎಫ್ ಸಿನಿಮಾ ಪ್ರಮೋಷನ್ ಪ್ಲಾನಿಂಗ್ ನಲ್ಲಿ. ಅಲ್ಲಿಂದ ಪ್ರಾರಂಭವಾದ ಇಬ್ಬರ ಸ್ನೇಹ ಬಾಂಧವ್ಯ ಇದೀಗ ಮತ್ತಷ್ಟು ಗಟ್ಟಿಯಾಗಿದೆ. ಸಲಾರ್ ಸಿನಿಮಾ ಮುಹೂರ್ತದಲ್ಲಿಯೂ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಬಳಿಕ ಇದೀಗ ಪ್ರಶಾಂತ್ ನೀಲ್ ಬರ್ತಡೇ ಪಾರ್ಟಿಯಲ್ಲಿ ಮತ್ತೆ ಒಂದಾಗಿದ್ದಾರೆ. ಕೆಜಿಎಫ್-2 ಸಿನಿಮಾದ 50 ದಿನದ ಸಂಭ್ರಮ ಮತ್ತು ಪ್ರಶಾಂತ್ ನೀಲ್ ಬರ್ತಡೇ ಒಟ್ಟಿಗೆ ಆಚರಣೆ ಮಾಡಲಾಗಿದೆ. ಈ ಸಂಭ್ರದಲ್ಲಿ ಭಾಗಿಯಾಗಲು ಪ್ರಭಾಸ್ ಹೈದರಾಬಾದ್‌ನಿಂದ ಆಗಮಿಸಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video