Shah Rukh Khan: ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಕಿಂಗ್ ಖಾನ್ ಪುತ್ರಿ ಸುಹಾನಾ ಖಾನ್!

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ತಮ್ಮ ಅದ್ಭುತ ಅಭಿನಯದ ಮೂಲಕ ಬಾದ್‌ಷಾ ಎನಿಸಿಕೊಂಡವರು. ಇದೀಗ ಅವರ ಮುದ್ದಿನ ಮಗಳು, ಸುಹಾನಾ ಖಾನ್ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಬಾಲಿವುಡ್ (Bollywood) ಕಿಂಗ್ ಖಾನ್ ಶಾರುಖ್ ಖಾನ್ (Shah Rukh Khan) ತಮ್ಮ ಅದ್ಭುತ ಅಭಿನಯದ ಮೂಲಕ ಬಾದ್‌ಷಾ ಎನಿಸಿಕೊಂಡವರು. ಇದೀಗ ಅವರ ಮುದ್ದಿನ ಮಗಳು, ಸುಹಾನಾ ಖಾನ್ (Suhana Khan) ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ‘ದಿ ಆರ್ಚೀಸ್’ (The Archies) ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶಿಸುತ್ತಿರುವ ಸುಹಾನಾ, ಚಿತ್ರದ ಫಸ್ಟ್ ಲುಕ್‌ಲ್ಲಿಯೇ ಅಭಿಮಾನಿಗಳಿಗೆ ಮೋಡಿ ಮಾಡಿದ್ದಾರೆ. ಇನ್ನು ಮಗಳ ಮೊದಲ ಚಿತ್ರ ಫಸ್ಟ್ ಲುಕ್‌ನಲ್ಲಿ ಭಾವುಕರಾಗಿರುವ ಖಾನ್, ಸೋಷಿಯಲ್ ಮೀಡಿಯಾದಲ್ಲಿ (Social Media) ಭಾವನಾತ್ಮಕವಾದ ಪೋಸ್ಟ್ ಹಾಕಿದ್ದಾರೆ. 

Add Asianetnews Kannada as a Preferred SourcegooglePreferred

ಕಿಚ್ಚನ ಪ್ಯಾನ್ ಇಂಡಿಯಾ ಪಯಣಕ್ಕೆ ಜೊತೆಯಾದ ಸಲ್ಮಾನ್; ವಿಕ್ರಾಂತ್ ರೋಣನ ಜವಾಬ್ದಾರಿ ಹೊತ್ತ ಖಾನ್

ಆರ್ಚಿ ಆ್ಯಂಡ್ರ್ಯೂಸ್ (Archie Andrews), ವೆರೋನಿಕಾ (Veronica) ಮತ್ತು ಬೆಟ್ಟಿ ಕಾಮಿಕ್ಸ್ ಪ್ರಿಯ (Comics Lovers)ರಿಗಂತೂ ಅವು ಅಚ್ಚುಮೆಚ್ಚಿನ ಪಾತ್ರಗಳು. ಇನ್ನು ಆರ್ಚಿ ಆ್ಯಂಡ್ರ್ಯೂಸ್ ಮತ್ತು ಸಂಗಡಿಗರ ಸಾಹಸಗಾಥೆಗಳಿಗೆ ಮಾರು ಹೋಗದ ಕಾಮಿಕ್ಸ್ ಪ್ರಿಯರೇ ಇಲ್ಲ. ಅದರ ಭಾರತೀಯ ಅವತರಣಿಕೆಯಲ್ಲಿ ಸುಹಾನಾ ಖಾನ್ ನಟಿಸಿದ್ದಾರೆ. ಸುಹಾನಾ ಖಾನ್ ವೆರೋನಿಕಾ ಲಾಡ್ಜ್ ಆಗಿ ನಟಿಸುತ್ತಿದ್ದು, ನಡು ಬೈತಲೆ ತೆಗೆದಿರುವ ಕಪ್ಪು ಕೂದಲು ಮತ್ತು ವಿಭಿನ್ನ ಬಟ್ಟೆಯಲ್ಲಿ ಡಿಫರೆಂಟ್ ಆಗಿ ಕಾಣುತ್ತಿದ್ದಾರೆ. ಇನ್ನು ಮಗಳ ಮೊದಲ ಚಿತ್ರ ಫಸ್ಟ್​ ಲುಕ್​ನಲ್ಲಿ ಭಾವುಕರಾಗಿರುವ ಖಾನ್​, ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾದ ಪೋಸ್ಟ್​ ಹಾಕಿದ್ದಾರೆ. ಆ ಪೋಸ್ಟ್‌ನಲ್ಲಿ ಏನಿದೆ ಗೊತ್ತಾ? ಈ ವಿಡಿಯೋವನ್ನು ವೀಕ್ಷಿಸಿ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video