ಕಿಚ್ಚನ ಪ್ಯಾನ್ ಇಂಡಿಯಾ ಪಯಣಕ್ಕೆ ಜೊತೆಯಾದ ಸಲ್ಮಾನ್; ವಿಕ್ರಾಂತ್ ರೋಣನ ಜವಾಬ್ದಾರಿ ಹೊತ್ತ ಖಾನ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆ ತಯಾರಿಯಲ್ಲಿದ್ದಾರೆ. ಈಗಾಗಲೇ ಪೋಸ್ಟರ್ ಮತ್ತು ಟೀಸರ್ ಮೂಲಕ ಭಾರಿ ನಿರೀಕ್ಷೆ ಮೂಡಿಸಿರುವ ವಿಕ್ರಾಂತ್ ರೋಣನನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಂದಹಾಗೆ ವಿಕ್ರಾಂತ್ ರೋಣ ಸಿನಿಮಾಗೆ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಸಾಥ್ ನೀಡಿದ್ದಾರೆ. ವಿಕ್ರಾಂತ್ ರೋಣ ಹಿಂದಿ ವರ್ಷನ್ ಅನ್ನು ಸಲ್ಮಾನ್ ಖಾನ್ ಪ್ರೆಸೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಸಿನಿಮಾತಂಡ ಬಹಿರಂಗ ಪಡಿಸಿದೆ. ಸಲ್ಮಾನ್ ಖಾನ್ ಕೂಡ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಸಿನಿಮಾತಂಡಕ್ಕೆ ಮತ್ತಷ್ಟು ಬಲ ಬಂದಂತೆ ಆಗಿದೆ.