Asianet Suvarna News Asianet Suvarna News

ಬೀಳ್ತಿದ್ದ ಬಾಲಿವುಡ್‌ಗೆ ಪಿಲ್ಲರ್ ಆದ ಪಠಾಣ್; ಎರಡೇ ದಿನ ಗಳಿಸಿದ್ದೆಷ್ಟು?

ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ 2ನೇ ದಿನವೂ ಭರ್ಜರಿ ಕಲೆಕ್ಷನ್ ಮಾಡಿದ್ದು 100 ಕೋಟಿ ಕ್ಲಬ್ ಸೇರಿದೆ. 

ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ಈಗ ಝೀರೋ ಸ್ಟಾರ್ ಅಲ್ಲವೇ ಅಲ್ಲ. ಕಿಂಗ್ ಖಾನ್ ಈಗ 100 ಕೋಟಿ ಕ್ಲಬ್ ಸೇರಿರೋ ಬಾಲಿವುಡ್ ಸೂಪರ್ ಸ್ಟಾರ್. ಹೌದು ನಾಲ್ಕು ವರ್ಷದ ಹಿಂದೆ ಝೀರೋ ಸಿನಿಮಾ ಮಾಡಿ ಫ್ಲಾಪ್ ಶೋ ಪ್ರದರ್ಶನ ಮಾಡಿದ್ದ ಶಾರುಖ್ ಮತ್ತೆ ಬಾಕ್ಸಾಫೀಸ್ನಲ್ಲಿ ಎದ್ದು ಬರೋದಕ್ಕೆ ನಾಲ್ಕು ವರ್ಷ ಬೇಕಾಯ್ತು. ಈಗ ಶಾರುಖ್ ಖಾನ್ ಪಠಾಣ್ ಸಿನಿಮಾದಿಂದ ಗಲ್ಲಾಪೆಟ್ಟಿಗೆಯಲ್ಲಿ ಮತ್ತೆ ಕಮಾಲ್ ಮಾಡಿದ್ದಾರೆ. ಶಾರುಖ್ ಖಾನ್ ಪಠಾಣ್ ಸಿನಿಮಾ ಎರಡೇ ದಿನದಲ್ಲಿ 100 ಕೋಟಿ ಕ್ಲಬ್ ಸೇರಿದೆ. ಈ ಮೂಲಕ ಸೊರಗಿದ್ದ ಬಾಲಿವುಡ್‌ಗೆ ಜೀವ ತುಂಬಿದೆ.