Isha Koppikar: ಸೂರ್ಯವಂಶ ಬ್ಯೂಟಿ ಬಾಳಲ್ಲಿ ಎದ್ದ ಬಿರುಗಾಳಿ..! 14 ವರ್ಷದ ಇಶಾ ಕೊಪ್ಪಿಕರ್ ದಾಂಪತ್ಯದಲ್ಲಿ ಬಿರುಕು..!

ಇಶಾ ಕೊಪ್ಪಿಕರ್ ಈ ಹೆಸ್ರು ನಮ್ ಸ್ಯಾಂಡಲ್‌ವುಡ್‌ ಸಿನಿ ಪ್ರೇಕ್ಷಕರಲ್ಲಿ ಸಿಕ್ಕಾಪಟ್ಟೆ ಫೇಮಸ್. ಯಾಕಂದ್ರೆ ಸೂರ್ಯ ವಂಶ ಸಿನಿಮಾದಲ್ಲಿ ವಿಷ್ಣುರ್ಧನ್ ಧರ್ಮ ಪತ್ನಿಯಾಗಿ ನಟಿಸಿ ಮನೆ ಮಗಳಾದ್ರು. ಇಶಾ ಕೊಪ್ಪಿಕರ್ ಅಂದ್ರೆ ಇಂದಿಗೂ ನೆನಪಾಗೋದು ಸೂರ್ಯವಂಶ ಸಿನಿಮಾ ಮತ್ತು ಆ ಚಿತ್ರದ ಹಾಡುಗಳು.

First Published Dec 30, 2023, 10:45 AM IST | Last Updated Dec 30, 2023, 10:45 AM IST

ಇಶಾ ಕೊಪ್ಪಿಕರ್ ಪಂಚ ಭಾಷಾ ನಟಿ. ಕನ್ನಡದಲ್ಲಿ ವಿಷ್ಣುವರ್ಧನ್ ಜೊತೆ ಸೂರ್ಯವಂಶ ಸಿನಿಮಾ, ಕ್ರೇಜಿ ಸ್ಟಾರ್ ರವಿಚಂದ್ರನ್ರ ಓ ನನ್ನ ನಲ್ಲೆ ಸಿನಿಮಾ ಸೇರಿ ಕನ್ನಡದಲ್ಲಿ ಆರು ಸಿನಿಮಾ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ (Sandalwood)ಮಂದಿಗೆ ಚಿರ ಪರಿಚಿತರಾಗಿರೋ ಇಶಾ ಕೊಪ್ಪಿಕರ್(Isha Koppikar) ಬಾಳಲ್ಲಿ ಈಗ ಬಿರುಗಾಳಿ ಎದ್ದಿದೆ. ಇಶಾರ 14 ವರ್ಷದ ದಾಂಪತ್ಯದಲ್ಲಿ ಬಿರುಕು ಮೂಡಿದೆ ಅಂತ ಸುದ್ದಿ ಹರಿದಾಡ್ತಿದೆ. ಇಶಾ 14 ವರ್ಷದ ಹಿಂದೆ ಉದ್ಯಮಿ ಟಿಮ್ಮಿ ನಾರಂಗ್(Timmy narang) ಜೊತೆ ಮದುವೆ ಆಗಿದ್ರು. ಇವರಿಬ್ಬರದ್ದು ಲವ್ ಮ್ಯಾರೇಜ್. 2009ರಲ್ಲಿ ಟಿಮ್ಮಿ ನಾರಂಗ್ ಜೊತೆ ಇಶಾ ಕೊಪ್ಪಿಕರ್ ದಾಂಪತ್ಯ ಶುರು ಮಾಡಿದ್ರು. ಈ ದಂಪತಿಗಳಿಗೆ ಹೆಣ್ಣು ಮಗು ಇದೆ. ಆದ್ರೆ 14 ವರ್ಷಗಳ ಕಾಲ ಒಟ್ಟಾಗಿ ಸಂಸಾರ ಮಾಡಿದ್ದ ಈ ಜೋಡಿ ಈಗ ವಿಚ್ಛೇಧನ(Divorce) ಪಡೆಯೋ ನಿರ್ಧಾರಕ್ಕೆ ಬಂದಿದ್ದಾರೆ ಅಂತ ಹೇಳಲಾಗ್ತಿದೆ. ಅದಕ್ಕೆ ಕಾರಣ ಏನು ಅನ್ನೋದು ಮಾತ್ರ ಗುಟ್ಟಾಗೆ ಇದೆ. ಹಲವು ವರ್ಷಗಳ ಹಿಂದೆಯೇ ಇಶಾ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಆದ್ರೆ ಅದನ್ನ ಸರಿ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಒಂಬತ್ತು ವರ್ಷದ ಹೆಣ್ಣು ಮಗುವನ್ನು ಕರೆದುಕೊಂಡು, ಗಂಡನ ಮನೆ ಬಿಟ್ಟು ಹೋಗಿದ್ರಂತೆ ಇಶಾ.. ಈಗ ಈ ದಂಪತಿಗಳ ಬ್ರೇಕಪ್ ಬಗ್ಗೆ ಸುದ್ದಿ ಹೊರ ಬಂದಿದೆ. ಆದ್ರೆ ಈ ಬಗ್ಗೆ ನಟಿ ಇಶಾ ಯಾವ್ದೇ ಪ್ರತಿಕ್ರಿಯೆ ನೀಡಿಲ್ಲ. ಐದಾರು ಭಾಷೆಗಳಲ್ಲಿ ನಟಿಸುತ್ತಿರೋ ಇಶಾರ ಬಾಳಲ್ಲಿ ಇಂತಹ ದಿನಗಳು ಬರಬಾರದಿತ್ತು ಅನ್ನೋದು ಅಭಿಮಾನಿಗಳ ಮಾತು.

ಇದನ್ನೂ ವೀಕ್ಷಿಸಿ:  Rajinikanth: ಸ್ಟೈಲ್ ಐಕಾನ್ ಸೂಪರ್ ಸ್ಟಾರ್ ರಜನಿಕಾಂತ್..!ತಲೈವಾ ಸಿಗರೇಟ್ ಸ್ಟೈಲ್ ಹುಟ್ಟಿದ್ದು ಹೇಗೆ..?

Video Top Stories