Rajinikanth: ಸ್ಟೈಲ್ ಐಕಾನ್ ಸೂಪರ್ ಸ್ಟಾರ್ ರಜನಿಕಾಂತ್..!ತಲೈವಾ ಸಿಗರೇಟ್ ಸ್ಟೈಲ್ ಹುಟ್ಟಿದ್ದು ಹೇಗೆ..?
ಸೂಪರ್‌ಸ್ಟಾರ್ ಸ್ಟೈಲ್ಗೆ ಸ್ಪೂರ್ತಿ ಆ ಹೀರೋ!
ತಲೈವಗೆ ಪ್ರಭಾವ ಬೀರಿದ್ದು ಆ ಬಿಟೌನ್ ಹಿರೋ
ಭಾರತೀಯ ಚಿತ್ರರಂಗದ ಹೆಮ್ಮೆ ಸೂಪರ್‌ಸ್ಟಾರ್
ರಜನಿಕಾಂತ್ ಅಂದ್ರೆ ತಕ್ಷಣಕ್ಕೆ ನೆನಪಾಗೋದು ಕೈಯಲ್ಲಿ ಸಿಗರೇಟ್ ತಿರುಗಿಸೋ ಸ್ಟೈಲ್. ತಲೈವಾ, ಸಿಗರೇಟ್ ಎಸೆದು ನಂತರ ಕ್ಯಾಚ್ ಹಿಡಿದು ಸ್ಮೋಕ್ ಮಾಡೋ ಸ್ಟೈಲ್ ಎಲ್ಲರಿಗೂ ಪರಿಚಿತವಾಗಿದೆ. ಆದರೆ, ಈ ಸ್ಟೈಲ್‌ಅನ್ನು ಮೊದಲ ಬಾರಿ ಮಾಡಿದ್ದು ರಜನಿಕಾಂತ್(Rajinikanth) ಅಲ್ಲ ಅನ್ನೋದು ನಿಮ್ಗೆ ಗೊತ್ತಿದ್ಯಾ.? ಇದು ನಿಜಾ ಕೂಡ. ಸೂಪರ್‌ಸ್ಟಾರ್ ರಜನಿಕಾಂತ್ ಭಾರತೀಯ ಚಿತ್ರರಂಗದ ಐಕಾನ್. ಆದ್ರೆ ರಜನಿ ಅಭಿನಯಕ್ಕೆ ಹಲವು ಸ್ಟಾರ್ ನಟರು ಸ್ಪೂರ್ಥಿ ಅನ್ನೋದು ನಿಮಗೆ ಗೊತ್ತೇ. ಅದು ನಿಜಾ ಕೂಡ. ರಜನಿ ಕಾಂತ್ ಸಿಗರೇಟ್ ಸ್ಟೈಲ್‌ಗೆ(Cigarette flip) ಬಾಲಿವುಡ್‌ನ ಈ ಸೂಪರ್‌ಸ್ಟಾರ್ ಒಬ್ರು ಸ್ಪೂರ್ಥಿಯಂತೆ. ಅವ್ರೇ ಶತ್ರುಘ್ನ ಸಿನ್ಹಾ ಬಾಲಿವುಡ್ ನಟ ಶತ್ರುಘ್ನ ಸಿನ್ಹಾ(Shatrughan Sinha) ತಮ್ಮ ಪವರ್‌ಫುಲ್ ಸ್ಕ್ರೀನ್ ಪ್ರೆಸೆನ್ಸ್ ಮತ್ತು ಡಮ್‌ದಾರ್ ಡೈಲಾಗ್ ಡೆಲಿವರಿಯಿಂದ ಪ್ರೇಕ್ಷಕರನ್ನು ಸೆಳೆದಿರುವ ಅಪ್ರತಿಮ ನಟ ರಜನಿಕಾಂತ್ ಸಿಗರೇಟ್ ಸೇದೋ ಸ್ಮೈಲ್‌ಗೆ ಪ್ರೇರಣೆಯಾಗಿದ್ದಾರೆ. ಶತ್ರುಘ್ನ ಸಿನ್ಹಾ ಖಿಲೋನಾ, ಮೇರೆ ಅಪ್ನೆ, ರಾಮ್‌ಪುರ್ ಕಾ ಲಕ್ಷ್ಮಣ್, ಬಾಂಬೆ ಟು ಗೋವಾ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಶತ್ರುಘ್ನ ಸಿನ್ಹಾ ಮಾಡಿರೋದೆಲ್ಲಾ ಐಕಾನಿಕ್ ರೋಲ್ಗಳೇ.. ಇದರಿಂದ ಪ್ರೇರೇಪಿತರಾದ ರಜನೀಕಾಂತ್ ತಮ್ಮ ಸಿನಿ ಜರ್ನಿಯಲ್ಲಿ ಅಂತಹದ್ದೇ ಐಕಾನಿಕ್ ಪಾತ್ರಗಳನ್ನ ಮಾಡಿದ್ದಾರೆ. ರಜನೀಕಾಂತ್ ಮೇಲೆ ಶತ್ರುಘ್ನ ಸಿನ್ಹಾ ಎಷ್ಟು ಪ್ರಭಾವ ಬೀರಿದ್ದಾರೆ ಅಂದ್ರೆ ಸಿಗರೇಟ್ ಎಸೆಯುವುದು, ಹೆಡ್ ಟರ್ನಿಂಗ್, ಮುಖದ ಮೇಲಿನ ಎಕ್ಸ್‌ಪ್ರೆಶನ್ ಎಲ್ಲವೂ ಶತ್ರುಘ್ನಾ ಸಿನ್ಹಾ ಅವರ ಮ್ಯಾನರಿಸಂಗಳನ್ನೇ ಹೋಲುತ್ತೆ. ನಾನು ಶತ್ರುಘ್ನಾ ಸಿನ್ಹಾರ ಅಭಿನಯದಿಂದ ಸ್ಫೂರ್ತಿ ಪಡೆದಿದ್ದೇನೆ. ನಾನು ಅವರಿಂದಲೇ ಸಿಗರೇಟ್ ಸ್ಟೈಲ್‌ನ್ನು ಕಲಿತಿದ್ದೇನೆ ಎಂದು ಸ್ವತಃ ರಜನೀಕಾಂತ್ ಹೇಳಿದ್ದು ಇದೆ. ಏನೆ ಆದ್ರು ರಜನಿ ಕಾಂತ್ ಸಿಗರೇಟ್ ಸ್ಟೈಲ್ ಅಂದು ಇಂದು ಎಂದೆಂದಿಗೂ ಅವರ ಫ್ಯಾನ್ಸ್ಗೆ ಸೂಪರ್ ಅನ್ನೋದಂತು ನಿಜ.
ಇದನ್ನೂ ವೀಕ್ಷಿಸಿ: Yash: ಜನವರಿ 8ಕ್ಕೆ ನ್ಯಾಷನಲ್ ಸ್ಟಾರ್ ಯಶ್‌ಗೆ ಬರ್ತ್ಡೇ..! ಹುಟ್ಟುಹಬ್ಬಕ್ಕೆ ಸಿದ್ಧವಾಗಿದೆ 'ಟಾಕ್ಸಿಕ್' ಸ್ಪೆಷಲ್ ಕಿಕ್..!