Asianet Suvarna News Asianet Suvarna News

ಬಾಲಿವುಡ್ ಚಿತ್ರರಂಗಕ್ಕೆ ಭಯ ಹುಟ್ಟುಸಿದ್ದ ಯಶ್..! ಸೌತ್ ಚಿತ್ರರಂಗದ ಮೇಲೆ ಹಿಂದಿ ಮಂದಿಗೆ ಮತ್ತೆ ನಡುಕ..!

ಬಾಲಿವುಡ್ ಇಡೀ ಭಾರತೀಯ ಸಿನಿಮಾ ಜಗತ್ತನ್ನೇ ಆಳುತ್ತಿತ್ತು. ಆದ್ರೆ ಅದಕ್ಕೆ ಸರಿಯಾಗಿ ಟಾಂಗ್ ಕೊಟ್ಟಿದ್ದು ಕನ್ನಡಿಗ ರಾಕಿಂಗ್ ಸ್ಟಾರ್ ಯಶ್. ಸಿನಿಮಾ ರಂಗ ಅಂದ್ರೆ ಬರೀ ಬಾಲಿವುಡ್ ಅಲ್ಲ ನಾಮ್ಮಲ್ಲೂ ಪೊಟೆನ್ಷಿಯೆಲ್ ಇದೆ ಅದ್ಭುತ ಸಿನಿಮಾ ಮಾಡುತ್ತೇವೆ ಅಂತ ಕೆಜಿಎಫ್ ಮಾಡಿ 1200 ಕೋಟಿ ಕಲೆಕ್ಷನ್ ಮಾಡಿದ್ರು ಯಶ್. ಅಲ್ಲಿಂದ ಸೌತ್ ಸಿನಿಮಾಗಳು ಅಂದ್ರೆ ಬಾಲಿವುಡ್‌ಗೆ ಭಯ ಶುರುವಾಗಿತ್ತು.

First Published Feb 19, 2024, 9:38 AM IST | Last Updated Feb 19, 2024, 9:38 AM IST

ಸೌತ್ ಸ್ಟಾರ್ಸ್‌ಗಳಾದ ಯಶ್, ಪ್ರಭಾಸ್, ಅಲ್ಲು ಅರ್ಜುನ್ , ರಾಮ್ ಚರಣ್, ರಿಷಬ್ ಶೆಟ್ಟಿ, ಕಿಚ್ಚ ಸುದೀಪ್ ಇವ್ರೆಲ್ಲಾ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಸೂಪರ್ ಹಿಟ್ ಕೊಟ್ಟಿದ್ರು. ಅದರಲ್ಲೂ ಬಾಲಿವುಡ್‌ನಲ್ಲಿ(Bollywood) ಭಾರಿ ದೊಡ್ಡ ಕಲೆಕ್ಷನ್ ಮಾಡಿದ್ರು. ಇದ್ರಿಂದ ಹಿಂದಿ ಸಿನಿಮಾಗಳ ಸ್ಟಾರ್‌ಗಳು ಗಲ್ಲಾಪೆಟ್ಟೆಗೆ ಕೊಳ್ಳೆ ಹೊಡೆಯಲಾಗದೇ ಒದ್ದಾಡಿದ್ರು. ಸಲ್ಮಾನ್ ಖಾನ್ ಶಾರುಖ್ ಖಾನ್, ಅಮೀರ್ ಖಾನ್ ಅಕ್ಷಯ್ರಂತ ಸೂಪರ್ ಸ್ಟಾರ್ಗಳೇ ಗೆಲುವಿಗಾಗಿ ಒದ್ದಾಡಿದ್ರು. ಈಗ ಸೌತ್ ಚಿತ್ರರಂಗದ(South Film Industry) ಮೇಲೆ ಹಿಂದಿ ಮಂದಿಗೆ ಮತ್ತೆ ಭಯ ಬಂದಿದೆ. ಆ ಐದು ಸಿನಿಮಾಗಳ ಎದುರು ತಮ್ಮ ಸಿನಿಮಾ ರಿಲೀಸ್ ಮಾಡೋಕೆ ಬಾಲಿವುಡ್ ಮಂದಿ ಹೆದರುತ್ತಿದ್ದಾರಂತೆ. ಅಲ್ಲು ಅರ್ಜುನ್(Allu Arjun) ನಟನೆಯ ‘ಪುಷ್ಪ: ದಿ ರೂಲ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಮೊದಲ ಭಾಗ 2021ರಲ್ಲಿ ಕೊನೆಯಲ್ಲಿ ರಿಲೀಸ್ ಆಯಿತು. ಪುಷ್ಪರಾಜ್ ಪಾತ್ರ ಎಲ್ಲರ ಹೃದಯ ಗೆದ್ದಿದೆ. ಈಗ ಎರಡನೇ ಭಾಗಕ್ಕೆ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರ  2024ರ ಆಗಸ್ಟ್ 15ರಂದು ರಿಲೀಸ್ ಆಗಲಿದೆ. ಈ ಸಿನಿಮಾ ‘ಸಿಂಗಂ ಅಗೇನ್’ ಚಿತ್ರದ ಎದುರು ರಿಲೀಸ್ ಆಗಲಿದೆ.

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ‘ಕಾಂತಾರ’(Kantara) ಚಿತ್ರಕ್ಕೆ ಪ್ರೀಕ್ವೆಲ್ ರೆಡಿ ಆಗುತ್ತಿದೆ. ಇದಕ್ಕೆ ‘ಕಾಂತಾರ: ಅಧ್ಯಾಯ 1′ ಎಂದು ಹೆಸರು ಇಡಲಾಗಿದೆ. ಈ ಚಿತ್ರ ದೊಡ್ಡ ಮಟ್ಟದ ಗಳಿಕೆ ಮಾಡೋದು ಪಕ್ಕಾ. ಈ ವರ್ಷಾಂತ್ಯಕ್ಕೆ ಕಾಂತಾರ ಅಧ್ಯಾಯ 1 ಸಿನಿಮಾ ರಿಲೀಸ್ ಆಗಲಿದೆ. ಆದ್ರೆ ಆ ಸಿನಿಮಾದ ಎದುರು ಬಾಲಿವುಡ್ನ ಯಾವ ಸಿನಿಮಾನೂ ರಿಲೀಸ್ ಮಾಡುತ್ತಿಲ್ಲ. ಜೂನಿಯರ್ ಎನ್ಟಿಆರ್ ಅಂದ್ರೆ ಬಾಲಿವುಡ್ ಮಂದಿಗೆ ಭಯ ಇದೆ. ಅದಕ್ಕೆ ಕಾರಣ ಆರ್‌ಆರ್‌ಆರ್ ಸಿನಿಮಾದ ಬಿಗ್ ಸಕ್ಸಸ್. ಈಗ  ಜೂನಿಯರ್ ಎನ್ಟಿಆರ್ ‘ದೇವರ’ ಸಿನಿಮಾ ಮೂಲಕ ಮತ್ತೆ ಬೆಳ್ಳಿತೆರೆ ಮೇಲೆ ಬರುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ನ ಜಾನ್ವಿ ಕಪೂರ್ ಮತ್ತು ಸೈಫ್ ಅಲಿ ಖಾನ್ ಕೂಡ ಬಣ್ಣ ಹಚ್ಚಿದ್ದಾರೆ. ಏಪ್ರಿಲ್ 5ರಂದು ಬಿಡುಗಡೆ ಆಗಲಿರೋ ದೇವಾರ ಸಿನಿಮಾ ಎದುರು ಹಿಂದಿಯ ಸ್ಟಾರ್ ಹೀರೋಗಳ ಸಿನಿಮಾ ಬಿಡುಗಡೆ ಮಾಡದಿರಲು ಬಾಲಿವುಡ್ ಡಿಸೈಡ್ ಮಾಡಿದೆಯಂತೆ. 

ಇದನ್ನೂ ವೀಕ್ಷಿಸಿ:  Today Horoscope: ಮಕರ ರಾಶಿಯಿಂದ ಕುಂಭ ರಾಶಿಗೆ ಬುಧನ ಪ್ರವೇಶ.. ಯಾವ ರಾಶಿಯವರಿಗೆ ಶುಭ-ಅಶುಭ ?

Video Top Stories