Aaradhya New Hairstyle: ಕೊನೆಗೂ ಐಶ್ವರ್ಯಾ ಮಗಳ ಹಣೆ ನೋಡಾಯ್ತು: ಹೇರ್ ಸ್ಟೈಲ್ ಬದಲಿಸಿದ ಆರಾಧ್ಯ ಬಚ್ಚನ್ !
ಆದರೀಗ ಐಶ್ ಬೇಬಿ ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಕಾರ್ಯಕ್ರಮಕ್ಕೆ ಹೊಸ ಹೇರ್‌ಸ್ಟೈಲ್‌ನಲ್ಲಿ ಬಂದು ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.
ಆರಾಧ್ಯ ಬಚ್ಚನ್(Aaradhya Bachchan) ಹೇರ್‌ಸ್ಟೈಲ್ ಬದಲಾಯಿಸೋಕೆ ಅಂಬಾನಿ 1000 ಕೋಟಿ ಖರ್ಚು ಮಾಡಬೇಕಾಯ್ತು ಎನ್ನುತ್ತಿದ್ದಾರೆ ನೆಟ್ಟಿಗರು. ಹೌದು, ಅನಂತ್- ರಾಧಿಕಾ ವಿವಾಹಪೂರ್ವ ಸಮಾರಂಭಕ್ಕೆ ಐಶ್ವರ್ಯಾ ರೈ(Aishwarya Rai) ಪುತ್ರಿ ಹೊಸ ಹೇರ್‌ಸ್ಟೈಲ್‌ನಲ್ಲಿ(Hairstyle) ಬಂದು ಎಲ್ಲರ ಗಮನ ಸೆಳೆದಿದ್ದಾಳೆ. ಸದಾ ಹಣೆಯ ಮೇಲೆ ಕೂದಲು ಇಳಿಸಿದ ರೀತಿ- ಆಡುಭಾಷೆಯಲ್ಲಿ ಬೇಬಿ ಶಾಮಿಲಿ ಹೇರ್‌ಸ್ಟೈಲ್- ಆರಾಧ್ಯ ಬಚ್ಚನ್ ಕಾಣಿಸಿಕೊಳ್ಳುತ್ತಿದ್ದುದು ದೊಡ್ಡ ಚರ್ಚೆಯ ವಿಷಯವಾಗಿತ್ತು. ಹಣೆ ದೊಡ್ಡದಿರಬಹುದೇ ಎಂದು ಹಲವರು ಅನುಮಾನ ಪಟ್ಟಿದ್ದರು. ಆದರೀಗ ಐಶ್ ಬೇಬಿ ಅನಂತ್ ಅಂಬಾನಿ(Anant Ambani)- ರಾಧಿಕಾ ಮರ್ಚೆಂಟ್(Radhika Merchant )ವಿವಾಹಪೂರ್ವ ಕಾರ್ಯಕ್ರಮಕ್ಕೆ ಹೊಸ ಹೇರ್‌ಸ್ಟೈಲ್‌ನಲ್ಲಿ ಬಂದು ಎಲ್ಲರನ್ನು ಅಚ್ಚರಿಗೊಳಿಸಿದ್ದಾಳೆ.
ಇದನ್ನೂ ವೀಕ್ಷಿಸಿ: Venu Swamy: ಈ ನಟನಿಗೆ ಜನ್ಮದಲ್ಲಿ ಮದುವೆ ಭಾಗ್ಯ ಇಲ್ವಂತೆ! ಖ್ಯಾತ ಜ್ಯೋತಿಷಿ ನುಡಿದ ಭವಿಷ್ಯವಾಣಿ ಯಾರ ಬಗ್ಗೆ..?