Venu Swamy: ಈ ನಟನಿಗೆ ಜನ್ಮದಲ್ಲಿ ಮದುವೆ ಭಾಗ್ಯ ಇಲ್ವಂತೆ! ಖ್ಯಾತ ಜ್ಯೋತಿಷಿ ನುಡಿದ ಭವಿಷ್ಯವಾಣಿ ಯಾರ ಬಗ್ಗೆ..?

ಬಾಹುಬಲಿ ನಟ ಫ್ರಭಾಸ್‌ಗೆ ನೇಮ್-ಫೇಮ್ ತಂದು ಕೊಟ್ಟ ಸಿನಿಮಾ. ಈ ಸಿನಿಮಾ ತೆರೆಗೆ ಬಂದು 10 ವರ್ಷವೇ ಆಗ್ಹೋಗಿದೆ. ಆದರೂ ಜನ ಮಾತ್ರ ಬಾಹುಬಲಿ ಸಿನಿಮಾ ಹ್ಯಾಂಗ್ವೋವರ್‌ನಿಂದ ಇನ್ನೂ ಹೊರಗೆ ಬಂದಿಲ್ಲ.

First Published Mar 5, 2024, 10:17 AM IST | Last Updated Mar 5, 2024, 10:17 AM IST

ನಟ ಪ್ರಭಾಸ್ ವಯಸ್ಸು ಬರೋಬ್ಬರಿ 44 ವರ್ಷ. ಆದರೂ ನಟ ಪ್ರಭಾಸ್(Actor Prabhas) ಮದುವೆ ಬಗ್ಗೆ ಮಾತೇ ಎತ್ತುತ್ತಿಲ್ಲ. ಇದೇ ಸಮಯದಲ್ಲಿ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ, ನಟ ಪ್ರಭಾಸ್‌ಗೆ ಮದುವೆ(Marriage) ಯೋಗವೇ ಇಲ್ಲ ಎಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಭಾರತ ಚಿತ್ರರಂಗದ ಸೆಲೆಬ್ರಿಟಿಗಳ ಖ್ಯಾತ ಜ್ಯೋತಿಷಿಗಳಲ್ಲಿ ವೇಣು ಸ್ವಾಮಿ(Venu Swamy) ಒಬ್ಬರು. ಇವರು ಹೇಳಿದ್ದ ಎಷ್ಟೋ ಭವಿಷ್ಯವಾಣಿ(Prediction) ವಾಸ್ತವದಲ್ಲಿ ನಡೆದಿವೆ. ಇದೇ ಕಾರಣಕ್ಕೆ ಇವರು ನುಡಿಯುವ ಭವಿಷ್ಯವಾಣಿಯನ್ನ ಕೇಳಲು ಸ್ಟಾರ್ ನಟ-ನಟಿಯರು ಹಿಂಜರಿಯುತ್ತಾರೆ. ಈಗ ನಟ ಪ್ರಭಾಸ್ ಇವರ ಬಳಿ ಹೋಗಿ ಭವಿಷ್ಯವಾಣಿ ಕೇಳದಿದ್ದರೂ, ವೇಣು ಸ್ವಾಮಿ ಅವರೇ ನಟ ಪ್ರಭಾಸ್ಗೆ ವಿವಾಹ ಭಾಗ್ಯ ಇಲ್ಲ ಎಂದು ಹೇಳಿದ್ದಾರೆ. ನಟ ಪ್ರಭಾಸ್‌ಗೆ ಈ ಜನ್ಮದಲ್ಲಿ ಮದುವೆ ಆಗಲ್ಲ ಎಂದು ವೇಣುಸ್ವಾಮಿ ಭವಿಷ್ಯ ನುಡಿದಿದ್ದಾರೆ. ಇಷ್ಟು ಮಾತ್ರವಲ್ಲದೇ ಪ್ರಭಾಸ್‌ಗೆ ಯಾಕೆ ಮದುವೆ ಆಗಲ್ಲ ಎನ್ನುವ ವಿಚಾರ ಕೂಡ ನನಗೆ ಗೊತ್ತು. ಆದರೆ ನಾನು ಅದನ್ನು ಹೇಳುವುದಿಲ್ಲವೆಂದು ಹೇಳಿ ವೇಣು ಸ್ವಾಮಿ ಎಲ್ಲರೂ ದಂಗಾಗುವ ಹಾಗೆ ಮಾಡಿದ್ದಾರೆ. ಇದರ ಜೊತೆಗೆ ಪ್ರಭಾಸ್ ಜಾತಕದಲ್ಲಿ ದೋಷವಿದೆ, ತಂದೆ ನಟ ಕೃಷ್ಣಂರಾಜು ಜಾತಕವೂ ನನಗೆ ಗೊತ್ತು. ಪ್ರಭಾಸ್‌ಗೆ ಮದುವೆ ಯೋಗವಿಲ್ಲವೆಂದು ಹೇಳಿದ್ದಾರೆ. ಹೀಗೆ ನಟ ಪ್ರಭಾಸ್ ಮದುವೆ ಕುರಿತು ಇವರು ಈ ರೀತಿ ಹೇಳ್ತಿರೋದು ಇದೇ ಮೊದಲ ಬಾರಿ ಅಲ್ಲ. ಈ ಹಿಂದೆಯೂ ನುಡಿದಿದ್ದಾರೆ.

ಇದನ್ನೂ ವೀಕ್ಷಿಸಿ:  ರಜನಿಕಾಂತ್ ಸಮಾಜ ಸೇವೆಗೆ ಹೊಸ ಯೋಜನೆ..! ಬಡವರಿಗಾಗೆ ಆಸ್ಪತ್ರೆ ಕಟ್ಟಿಸುತ್ತಿದ್ದಾರೆ ತಲೈವಾ..!

Video Top Stories