
Vedha: 'ಇಂಥಾ ಸಿನಿಮಾ ನೋಡ್ಬಿಟ್ರಲ್ಲ, ನಾನ್ ಮಾಡಿದ್ದು ದ್ರೋಹ ಅಲ್ವಾ?: ತಂದೆ ಹೇಳಿದ ಕತೆ ನೆನೆದ ಶಿವಣ್ಣ
ಶಿವಣ್ಣನ 125ನೇ ಸಿನಿಮಾ ವೇದ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಬಗ್ಗೆ ಅವರು ಸುವರ್ಣ ನ್ಯೂಸ್ ಜೊತೆ ಅವರು ಮಾತನಾಡಿದ್ದಾರೆ.
ನಾನು 125ನೇ ಸಿನಿಮಾ ಮುಗಿಸಿಲ್ಲ ಎಂದು ಅನಿಸುತ್ತದೆ. ಮೊದಲನೇ ಸಿನಿಮಾ ಮಾಡುವಾಗ ಎಷ್ಟು ಜೋಶ್ ಇತ್ತೋ ಈಗಲೂ ಅದೇ ಜೋಶ್ ಇದೆ. ಅದೇ ಗುಂಗು ಇದೆ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ. ಸಿನಿಮಾದಲ್ಲಿ ನಂಬರ್ ಅಂತ ಬಂದಾಗ ತುಂಬಾ ಮುಖ್ಯವಾಗುತ್ತದೆ. ಅಪ್ಪಾಜಿ ಹೇಳ್ತಾ ಇದ್ರು 100ನೇ ಸಿನಿಮಾನೇ ಚೆನ್ನಾಗಿ ಹೋಗಿಲ್ಲ. ಅಪ್ಪಾಜಿ ನಂಬರ್ ಅನ್ನು ನಂಬುವುದಿಲ್ಲ, ಅವರ 100ನೇ ಸಿನಿಮಾ ಅವರಿಗೆ ಸುಮಾರಿನ ಸಿನಿಮಾ. ಆದರೆ ಚೆನ್ನಾಗಿದೆ ಸಿನಿಮಾ ಅಂದ್ರೆ ಜನ ಅಭಿಮಾದ ಮೇಲೆ ಬಂದು ಸಿನಿಮಾ ನೋಡಿದ್ದಾರೆ. ನನಗೆ ಅಯ್ಯೊ ಎನಿಸಿತು ಇಂಥಾ ಸಿನಿಮಾ ನೋಡ್ಬಿಟ್ರಲ್ಲ, ಅಭಿಮಾನಿಗೆ ನಾನು ಮಾಡಿದ್ದು ದ್ರೊಹ ಅಲ್ಲವಾ ಎಂದು ಹೇಳಿದರು. ಇದು ರಾಜ್ ಕುಮಾರ್ ಅವರ ಉತ್ತಮ ಗುಣ ಎಂದು ಶಿವಣ್ಣ ಹೇಳಿದರು.
Add Asianetnews Kannada as a Preferred Source
