Asianet Suvarna News Asianet Suvarna News

ಏನ್ರೀ ನಿಮ್ಮ ಮೇಕಪ್ ಎಂದು ಕಾಲೆಳೆದ ಸ್ಟಾರ್ ನಟಿಗೆ ಟಾಂಗ್ ಕೊಟ್ಟ ನಯನತಾರಾ

ಆಸ್ಪತ್ರೆ ಸೀನ್‌ ಚಿತ್ರೀಕರಣಕ್ಕೆ ಮೇಕಪ್ ಬೇಕಾ? ಮಾಳವಿಕಾ ಮೋಹನ್‌ಗೆ ಟಾಂಗ್‌ ಕೊಟ್ಟ ನಯನತಾರಾ...

Actress Nayanathara reacts to Malavika Mohanan comment on makeup look vcs
Author
First Published Dec 24, 2022, 4:25 PM IST

ಕನೆಕ್ಟ್‌ ಸಿನಿಮಾ ಪ್ರಚಾರದಲ್ಲಿ ಸಖತ್ ಬ್ಯುಸಿಯಾಗಿರುವ ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಸಾಕಷ್ಟು ಹೊಸ ವಿಚಾರಗಳ ಬಗ್ಗೆ ಮೊದಲ ಸಲ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಲ್ಲದಿದ್ದರೂ ಹೇಗೆ ಪ್ರತಿಯೊಂದರ ಬಗ್ಗೆ ಇಷ್ಟೊಂದು ಅಪ್ಡೇಟ್ ಆಗಿದ್ದಾರೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಈ ವಿಚಾರ ಏನಪ್ಪ ಅಂದ್ರೆ ನಯನತಾರಾ ಮೇಕಪ್ ಬಗ್ಗೆ ಟಾಂಗ್ ಕೊಟ್ಟ ಮಾಳವಿಕಾ ಮೋಹನ್‌ಗೆ ಖಡಕ್ ಉತ್ತರ ಕೊಟ್ಟಿದ್ದಾರೆ. ಉತ್ತರ ಕೊಡುವಾಗ ಎಲ್ಲಿಯೂ ಮಾಳವಿಕಾ ಹೆಸರು ತೆಗೆದಿಲ್ಲ...

'ಒಂದು ಹೀರೋಯಿನ್ ಸಂದರ್ಶನವನ್ನು ನಾನು ನೋಡಿದೆ. ಆಕೆ ನನ್ನ ಹೆಸರನ್ನು ಎಲ್ಲಿಯೂ ಹೇಳಲಿಲ್ಲ ಆದರೆ ನನ್ನ ಬಗ್ಗೆ ಮಾತನಾಡಿದ್ದಾರೆ. ಒಂದು ಆಸ್ಪತ್ರೆ ದೃಶ್ಯದಲ್ಲಿ ನಾನು ಪ್ರೈಮ್ ಆಂಡ್ ಪ್ರಾಪರ್‌ ಆಗಿದ್ದೆ ನನ್ನ ಕೂದಲು ಕೂಡ ಸ್ಟೈಲ್ ಮಾಡಲಾಗಿತ್ತು ಎಂದು. ಆಸ್ಪತ್ರೆಯಲ್ಲಿ ಒಬ್ಬ ವ್ಯಕ್ತಿ ಈ ರೀತಿ ಇರಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದರು. ಆಸ್ಪತ್ರೆಯಲ್ಲಿ ವ್ಯಕ್ತಿ ಪ್ರೈಮ್ ಆಂಡ್ ಪ್ರಾಪರ್ ಆಗಿರಬಾರದು ಎಂದು ನಾನು ಹೇಳುವುದಿಲ್ಲ ಆದರೆ ಹಾಗಂತೆ ಏನೂ ಮಾಡಿಕೊಳ್ಳದೆ ತಪ್ಪಲ್ಲ ಮಾಡಿಕೊಂಡರೆ ತಪ್ಪು ಯಾಕೆ? ಒಬ್ಬ ವ್ಯಕ್ತಿಯನ್ನು ಕೇರ್ ಮಾಡಲು ಮತ್ತೊಬ್ಬರು ಇರುತ್ತಾರೆ ಹೀಗಿರುವಾಗ ಅವೇ ಕೂದಲು ಸರಿ ಮಾಡಿರುತ್ತಾರೆ' ಎಂದು ನಯನತಾರಾ ಉತ್ತರಸಿದ್ದಾರೆ.

Actress Nayanathara reacts to Malavika Mohanan comment on makeup look vcs

'ರಿಯಲಿಸ್ಟಿಕ್‌ ಚಿತ್ರಕ್ಕೂ ಕಮರ್ಷಿಯಲ್ ಚಿತ್ರಕ್ಕೂ ತುಂಬಾನೇ ಡಿಫರೆನ್ಸ್‌ ಇದೆ. ರಿಯಲಿಸ್ಟಿಕ್‌ ಸಿನಿಮಾ ಮಾಡುವಾಗ ಎಷ್ಟೇ ಕಷ್ಟ ಆದರೂ ಪರ್ವಾಗಿಲ್ಲ ಎಂದು ಅ ಲುಕ್‌ನ ಫಾಲೋ ಮಾಡಬೇಕು. ಅದೇ ಕಮರ್ಷಿಯಲ್ ಸಿನಿಮಾ ಆಗಿ ನನಗೆ ಆ ರಿಯಲ್ ಲುಕ್ ಉಳಿಸಿಕೊಳ್ಳಲು ಇಷ್ಟ ಆದರೆ ನಿರ್ದೆಶಕರು ಬೇಡ ಅಷ್ಟೊಂದು ಕೆಟ್ಟದಾಗಿ ಕಾಣಿಸಬಾರದು ಎಂದು ಹೇಳುತ್ತಾರೆ. ಇದೆಲ್ಲಾ ನಿರ್ದೇಶಕರು ಹೇಳುವುದು ಅವರಿಗೆ ಸೀನ್ ಹೇಗೆ ಬೇಕು ಹಾಗೆ ಹೇಳುತ್ತಾರೆ. ಸಿನಿಮಾಗಳಿಗೆ ಕಮರ್ಷಿಯಲ್ ದೃಷ್ಠಿ ಇದ್ದರೆ ಖಂಡಿತಾ ಈ ರೀತಿ ಲುಕ್‌ಗಳು ಅಗತ್ಯವಿರುತ್ತದೆ' ಎಂದು ನಯನತಾರಾ ಹೇಳಿದ್ದಾರೆ.

ನಯನತಾರಾಗೆ ಹುಟ್ಟುಹಬ್ಬದ ಸಂಭ್ರಮ: ಗಂಡನಿಗೆ ಬಂಪರ್ ಗಿಫ್ಟ್ ಕೊಟ್ಟ ಲೇಡಿ ಸೂಪರ್ ಸ್ಟಾರ್

ಸಾಮಾನ್ಯವಾಗಿ ನಯನತಾರಾ ಯಾವ ಸಿನಿಮಾ ಮಾಡಿ ಮುಗಿಸಿ ನನಗೂ ಚಿತ್ರಕ್ಕೂ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ಜೀವನ ನಡೆಸುತ್ತಾರೆ. ತಮ್ಮ ನಿರ್ಮಾಣ ಸಂಸ್ಥೆಯಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾ ಇದಾಗಿರುವ ಕಾರಣ ಸ್ವತಃ ನಯನ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ.  ಮದುವೆ ಮುನ್ನ ಹಾಕಿಕೊಂಡಿದ್ದ ಗೆರೆಯನ್ನು ಮದುವೆ ನಂತರ ನಯನತಾರಾ ಮುರಿದಿದ್ದಾರೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.  ಇನ್ನೂ ನಯನತಾರಾ ಮೇಕಪ್ ವಿಚಾರ ಸಖತ್ ವೈರಲ್ ಆಗುತ್ತಿದೆ. ಕೆಲವು ಮಾಳವಿಕಾ ಮಾತು ಒಪ್ಪಿಕೊಳ್ಳುತ್ತಾರೆ ಇನ್ನೂ ಕೆಲವರು ನಯನ ಸರಿ ಎಂದು ಹೇಳುತ್ತಾರೆ.

ಲೇಡಿ ಸೂಪರ್ ಸ್ಟಾರ್ ಅಭಿನಯಿಸಿರುವ ಬಹುತೇಕ ಸಿನಿಮಾಗಳು ಸೂಪರ್ ಹಿಟ್. ಅದರಲ್ಲೂ ನಯನ ಆಯ್ಕೆ ಮಾಡಿಕೊಳ್ಳುವ ಉಡುಪು ಮತ್ತು ಮೇಕಪ್‌ನ ನೋಡಿದ್ದರೆ ಅಭಿಮಾನಿಗಳು ಕೂಡ ಅದನ್ನೇ ಫಾಲೋ ಮಾಡುತ್ತಾರೆ. ಕನೆಕ್ಟ್‌ ಸಿನಿಮಾದಲ್ಲಿ ನಯನ ನಟನೆ ಚೆನ್ನಾಗಿದೆ ಎಂದಿದ್ದಾರೆ. ಬಿಡುಗಡೆ ಅಗಿ ಕೇವಲ 2 ದಿನಗಳಾಗಿದೆ ಅಷ್ಟೇ ಅಗಲ್ಲೇ 5 ಕೋಟಿ ಕಲೆಕ್ಷನ್ ಮಾಡಿದೆ.

Follow Us:
Download App:
  • android
  • ios