10:46 PM (IST) Sep 08

Karnataka News Live'ಯಾರ ಬಳಿಯೂ ಹಣ ಇಸ್ಕೋಬೇಡ, ಎಲ್ಲರದ್ದೂ ನಾನೇ ಕೊಡ್ತೀನಿ' ಎಂದು ಜೇಬಿನಿಂದ ಗರಿಗರಿ ನೋಟು ಕೊಟ್ಟ ಸಿಎಂ

ಯಶವಂತಪುರ ಎಪಿಎಂಸಿಗೆ ಭೇಟಿ ನೀಡಿದ ಸಿಎಂ ಡಿ.ಕೆ. ಶಿವಕುಮಾರ್, ರೈತರು ಮತ್ತು ವ್ಯಾಪಾರಸ್ಥರ ಸಮಸ್ಯೆಗಳನ್ನು ಆಲಿಸಿ ಮಾರುಕಟ್ಟೆಯ ವ್ಯವಹಾರಗಳ ಬಗ್ಗೆ ಮಾಹಿತಿ ಪಡೆದರು. ಶ್ರಮಿಕರ ಜೊತೆ ಕುಳಿತು ಇಡ್ಲಿ-ಕಾಫಿ ಸವಿದ ಸಿಎಂ, ಹೋಟೆಲ್ ಬಿಲ್ ಪಾವತಿಸಿ ಅಲ್ಲಿನ ಉಳಿದ ಗ್ರಾಹಕರಿಗೂ ಉಚಿತ ಉಪಹಾರದ ವ್ಯವಸ್ಥೆ ಮಾಡಿ ಅಚ್ಚರಿ ಮೂಡಿಸಿದರು.

Read Full Story
10:21 PM (IST) Sep 08

Karnataka News Liveಮಧು ಬಂಗಾರಪ್ಪ, ರಾಘವೇಂದ್ರ ಮುಖಾಮುಖಿ - ನಂತರ ಆಗಿದ್ದೇನು ಗೊತ್ತಾ?

ಶಿಕಾರಿಪುರದಲ್ಲಿ ನಡೆದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಸಚಿವ ಮಧು ಬಂಗಾರಪ್ಪ ಅವರ ಬೆಂಬಲಿಗರ ನಡುವೆ ಘೋಷಣೆಗಳ ಪೈಪೋಟಿ ನಡೆಯಿತು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮಧು ಬಂಗಾರಪ್ಪ ಪರವಾಗಿ 'ಮುಂದಿನ ಸಿಎಂ' ಘೋಷಣೆ ಕೂಗಿದ್ದು, ನಂತರ ಇಬ್ಬರೂ ನಾಯಕರು ಜಂಟಿಯಾಗಿ ಬಂದು ಕಾರ್ಯಕರ್ತರನ್ನು ಶಾಂತಗೊಳಿಸಿದರು.

Read Full Story
10:04 PM (IST) Sep 08

Karnataka News Liveರಾಜ್ಯ ಪರಿಷತ್‌ಗೆ ಕೆಲವು ಮಹತ್ವದ ಶಿಫಾರಸು ಕಳಿಸಲು ನಿರ್ಧಾರ, ಎಸ್‌ಸಿಎಸ್‌/ಟಿಎಸ್‌ಪಿ ಪರಿಶೀಲನಾ ಸಭೆ

ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯಡಿ 2026-27ನೇ ಸಾಲಿನ ಅನುದಾನ ಹಂಚಿಕೆ ಮತ್ತು ಬಳಕೆ ಕುರಿತು ಕೆಲವು ಮಹತ್ವದ ಶಿಫಾರಸುಗಳನ್ನು ರಾಜ್ಯಪರಿಷತ್‌ಗೆ ಕಳುಹಿಸಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಕೈಗೊಂಡ ನಿರ್ಣಯಗಳೇನು

Read Full Story
09:53 PM (IST) Sep 08

Karnataka News LiveBCCI ಖಜಾನೆಗೆ ಕುಬೇರನ ಕೃಪೆ - ChatGPT ಜೊತೆ ಬಿಗ್ ಡೀಲ್, ಒಂದೊಂದು ಪಂದ್ಯಕ್ಕೂ ಕೋಟಿ ಕೋಟಿ ಹಣ

ಭಾರತದಲ್ಲಿ ನಡೆಯಲಿರುವ ಕ್ರಿಕೆಟ್ ಸರಣಿಗಳಿಗಾಗಿ ಬಿಸಿಸಿಐ, ಚಾಟ್‌ಜಿಪಿಟಿ ಸೇರಿದಂತೆ ಮೂರು ಕಂಪನಿಗಳ ಜೊತೆ 130 ಕೋಟಿ ರೂ.ಗೂ ಅಧಿಕ ಮೊತ್ತದ ಒಪ್ಪಂದ ಮಾಡಿಕೊಂಡಿದೆ. ಹಿಂದಿನ ಅವಧಿಗಿಂತ ಶೇ. 44 ರಷ್ಟು ಹೆಚ್ಚಿನ ಹಣ ಬಿಸಿಸಿಐ ಖಜಾನೆಗೆ ಸೇರಲಿದ್ದು, ಭಾರತೀಯ ಕ್ರಿಕೆಟ್‌ನ ವಾಣಿಜ್ಯ ಮೌಲ್ಯ ಮತ್ತಷ್ಟು ಹೆಚ್ಚಾಗಿದೆ.

Read Full Story
09:45 PM (IST) Sep 08

Karnataka News Liveನನಸಾಗುವತ್ತ ಭದ್ರಾ ಮೇಲ್ದಂಡೆ ಯೋಜನೆಯ ಸುದೀರ್ಘ ಕನಸು, ಭದ್ರೆ ಹರಿವಿಗೆ ಚಾಲನೆ ನೀಡಿದ ಸಚಿವ

ಭದ್ರಾ ಮೇಲ್ದಂಡೆ ಯೋಜನೆಯಡಿ ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆಗೆ ಭಾನುವಾರ ಪ್ರಾಯೋಗಿಕವಾಗಿ ನೀರು ಹರಿಸಲಾಯಿತು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಲಕ್ಕವಳ್ಳಿ ಅಣೆಕಟ್ಟಿನಲ್ಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

Read Full Story
09:29 PM (IST) Sep 08

Karnataka News Liveಮಕ್ಕಳಲ್ಲಿ ಜಂತು ಹುಳು - ಪತ್ತೆ ಹಚ್ಚುವುದು ಹೇಗೆ?

ಕೇವಲ ಸಿಹಿ ತಿಂದರೆ ಹೊಟ್ಟೆಯಲ್ಲಿ ಹುಳುಗಳಾಗುತ್ತವೆ ಎನ್ನುವುದು ತಪ್ಪು ಕಲ್ಪನೆ. ನೈರ್ಮಲ್ಯದ ಕೊರತೆಯೇ ಈ ಸಮಸ್ಯೆಗೆ ಮೂಲ ಕಾರಣ. ಮಗುವಿನಲ್ಲಿ ಮೇಲೆ ತಿಳಿಸಿದ ಲಕ್ಷಣಗಳಿದ್ದರೆ ಸ್ವಯಂ ಚಿಕಿತ್ಸೆ ಮಾಡದೆ ವೈದ್ಯರನ್ನು ಸಂಪರ್ಕಿಸಿ.

Read Full Story
09:14 PM (IST) Sep 08

Karnataka News Liveಕರ್ನಾಟಕದಲ್ಲಿ ಘಟಕ ಆರಂಭಿಸಿ - ಫ್ರಾನ್ಸ್‌ನ 5 ಕಂಪನಿಗಳಿಗೆ ಸಚಿವ ಎಂ.ಬಿ ಪಾಟೀಲ ಆಹ್ವಾನ

ಕರ್ನಾಟಕಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಫ್ರಾನ್ಸ್ ಪ್ರವಾಸದಲ್ಲಿರುವ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಅವರು Thales, Somfy, Mecachrome, SevenCia ಮತ್ತು Danone ಕಂಪನಿಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.

Read Full Story
09:08 PM (IST) Sep 08

Karnataka News Liveಬೆಂಗಳೂರಲ್ಲಿ BRE ಶೃಂಗಸಭೆ, ಕರ್ನಾಟಕದ ಶುದ್ಧ ಇಂಧನ ಸಾಮರ್ಥ್ಯಕ್ಕೆ ರಾಷ್ಟ್ರೀಯ ಮನ್ನಣೆ

ಭಾರತ ನವೀಕರಿಸಬಹುದಾದ ಇಂಧನ (BRE) ಶೃಂಗಸಭೆ ಮತ್ತು ಎಕ್ಸ್‌ಪೋ 2026ರ ಭಾಗವಾಗಿ ಬೆಂಗಳೂರಿನಲ್ಲಿ ಐದನೇ ಪ್ರಾದೇಶಿಕ ರೋಡ್‌ಶೋ ನಡೆದಿದೆ. ಇಂಧನ ಸಾಮರ್ಥ್ಯ ಸೇರ್ಪಡೆ, ₹7.5 ಲಕ್ಷ ಕೋಟಿ ಹೂಡಿಕೆ ಮತ್ತು 20 ಲಕ್ಷ ಉದ್ಯೋಗ ಸೃಷ್ಟಿ ಗುರಿಯೊಂದಿಗೆ ಕರ್ನಾಟಕ ಹೆಜ್ಜೆ ಇಟ್ಟಿದೆ.

Read Full Story
09:01 PM (IST) Sep 08

Karnataka News Liveಬರಗಾಲದ ನಡುವೆ ವಿದ್ಯುತ್‌ಗಾಗಿ ಸರ್ಕಾರದ ಹೊಸ ಪ್ಲ್ಯಾನ್ - ಸಚಿವ ಕೆ.ಜೆ. ಜಾರ್ಜ್ ಹೇಳಿದ್ದೇನು?

ರಾಜ್ಯದಲ್ಲಿ ಬರಗಾಲ ಇದ್ದರೂ ವಿದ್ಯುತ್ ಸಮಸ್ಯೆ ತಲೆದೋರದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಅಗತ್ಯ ವಿದ್ಯುತ್ ಪೂರೈಕೆಗೆ ಸರ್ಕಾರ ಬದ್ಧವಾಗಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

Read Full Story
08:46 PM (IST) Sep 08

Karnataka News Liveಕೇರಳದಿಂದ ಮಂಗಳೂರು ರೈಲ್ವೇ ಆಡಳಿತಾತ್ಮಕ ವರ್ಗಾವಣೆ ಶುರು, ಕರಾವಳಿ ಈಗ ಆಪರೇಶನಲ್ ಹಬ್

ಕೇರಳದ ಪಾಲಕ್ಕಾಡ್ ಕಪಿಮುಷ್ಠಿಯಲ್ಲಿದ್ದ ಮಂಗಳೂರು ರೈಲ್ವೇಯನ್ನು ಮೈಸೂರಿಗೆ ಡಿವಿಶನ್‌ಗೆ ವರ್ಗಾಯಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಆಡಳಿತಾತ್ಮಕ ವರ್ಗಾವಣೆಯಿಂದ ಇದೀಗ ಪ್ರತಿ ದಿನ 100ಕ್ಕೂ ಹೆಚ್ಚು ರೈಲುಗಳಿಗೆ ಮಂಗಳೂರು ನಿಲ್ದಾಣವಾಗಿದೆ.

Read Full Story
08:36 PM (IST) Sep 08

Karnataka News Liveಬೆಂಗಳೂರು ದ್ವಿಚಕ್ರ ಸವಾರರಿಗೆ ಗುಡ್ ನ್ಯೂಸ್, ಫ್ಲೈ ಓವರ್ ಸಂಚಾರ ನಿರ್ಬಂಧದಲ್ಲಿ ಮಹತ್ವದ ಬದಲಾವಣೆ

ಬೆಂಗಳೂರಿನ ಬೈಕ್, ಸ್ಕೂಟರ್ ಸೇರಿದಂತೆ ದ್ವಿಚಕ್ರ ವಾಹನ ಸವಾರರಿಗೆ ಗುಡ್ ನ್ಯೂಸ್ ಹೊರಬಂದಿದೆ. ಬೆಂಗಳೂರಿನ ಕೆಲ ಫ್ಲೈ ಓವರ್ ಮೇಲೆ ಬೈಕ್ ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಲಾಗಿತ್ತು. ಇದೀಗ ಮಹತ್ವದ ಬದಲಾವಣೆ ಮಾಡಲಾಗಿದೆ.

Read Full Story
08:21 PM (IST) Sep 08

Karnataka News Liveಮಾತು ಕೇಳದ ಅಧಿಕಾರಿಗಳನ್ನು ಫೈರ್ ಮಾಡ್ತೇನೆ - ಸಚಿವ ರಾಯರೆಡ್ಡಿ ಬೆದರಿಕೆ

ಮಾತು ಕೇಳದ ಅಧಿಕಾರಿಗಳನ್ನು ಫೈರ್ ಮಾಡುವುದಾಗಿ ಬೆದರಿಕೆ ಹಾಕಿದ ಸಚಿವ ಬಸವರಾಜ ರಾಯರೆಡ್ಡಿ, ತಹಶೀಲ್ದಾರ್ ತಮ್ಮ ಪಿಆರ್‌ಒ ಆಗಿ ಕೆಲಸ ಮಾಡಲಿ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ತಮ್ಮ ಅನುಪಸ್ಥಿತಿಯಲ್ಲಿ ಡಿಜಿಟಲ್ ಸಿಗ್ನೇಚರ್ ಬಳಸಿ ಪತ್ರ ವಿಲೇವಾರಿ ಮಾಡುವಂತೆ ಪಿಎಗೆ ಸೂಚಿಸಿರುವ ಸಚಿವರು, ಅಧಿಕಾರಿಗಳ ವಿರುದ್ಧ ಅತಿರೇಕದ ಮಾತುಗಳನ್ನಾಡಿದ್ದಾರೆ.

Read Full Story
07:51 PM (IST) Sep 08

Karnataka News Liveಹಮ್ಮು-ಬಿಮ್ಮು ಇಲ್ಲದ ಅಮಾಯಕಿ.. ದೇವತೆ - ಸೌಂದರ್ಯರನ್ನು ಮದುವೆಯಾಗಬೇಕು ಅನಿಸುತ್ತಿತ್ತು ಎಂದ ನಟ ವಿಕ್ರಮ್

ಚಿಯಾನ್ ವಿಕ್ರಮ್ ತಮ್ಮ ಜೊತೆ ಕೆಲಸ ಮಾಡಿದ ನಾಯಕಿಯರ ಬಗ್ಗೆ ಮಾತನಾಡುತ್ತಾ, ದಿವಂಗತ ನಟಿ ಸೌಂದರ್ಯ ಅವರನ್ನು ಅತ್ಯಂತ ಸುಂದರ ನಟಿ ಎಂದು ಕರೆದಿದ್ದರು. ಸೌಂದರ್ಯ ಅವರನ್ನು ಮದುವೆಯಾಗಬೇಕು ಅನಿಸುವಷ್ಟು ಸುಂದರ ಹಾಗೂ ಅಮಾಯಕ ವ್ಯಕ್ತಿತ್ವ ಹೊಂದಿದ್ದರು.

Read Full Story
07:09 PM (IST) Sep 08

Karnataka News Liveದರ್ಶನ್ ಪರ ವಕೀಲರಿಂದ ಮಹತ್ವದ ಹೇಳಿಕೆ; ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಗುವ ನಿರೀಕ್ಷೆ

ದರ್ಶನ್ ಅವರ ಖುದ್ದೂ ಹಾಜರಾತಿ ಅರ್ಜಿಯನ್ನು ಸತ್ರ ನ್ಯಾಯಾಲಯ ವಜಾ ಮಾಡಿದ್ದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿರುವುದಾಗಿ ವಕೀಲ ನಾಸಿರ್ ಅಲಿ ತಿಳಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್‌ನಲ್ಲಿ ತಾಂತ್ರಿಕ ದೋಷಗಳಿವೆ ಎಂದು ವಾದಿಸಿರುವ ಅವರು, ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಮಾಡಿದ ಪ್ರಕ್ರಿಯೆಯಲ್ಲಿ ಲೋಪವಾಗಿದೆ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದಾರೆ

Read Full Story
06:54 PM (IST) Sep 08

Karnataka News Liveಪಕ್ಕದಲ್ಲಿದ್ರೂ ಗುರುತಿಸದ ಗಣ್ಯ ವ್ಯಕ್ತಿ - ಕನ್ನಡತಿ ಅಕ್ಕ ಖ್ಯಾತಿಯ ಅನು ನೋವಿನ ಮಾತು

'ಕೆಚ್ಚೆದೆಯ ಕನ್ನಡತಿ ಅಕ್ಕ' ಖ್ಯಾತಿಯ ಅನು, ಮಹಿಳಾ ಸಮಾವೇಶವೊಂದರಲ್ಲಿ ತಮ್ಮನ್ನು ಗುರುತಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಪಕ್ಕದಲ್ಲಿದ್ದ ರೀಲ್ಸ್ ಕಲಾವಿದರನ್ನು ಹೊಗಳಿದ ಗಣ್ಯರು, ಸಮಾಜಕ್ಕಾಗಿ ದುಡಿಯುತ್ತಿರುವ ತಮ್ಮನ್ನು ಕಡೆಗಣಿಸಿದ್ದು ನೋವು ತಂದಿದೆ ಎಂದು ಅವರು ಬರೆದುಕೊಂಡಿದ್ದಾರೆ.

Read Full Story
06:20 PM (IST) Sep 08

Karnataka News Liveಪ್ರತಿಷ್ಠಿತ ಕಂಪನಿ ಯಜಮಾನನ ದೊಡ್ಡ ಮನಸ್ಸು; ತನ್ನ ಉದ್ಯೋಗಿಗಳಿಗೆ 20 ಕೋಟಿ ರೂ ಮೌಲ್ಯದ ಷೇರು ಗಿಫ್ಟ್

ಸಿಂಫನಿ ಲಿಮಿಟೆಡ್ ಸ್ಥಾಪಕ ಅಚಲ್ ಅನಿಲ್ ಬಕೇರಿ ಅವರು ತಮ್ಮ ಉದ್ಯೋಗಿಗಳಿಗೆ 20 ಕೋಟಿ ರೂ. ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದು, ಇದರಿಂದ ಷೇರು ಬೆಲೆ ಶೇ. 13 ರಷ್ಟು ಏರಿಕೆಯಾಗಿದೆ. ಕೂಲರ್ ಜೊತೆಗೆ ಎಸಿ ಮತ್ತು ಫ್ಯಾನ್ ಮಾರುಕಟ್ಟೆಗೂ ಪ್ರವೇಶಿಸಲು ಕಂಪನಿ ಸಜ್ಜಾಗಿದ್ದು, ಇದು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿದೆ.

Read Full Story
06:10 PM (IST) Sep 08

Karnataka News Liveಶ್ರಾವಣಿ Rock, ರಾಮ್ Shock - ದೊಡ್ಮನೆಯಲ್ಲಿ ಹತ್ತಿಕೊಳ್ತು ಆಟದ ಬೆಂಕಿ, ಆಸಿಯಾ ಗರಂ

ಡೈಮಂಡ್ ಹುಡುಕಾಟದ ಟಾಸ್ಕ್‌ನಲ್ಲಿ, ಗಗನ್ ಚಿನ್ನಪ್ಪ ತಮ್ಮ ಬಳಿಯಿದ್ದ ಡೈಮಂಡ್ ಅನ್ನು ಮುಚ್ಚಿಟ್ಟು ಆಸಿಯಾ ಮೇಲೆ ಅನುಮಾನ ಬರುವಂತೆ ಮಾಡುತ್ತಾರೆ. ಇದರಿಂದ ಕೋಪಗೊಂಡ ಆಸಿಯಾ, ತನ್ನನ್ನು ಗಗನ್ ಮತ್ತು ತಾಂಡವ್ ರಾಮ್ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ.
Read Full Story
06:04 PM (IST) Sep 08

Karnataka News Liveಗಂಡನಿಗೆ ಡಿವೋರ್ಸ್.. ಉಪೇಂದ್ರ ಜೊತೆ ಲವ್? ಕೊನೆಗೂ ಆ ಸೀಕ್ರೆಟ್ ಬಿಚ್ಚಿಟ್ಟ ನಟಿ ಪ್ರೇಮಾ

ನಟಿ ಪ್ರೇಮಾ ತಮ್ಮ ವಿಚ್ಛೇದನದ ಬಗ್ಗೆ ಇದೇ ಮೊದಲ ಬಾರಿಗೆ ಹಲವು ವಿಚಾರಗಳನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ಇದೇ ವೇಳೆ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಉಪೇಂದ್ರ ಜೊತೆ ಪ್ರೀತಿಯಲ್ಲಿದ್ದರು ಎಂಬ ಹಳೆಯ ರೂಮರ್ಸ್‌ಗೂ ಸ್ಪಷ್ಟನೆ ನೀಡಿದ್ದಾರೆ.

Read Full Story
05:40 PM (IST) Sep 08

Karnataka News Liveಲಂಕಾಧಿಪತಿ ಯಶ್ ಘರ್ಜನೆಗೆ ಬ್ರೇಕ್? - 'ರಾಮಾಯಣ' ಪ್ರಮೋಷನ್‌ಗೆ ಯಾಕಿಷ್ಟು ಸೈಲೆನ್ಸ್?

ಯಶ್ ಅಭಿನಯದ ‘ರಾಮಾಯಣ’ ಸಿನಿಮಾ ಬರೋಬ್ಬರಿ 4 ಸಾವಿರ ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ ಎನ್ನಲಾಗಿದ್ದು, ಚಿತ್ರದ ಮೇಲೆ ಭಾರೀ ನಿರೀಕ್ಷೆಗಳಿವೆ. ‘ಟಾಕ್ಸಿಕ್’ ಫಲಿತಾಂಶ, ಸಿನಿಮಾ ಬಿಸಿನೆಸ್ ಹಾಗೂ ಸರಿಯಾದ ಸಮಯಕ್ಕಾಗಿ ಮೇಕರ್ಸ್ ಕಾಯುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

Read Full Story
05:30 PM (IST) Sep 08

Karnataka News LiveMysuru - ವಿದ್ಯಾರ್ಥಿಗೆ ಥಳಿಸಿದ ಆರೋಪ, ಶಿಕ್ಷಕನ ವಿರುದ್ಧ ಎಫ್‌ಐಆರ್ ದಾಖಲು

ಮೈಸೂರಿನಲ್ಲಿ 10ನೇ ತರಗತಿ ವಿದ್ಯಾರ್ಥಿಗೆ ವಿಜ್ಞಾನ ಶಿಕ್ಷಕ ಥಳಿಸಿದ ಆರೋಪ ಕೇಳಿಬಂದಿದೆ. ಆರಂಭದಲ್ಲಿ ಭಯದಿಂದ ಸುಳ್ಳು ಹೇಳಿದ್ದ ವಿದ್ಯಾರ್ಥಿ, ನಂತರ ಸತ್ಯ ಬಾಯ್ಬಿಟ್ಟಿದ್ದು, ಶಿಕ್ಷಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪ್ರಕರಣ ಮುಚ್ಚಿಹಾಕುವ ಯತ್ನ ನಡೆದಿದೆ ಎಂಬ ಆರೋಪವೂ ಕೇಳಿಬಂದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story