ಗಣೇಶ ಚತುರ್ಥಿಗಾಗಿ ಮಾರಾಟಕ್ಕೆ ರಸ್ತೆ ಬದಿ ಇರಿಸಿದ್ದ ಗಣಪತಿ ಮೂರ್ತಿ ಬೆಳಗ್ಗೆ ಮಂಗಮಾಯವಾಗಿರುವ ಘಟನೆ ಬೆಂಗಳೂರಿನ ದಾಸರಹಳ್ಳಿಯಲ್ಲಿ ನಡೆದಿದ್ದು, ಸಿಸಿಟಿವಿ ಪರಿಶೀಲಿಸಿದಾಗ ಘಟನೆಯ ದೃಶ್ಯ ಕಂಡು ಶಾಕ್ ಆಗಿದ್ದಾರೆ. ಬೆಳಗಿನ ಜಾವ ನಾಲ್ಕಕ್ಕೆ ನಡೆದಿದ್ದೇನು?

ಬೆಂಗಳೂರು (ಸೆ.8): ಗಣೇಶ ಚತುರ್ಥಿಗಾಗಿ ಮಾರಾಟಕ್ಕೆ ರಸ್ತೆ ಬದಿ ಇರಿಸಿದ್ದ ಗಣಪತಿ ಮೂರ್ತಿಯನ್ನು ಖದೀಮರು ಕದ್ದೊಯ್ದಿರುವ ಘಟನೆ ಮಾಗಡಿ ರಸ್ತೆಯ ದಾಸರಹಳ್ಳಿಯಲ್ಲಿ ನಡೆದಿದೆ.

ನಸುಕಿನ ಜಾವ ಗಣಪತಿ ಮೂರ್ತಿ ಕಳವು!

ಸೋಮವಾರ ನಸುಕಿನ ಜಾವ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ಬಂದ ನಾಲ್ವರು ಕಳ್ಳರು, ಮಾಗಡಿ ರಸ್ತೆಯ ದಾಸರಹಳ್ಳಿಯಲ್ಲಿ ರಸ್ತೆ ಬದಿ ಇರಿಸಿದ್ದ ಗಣಪತಿ ಮೂರ್ತಿಯನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.

ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಖದೀಮರು ನಸುಕಿನ ಜಾವ ಟಾಟಾ ಏಸ್‌ ಗೂಡ್ಸ್ ನಲ್ಲಿ ಗಣೇಶ ಮೂರ್ತಿಗಳನ್ನ ಕದ್ದೊಯ್ದ ದೃಶ್ಯ ಪಕ್ಕದ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.