MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
CM DK Shivakumar vs HD Devegowda
CM Visits APMC
Today's Horoscope in Kannada
Mekedatu Project Cost
CWRC Meeting Today
KPSC Scam
Ganesh Idol Theft
Mandya Children Wedding
Swachh Vayu Survekshan
108 Ambulance Services
LPG Booking Rules
National Film Awards Ceremony
  • Home
  • Entertainment
  • ಲಂಕಾಧಿಪತಿ ಯಶ್ ಘರ್ಜನೆಗೆ ಬ್ರೇಕ್?: 'ರಾಮಾಯಣ' ಪ್ರಮೋಷನ್‌ಗೆ ಯಾಕಿಷ್ಟು ಸೈಲೆನ್ಸ್?

ಲಂಕಾಧಿಪತಿ ಯಶ್ ಘರ್ಜನೆಗೆ ಬ್ರೇಕ್?: 'ರಾಮಾಯಣ' ಪ್ರಮೋಷನ್‌ಗೆ ಯಾಕಿಷ್ಟು ಸೈಲೆನ್ಸ್?

ಯಶ್ ಅಭಿನಯದ ‘ರಾಮಾಯಣ’ ಸಿನಿಮಾ ಬರೋಬ್ಬರಿ 4 ಸಾವಿರ ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ ಎನ್ನಲಾಗಿದ್ದು, ಚಿತ್ರದ ಮೇಲೆ ಭಾರೀ ನಿರೀಕ್ಷೆಗಳಿವೆ. ‘ಟಾಕ್ಸಿಕ್’ ಫಲಿತಾಂಶ, ಸಿನಿಮಾ ಬಿಸಿನೆಸ್ ಹಾಗೂ ಸರಿಯಾದ ಸಮಯಕ್ಕಾಗಿ ಮೇಕರ್ಸ್ ಕಾಯುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

2 Min read
Author : Govindaraj S
Published : Sep 08 2026, 05:40 PM IST
Share this Photo Gallery
  • FB
  • TW
  • Linkdin
  • Whatsapp
16
ಚಿತ್ರತಂಡದ ಮೌನ
Image Credit : YouTube

ಚಿತ್ರತಂಡದ ಮೌನ

ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಸಿನಿಮಾಗಳಲ್ಲಿ ಒಂದೆಂದು ಹೇಳಲಾಗುತ್ತಿರುವ ಯಶ್ ಅಭಿನಯದ ‘ರಾಮಾಯಣ’ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಬರೋಬ್ಬರಿ 4 ಸಾವಿರ ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ ಎನ್ನಲಾಗುತ್ತಿರುವ ಈ ಮೆಗಾ ಪ್ರಾಜೆಕ್ಟ್ ಮೇಲೆ ಸಹಜವಾಗಿಯೇ ನಿರೀಕ್ಷೆಗಳು ಗಗನಕ್ಕೇರಿವೆ. ಆದರೆ ಸಿನಿಮಾ ಪ್ರಮೋಷನ್ ವಿಚಾರಕ್ಕೆ ಬಂದರೆ ಮಾತ್ರ ಚಿತ್ರತಂಡದ ಮೌನ ಇದೀಗ ಅಚ್ಚರಿ ಮೂಡಿಸುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಪ್ಲ್ಯಾನ್‌ನ ಭಾಗವೇ?
Image Credit : X

ಪ್ಲ್ಯಾನ್‌ನ ಭಾಗವೇ?

ಸಾಮಾನ್ಯವಾಗಿ ನೂರು ಕೋಟಿ ರೂ. ಬಜೆಟ್‌ನ ಸಿನಿಮಾಗಳಿಗೂ ಭರ್ಜರಿ ಪ್ರಚಾರ ನಡೆಸುವ ನಿರ್ಮಾಪಕರು, ಇಷ್ಟು ದೊಡ್ಡ ಮೊತ್ತದ ಸಿನಿಮಾವನ್ನು ಪ್ರಮೋಟ್ ಮಾಡುವಲ್ಲಿ ಯಾಕೆ ಇಷ್ಟೊಂದು ಸೈಲೆಂಟ್ ಆಗಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಹಾಗಾದರೆ ಇದು ಚಿತ್ರತಂಡದ ಪ್ಲ್ಯಾನ್‌ನ ಭಾಗವೇ? ಅಥವಾ ಸಿನಿಮಾಗೆ ಸಂಬಂಧಿಸಿದ ಯಾವುದಾದರೂ ವಿಚಾರವನ್ನು ರಹಸ್ಯವಾಗಿಡಲು ಮೇಕರ್ಸ್ ನಿರ್ಧರಿಸಿದ್ದಾರಾ ಎಂಬ ಕುತೂಹಲವೂ ಮೂಡಿದೆ.

Related Articles

Related image1
ಯಶ್ ರಾವಣನಾಗಿ ಅಬ್ಬರಿಸಿದರೆ ಬಾಕ್ಸ್ ಆಫೀಸ್‌ನಲ್ಲಿ ಏನಾಗಬಹುದು? ಆ ಲೆಕ್ಕ ಚುಕ್ತಾ ಮಾಡ್ತಾರಾ?
Related image2
'ಯಶ್ ನಮ್ಮ ಹುಡುಗ, ನನ್ನ ತಮ್ಮನಂತೆ ನೋಡ್ತೀನಿ': ಟಾಕ್ಸಿಕ್ ನೋಡಿ ಶಿವಣ್ಣ ಫುಲ್ ಖುಷ್!
36
ಹೈಪ್ ಕ್ರಿಯೇಟ್ ಮಾಡಿಲ್ಲ
Image Credit : Youtube Screenshot@WorldOfRamayana

ಹೈಪ್ ಕ್ರಿಯೇಟ್ ಮಾಡಿಲ್ಲ

ಈ ಹಿಂದೆ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ಹಾಗೂ ಅದರ ಸುತ್ತಲಿನ ಬೆಳವಣಿಗೆಗಳಿಂದ ‘ರಾಮಾಯಣ’ ಪ್ರಮೋಷನ್‌ಗಳು ಕೊಂಚ ತಡವಾಗಬಹುದು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಇದೀಗ ಬಿಡುಗಡೆಯ ಸಮಯ ಹತ್ತಿರವಾಗುತ್ತಿದ್ದರೂ ಅದೇ ರೀತಿಯ ಮೌನ ಮುಂದುವರಿದಿರುವುದು ಸಿನಿಪ್ರಿಯರ ಗಮನ ಸೆಳೆದಿದೆ. ಈಗಾಗಲೇ ಟ್ರೇಲರ್ ಬಿಡುಗಡೆ ಮಾಡಿರುವ ಚಿತ್ರತಂಡ, ಅದರ ನಂತರ ಪ್ರಮೋಷನ್‌ಗಳಲ್ಲಿ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ.

46
ಬಿಸಿನೆಸ್ ಮಾಡುತ್ತಿಲ್ಲ
Image Credit : Others

ಬಿಸಿನೆಸ್ ಮಾಡುತ್ತಿಲ್ಲ

ಇತ್ತ ಇಷ್ಟು ದೊಡ್ಡ ಬಜೆಟ್ ಇರುವ ಸಿನಿಮಾಗೆ ಬಾಕ್ಸ್ ಆಫೀಸ್ ನಿರೀಕ್ಷೆಗಳು ಹಾಗೂ ಬಿಸಿನೆಸ್ ಒತ್ತಡವೂ ಅಷ್ಟೇ ದೊಡ್ಡದಾಗಿರುತ್ತದೆ. ‘ರಾಮಾಯಣ’ ಅಂದುಕೊಂಡ ಮಟ್ಟದಲ್ಲಿ ಬಿಸಿನೆಸ್ ಮಾಡುತ್ತಿಲ್ಲ ಎಂಬ ಚರ್ಚೆಯೂ ಚಿತ್ರರಂಗದ ವಲಯದಲ್ಲಿ ಕೇಳಿಬರುತ್ತಿದೆ. ಇದಕ್ಕೆ ‘ಟಾಕ್ಸಿಕ್’ ಸಿನಿಮಾದ ಫಲಿತಾಂಶವೂ ಒಂದು ಕಾರಣವಾಗಿರಬಹುದು ಎಂಬ ಮಾತುಗಳು ಹರಿದಾಡುತ್ತಿವೆ.

56
ಮತ್ತೊಂದು ಹಂತ
Image Credit : others

ಮತ್ತೊಂದು ಹಂತ

‘ಟಾಕ್ಸಿಕ್’ ಸಿನಿಮಾ ದೊಡ್ಡ ಯಶಸ್ಸು ಕಂಡಿದ್ದರೆ, ಅದರ ಪರಿಣಾಮವಾಗಿ ‘ರಾಮಾಯಣ’ ಬಿಸಿನೆಸ್ ಕೂಡ ಮತ್ತೊಂದು ಹಂತಕ್ಕೆ ಹೋಗುತ್ತಿತ್ತು ಎಂಬ ಲೆಕ್ಕಾಚಾರ ಕೆಲವರದ್ದು. ಹೀಗಾಗಿ ಪ್ರಮೋಷನ್‌ಗಳನ್ನು ತರಾತುರಿಯಲ್ಲಿ ಆರಂಭಿಸುವ ಬದಲು, ಸರಿಯಾದ ಸಮಯಕ್ಕಾಗಿ ಚಿತ್ರತಂಡ ಕಾಯುತ್ತಿರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

66
ಇಷ್ಟೊಂದು ಸೈಲೆನ್ಸ್ ಯಾಕೆ?
Image Credit : Asianet News

ಇಷ್ಟೊಂದು ಸೈಲೆನ್ಸ್ ಯಾಕೆ?

ಇನ್ನು ಸಾವಿರಾರು ಕೋಟಿ ರೂಪಾಯಿ ಬಜೆಟ್, ಭಾರೀ ತಾರಾಗಣ ಹಾಗೂ ದೊಡ್ಡ ಮಟ್ಟದ ನಿರೀಕ್ಷೆಗಳಿರುವ ‘ರಾಮಾಯಣ’ ಸಿನಿಮಾದ ಪ್ರಮೋಷನ್ ವಿಚಾರದಲ್ಲಿ ಮಾತ್ರ ಇಷ್ಟೊಂದು ಸೈಲೆನ್ಸ್ ಯಾಕೆ ಎಂಬ ಪ್ರಶ್ನೆ ಈಗ ಎಲ್ಲೆಡೆ ಕೇಳಿಬರುತ್ತಿದೆ. ಇದು ಮೇಕರ್ಸ್‌ನ ಮಾಸ್ಟರ್ ಪ್ಲ್ಯಾನಾ? ಅಥವಾ ಬಿಸಿನೆಸ್ ಲೆಕ್ಕಾಚಾರದ ಹಿಂದಿನ ತಂತ್ರವಾ? ಮುಂದಿನ ದಿನಗಳಲ್ಲಿ ಚಿತ್ರತಂಡದ ನಡೆ ಇದಕ್ಕೆ ಉತ್ತರ ನೀಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ಯಶ್
ರಾಮಾಯಣ ಚಲನಚಿತ್ರ
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್

Latest Videos
Recommended Stories
Recommended image1
ಭಾರತದ ಶೇ.80ರಷ್ಟು ಚಿನ್ನ ಅಮಿತಾಭ್​ ಮೊಮ್ಮಗಳ ಮೈಮೇಲೆ? ನವ್ಯಾ ನವೇಲಿ ನಂದಾ ಚಿನ್ನದ ಡ್ರೆಸ್​ ಮಹಿಮೆ
Recommended image2
ರುಕ್ಮಿಣಿ, ಕಯಾದು ಸೇರಿದಂತೆ ಸೌತ್‌ನಲ್ಲಿ ಈ ನಟಿಯರದ್ದೇ ಸುದ್ದಿ: ಭಾಷೆಯ ಗಡಿ ದಾಟಿದ ಬ್ಯೂಟೀಸ್!
Recommended image3
Bigg Boss Kannada ಮನೆಯಲ್ಲಿ ನಾನವನಲ್ಲ, ನಾನವನಲ್ಲ ಆಟ ಶುರು; ಹಾಗಾದ್ರೆ ಯಾರವನು?
Related Stories
Recommended image1
ಯಶ್ ರಾವಣನಾಗಿ ಅಬ್ಬರಿಸಿದರೆ ಬಾಕ್ಸ್ ಆಫೀಸ್‌ನಲ್ಲಿ ಏನಾಗಬಹುದು? ಆ ಲೆಕ್ಕ ಚುಕ್ತಾ ಮಾಡ್ತಾರಾ?
Recommended image2
'ಯಶ್ ನಮ್ಮ ಹುಡುಗ, ನನ್ನ ತಮ್ಮನಂತೆ ನೋಡ್ತೀನಿ': ಟಾಕ್ಸಿಕ್ ನೋಡಿ ಶಿವಣ್ಣ ಫುಲ್ ಖುಷ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved