ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ, ಮನೆಯ ಮುಂದೆ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸಂತೋಷ ಗೌಡ ಮತ್ತು ಸೀತಾ ಗೌಡ ದಂಪತಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಪತಿಯನ್ನು ರಕ್ಷಿಸಲು ಹೋದ ಪತ್ನಿಗೂ ವಿದ್ಯುತ್ ತಗುಲಿದ್ದು, ಈ ಘಟನೆಗೆ ಹೆಸ್ಕಾಂನ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪ
Karnataka News Live: ಕಾರವಾರ - ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ದಾರುಣ ಸಾವು!

ಕೋಲಾರ/ತುಮಕೂರು: ಆರ್ಎಸ್ಎಸ್ ನೂರು ವರ್ಷ ಹಿನ್ನೆಲೆ ಕೋಲಾರದ ಶ್ರೀನಿವಾಸಪುರದಲ್ಲಿ ಶನಿವಾರ ಆರ್ಎಸ್ಎಸ್ ಪಂಥ ಸಂಚಲನ ನಡೆದಿದ್ದು, ಈ ವೇಳೆ 'ಅಲ್ಲಾಹು ಅಕ್ಟರ್' ಘೋಷಣೆ ಮೊಳಗಿದೆ. ಪಥ ಸಂಚಲನ ಟಿಪ್ಪು ಸರ್ಕಲ್ ನ ಮಸೀದಿ ಬಳಿಗೆ ಬರುತ್ತಿದ್ದಂತೆಯೇ ಕೆಲ ಅನ್ಯಕೋಮಿನ ಜನ 'ಅಲ್ಲಾಹು ಅಕ್ಟರ್' ಎಂದು ಪ್ರತಿಘೋಷಣೆ ಕೂಗಿದರು. ಅಲ್ಲದೆ ಆಝಾನ್ ಕೂಗುವ ವೇಳೆ ಪಥ ಸಂಚಲನಕ್ಕೆ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಉದ್ವಿಘ್ನ ವಾತಾವರಣ ಉಂಟಾಯಿತು. ಪೊಲೀಸರು, ಮಧ್ಯ ಪ್ರವೇಶಿಸಿ ತಿಳಿಗೊಳಿಸಿದರು.
ಈ ಮಧ್ಯೆ, ತುಮಕೂರಲ್ಲಿ ಆರ್ಎಸ್ಎಸ್ ಪಥ ಸಂಚಲನ ಶಾಂತಿಯುತವಾಗಿ ಮುಕ್ತಾಯಗೊಂಡಿತು. ನಗರದ 2 ಮಾರ್ಗದಲ್ಲಿ ಪಥ ಸಂಚಲನ ನಡೆಯಿತು. ಮೊದಲನೇ ಪಥ ಸಂಚಲನ ಹಳೆ ಡಿಡಿಪಿಐ ಕಚೇರಿ ಮುಂಭಾಗದಿಂದ ಪ್ರಾರಂಭವಾಗಿ ಹೊರಪೇಟೆ ರಸ್ತೆವರೆಗೆ ಸಾಗಿತು. ಎರಡನೇ ಪಥ ಸಂಚಲನ, ಜೂನಿಯರ್ ಕಾಲೇಜು ಮೈದಾನದಿಂದ ಪ್ರಾರಂಭವಾಗಿ ಜೂನಿಯರ್ಕಾಲೇಜಿನಲ್ಲಿ ಮುಕ್ತಾಯವಾಯಿತು. ಪಥ ಸಂಚಲನದಲ್ಲಿ ಶಾಸಕರಾದ ಜಿ.ಬಿ. ಜ್ಯೋತಿ ಗಣೇಶ್, ಸುರೇಶ್ ಗೌಡ ಸೇರಿ ಸ್ವಯಂ ಸೇವಕರು, ಸಂಘ ಪರಿವಾರದ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾದರು
Karnataka News Live 19 October 2025 ಕಾರವಾರ - ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ದಾರುಣ ಸಾವು!
Karnataka News Live 19 October 2025 ದೀಪಾವಳಿ ಹುಡುಗರು ಉಳಿದ್ರು, ದಿವಾಳಿ ಹುಡುಗರು ಹೋದ್ರು.. ಬೆಂಗಳೂರಿನ ರಸ್ತೆಗಳು ಖಾಲಿ ಖಾಲಿ!
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಾವಿರಾರು ಜನರು ತಮ್ಮ ಊರುಗಳಿಗೆ ತೆರಳಿದ್ದರಿಂದ, ಬೆಂಗಳೂರಿನ ರಸ್ತೆಗಳು ಅನಿರೀಕ್ಷಿತವಾಗಿ ಖಾಲಿಯಾಗಿವೆ. ಹಿಂದೆ ಟ್ರಾಫಿಕ್ ಜಾಮ್‌ನಿಂದ ತುಂಬಿರುತ್ತಿದ್ದ ನಗರದ ಬೀದಿಗಳು ಈಗ ಶಾಂತವಾಗಿದ್ದು, ಪ್ರಯಾಣಿಕರು ಈ ಬದಲಾವಣೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ!
Karnataka News Live 19 October 2025 ಬೆಳಗಾವಿ - ವಾಲ್ಮೀಕಿ ಸಮಾಜದ ಬಗ್ಗೆ ಅಶ್ಲೀಲ ಪದ ಬಳಕೆ ಆರೋಪ, ರಮೇಶ್ ಕತ್ತಿ ವಿರುದ್ಧ ಅಟ್ರಾಸಿಟಿ ಕೇಸ್!
ಡಿಸಿಸಿ ಬ್ಯಾಂಕ್ ಚುನಾವಣೆ ವೇಳೆ ವಾಲ್ಮೀಕಿ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ಅಟ್ರಾಸಿಟಿ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ. ಈ ಹೇಳಿಕೆಯನ್ನು ಖಂಡಿಸಿ ವಾಲ್ಮೀಕಿ ಸಮಾಜ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.
Karnataka News Live 19 October 2025 ಚಾಮರಾಜನಗರದಲ್ಲಿ ಮಣ್ಣುಮುಕ್ಕ ಹಾವು ಕಳ್ಳಸಾಗಣೆ - ಇಬ್ಬರು ಆರೋಪಿಗಳ ಬಂಧನ
Karnataka News Live 19 October 2025 ಶಾಲೆಯಲ್ಲಿ ಹಾರರ್ ಸಿನಿಮಾ ನೋಡಿ ಮಾನಸಿಕ ಅಸ್ವಸ್ಥನಾದ ವಿದ್ಯಾರ್ಥಿ, ಶಾಲೆಗೆ ಬಿತ್ತು ದಂಡ!
ಭಯಾನಕ ಸಿನಿಮಾಗಳು ಮಕ್ಕಳಿಗೆ ಎಷ್ಟು ಅಪಾಯಕಾರಿ ಅನ್ನೋದಕ್ಕೆ ಚೀನಾದ ಈ ಘಟನೆಯೇ ಸಾಕ್ಷಿ. ಶಾಲೆಯಲ್ಲಿ ಹಾರರ್ ಸಿನಿಮಾ ನೋಡಿದ ವಿದ್ಯಾರ್ಥಿಯೊಬ್ಬ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ. ಈ ಘಟನೆ ನಂತರ, ನ್ಯಾಯಾಲಯವು ಶಾಲೆಗೆ ದೊಡ್ಡ ಮೊತ್ತದ ದಂಡ ವಿಧಿಸಿದೆ.
Karnataka News Live 19 October 2025 ದೀಪಾವಳಿಗೆ ಬೆಂಗಳೂರು ಸೇರಿ ರಾಜ್ಯದ 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಹಲೆವೆಡೆ ಭಾರಿ ಮಳೆ
ದೀಪಾವಳಿಗೆ ಬೆಂಗಳೂರು ಸೇರಿ ರಾಜ್ಯದ 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಹಲೆವೆಡೆ ಭಾರಿ ಮಳೆ, ವಾಯುಭಾರ ಕುಸಿತದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರಿಸುತ್ತಿದೆ. ಎರಡೂ ದಿನ ಭಾರಿ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
Karnataka News Live 19 October 2025 ರಾಜ್ಯದ ಅತಿದೊಡ್ಡ ರಸಗೊಬ್ಬರ ಉತ್ಪಾದನಾ ಘಟಕ ಮಂಗಳೂರಿನ ಎಂಸಿಎಫ್ ಯುಗಾಂತ್ಯ, ಇನ್ನು ಮುಂದೆ ಪಿಪಿಎಲ್!
ಮಂಗಳೂರು ಫರ್ಟಿಲೈಸರ್ಸ್ ಅಂಡ್ ಕೆಮಿಕಲ್ಸ್ ಲಿಮಿಟೆಡ್ (ಎಂಸಿಎಫ್) ಕಂಪನಿಯು ಜುವಾರಿ ಗ್ರೂಪ್‌ನ ಪಾರಾದೀಪ್ ಫಾಸ್ಟೇಟ್ ಲಿಮಿಟೆಡ್ (ಪಿಪಿಎಲ್) ಜೊತೆ ವಿಲೀನಗೊಂಡಿದೆ. ಈ ಮೂಲಕ ಎಂಸಿಎಫ್ ಹೆಸರು ಅಧಿಕೃತವಾಗಿ ಪಿಪಿಎಲ್ ಎಂದು ಬದಲಾಗಿದೆ.
Karnataka News Live 19 October 2025 ಗುಬ್ಬಿ ಪಟ್ಟಣದಲ್ಲಿ ಪಥಸಂಚಲನ - ಮಳೆಗೂ ಜಗ್ಗದ ಆರೆಸ್ಸೆಸ್ ಶಿಸ್ತು!
Karnataka News Live 19 October 2025 ವಿಶ್ವಪ್ರಸಿದ್ಧ ಫ್ರಾನ್ಸ್‌ನ ಲೌವ್ರೆ ಮ್ಯೂಸಿಯಂನಲ್ಲಿ ಕಳ್ಳತನ - ಕೇವಲ 7 ನಿಮಿಷದಲ್ಲಿ ಕಳ್ಳರ ಕೈಚಳಕ, ನೆಪೋಲಿಯನ್ ಕಾಲದ ಅಮೂಲ್ಯ ಆಭರಣ ದರೋಡೆ!
ಪ್ಯಾರಿಸ್‌ನ ಪ್ರಸಿದ್ಧ ಲೌವ್ರ್ ವಸ್ತುಸಂಗ್ರಹಾಲಯದಲ್ಲಿ ಭಾನುವಾರ ಬೆಳಿಗ್ಗೆ ದೊಡ್ಡ ದರೋಡೆ ನಡೆದಿದೆ. ಶಸ್ತ್ರಸಜ್ಜಿತ ಕಳ್ಳರು ಕೇವಲ ಏಳು ನಿಮಿಷಗಳಲ್ಲಿ ಅಪೊಲೊ ಗ್ಯಾಲರಿಗೆ ನುಗ್ಗಿ, ನೆಪೋಲಿಯನ್ ಮತ್ತು ಸಾಮ್ರಾಜ್ಞಿಯ ಅಮೂಲ್ಯ ಆಭರಣಗಳನ್ನು ದೋಚಿದ್ದಾರೆ.
Karnataka News Live 19 October 2025 Israel hamas war - ಹಮಾಸ್ ಕದನವಿರಾಮ ಉಲ್ಲಂಘನೆ, ಗಾಝಾ ಮೇಲೆ ದಾಳಿಗೆ ನೆತನ್ಯಾಹು ಆದೇಶ!
Israel hamas war: ಕದನ ವಿರಾಮ ಉಲ್ಲಂಘನೆ ಆರೋಪದ ಮೇಲೆ ಇಸ್ರೇಲ್ ಗಾಝಾ ಮೇಲೆ ದಾಳಿ ನಡೆಸಿದೆ. ಪ್ರಧಾನಿ ನೇತನ್ಯಾಹು ಆದೇಶದ ನಂತರ ಇಸ್ರೇಲಿ ಪಡೆಗಳು ಈ ಕ್ರಮ ಕೈಗೊಂಡಿವೆ. ಅದೇ ಸಮಯದಲ್ಲಿ, ಈ ದಾಳಿಗಳ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಕದನ ವಿರಾಮದ ನಿಯಮ ಪಾಲಿಸುತ್ತಿರುವುದಾಗಿ ಹಮಾಸ್ ಹೇಳಿದೆ.
Karnataka News Live 19 October 2025 ತಿಂಗಳ ಸ್ಯಾಲರಿ ₹1.9 ಲಕ್ಷ ಇದ್ರೂ ಬೆಂಗಳೂರಲ್ಲಿ ಮನೆ ಖರೀದಿಸಲು ಆಗುತ್ತಿಲ್ಲ, ನೋವು ತೋಡಿಕೊಂಡ ಟೆಕ್ಕಿ
ತಿಂಗಳ ಸ್ಯಾಲರಿ ₹1.9 ಲಕ್ಷ ಇದ್ರೂ ಬೆಂಗಳೂರಲ್ಲಿ ಮನೆ ಖರೀದಿಸಲು ಆಗುತ್ತಿಲ್ಲ, ನೋವು ತೋಡಿಕೊಂಡ ಟೆಕ್ಕಿ, ಇದೀಗ ಬೆಂಗಳೂರಲ್ಲಿ ಮನೆ ಖರೀದಿಗೆ ಎಷ್ಟು ಸ್ಯಾಲರಿ ಇರಬೇಕು ಅನ್ನೋ ಚರ್ಚೆ ಶುರುವಾಗಿದೆ.
Karnataka News Live 19 October 2025 ಸಚಿವ ಪ್ರಿಯಾಂಕ್ ಸುದ್ದಿಗೋಷ್ಠಿ - 11 ಪ್ರಶ್ನೆಗಳಿಗೆ ಉತ್ತರ ಕೊಟ್ಟು ಪಥಸಂಚಲನ ಮಾಡಿ..
ತಮಗೆ ಬಂದ ಬೆದರಿಕೆ ಕರೆಗಳ ನಂತರ, ತಮ್ಮ ಮತಕ್ಷೇತ್ರವಾದ ಚಿತ್ತಾಪುರದಲ್ಲಿ ಆರೆಸ್ಸೆಸ್ ಯೋಜಿಸಿರುವ ಪಥಸಂಚಲನವು ಉದ್ದೇಶಪೂರ್ವಕ ರಾಜಕೀಯ ಕುತಂತ್ರ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಪಥಸಂಚಲನಕ್ಕೆ ಸರಿಯಾದ ಅನುಮತಿ ಪಡೆಯದಿರುವುದನ್ನು ಪ್ರಶ್ನಿಸಿದ್ದಾರೆ.
Karnataka News Live 19 October 2025 ಕೃಷ್ಣಾದಲ್ಲಿ ಜಿಬಿಎ ಸಮೀಕ್ಷೆ ಮೀಟಿಂಗ್ - ಡಿಕೆಶಿ ಬರೋ ಮುನ್ನವೇ ಸಭೆ ಮುಗಿಸಿದ ಸಿಎಂ, ಒಳ ಬಂದ ಡಿಸಿಎಂ!
ಸಿಎಂ ನೇತೃತ್ವದಲ್ಲಿ ನಡೆದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸಮೀಕ್ಷಾ ಸಭೆಯಲ್ಲಿ, ಬೆಂಗಳೂರಿನಲ್ಲಿ ಸಮೀಕ್ಷೆಯ ನಿಧಾನಗತಿಯನ್ನು ಚರ್ಚಿಸಲಾಯಿತು. ಸಭೆಯ ನಂತರ, ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರು ನಗರಕ್ಕೆ ಮಾತ್ರ ಅಕ್ಟೋಬರ್ 31 ರವರೆಗೆ ಸಮೀಕ್ಷೆಯ ಗಡುವು ಎಂದಿದ್ದಾರೆ
Karnataka News Live 19 October 2025 ಚನ್ನಪಟ್ಟಣ ಆರ್‌ಎಸ್ಎಸ್ ಪಥಸಂಚಲನದಲ್ಲಿ ಕಾಂಗ್ರೆಸ್ ಶಾಸಕನ ಬೆಂಬಲಿಗರು ಭಾಗಿ
ಚನ್ನಪಟ್ಟಣ ಆರ್‌ಎಸ್ಎಸ್ ಪಥಸಂಚಲನದಲ್ಲಿ ಕಾಂಗ್ರೆಸ್ ಶಾಸಕನ ಬೆಂಬಲಿಗರು ಭಾಗಿ, ಒಂದೆಡೆ ಕಾಂಗ್ರೆಸ್ ನಾಯಕರು ಆರ್‌ಎಸ್‌ಎಸ್ ವಿರುದ್ದ ಮುಗಿಬೀಳುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಶಾಸಕ ಬೆಂಬಲಿಗರು ಗಣವೇಷ ತೊಟ್ಟು ಭಾಗಿಯಾಗಿದ್ದಾರೆ.
Karnataka News Live 19 October 2025 ಉತ್ತರಕನ್ನಡ - ಚಿನ್ನ ಖರೀದಿಗೆ ಬಂದಿದ್ದ ಯುವಕ ನಿಗೂಢವಾಗಿ ನಾಪತ್ತೆ!
Jakeer Baig missing case: ಮದುವೆ ಸಿದ್ಧತೆಗಾಗಿ ವಿದೇಶದಿಂದ ಬಂದಿದ್ದ ಜಾಕೀರ್ ಬೇಗ್ ಎಂಬ ಯುವಕ, ಭಟ್ಕಳದಲ್ಲಿ ಚಿನ್ನಾಭರಣ ಖರೀದಿಗೆ ತೆರಳಿದ್ದಾಗ ನಿಗೂಢವಾಗಿ ನಾಪತ್ತೆ. ನಮಾಜ್ ಮುಗಿಸಿ ಹೊರಬಂದ ನಂತರ ಕಾಣೆಯಾಗಿದ್ದು, ಆತನ ಪತ್ತೆಗಾಗಿ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Karnataka News Live 19 October 2025 Bigg Boss ಫಿನಾಲೆಗೆ ಯಾರು ಅರ್ಹರು ಕೇಳಿದಾಗ ಮಂಜು ಭಾಷಿಣಿ- ಅಶ್ವಿನಿ ಒಟ್ಟಿಗೇ ಹೇಳಿದ್ದು ಒಬ್ಬರದ್ದೇ ಹೆಸರು!
ಬಿಗ್ ಬಾಸ್ ಮಿಡ್ ಸೀಸನ್ ಫಿನಾಲೆಯಲ್ಲಿ ಡಬಲ್ ಎಲಿಮಿನೇಷನ್ ನಡೆದಿದ್ದು, ಮಂಜು ಭಾಷಿಣಿ ಮತ್ತು ಅಶ್ವಿನಿ ಎಸ್.ಎಸ್. ಮನೆಯಿಂದ ಹೊರಬಂದಿದ್ದಾರೆ. ಮನೆಯಿಂದ ಹೊರಹೋಗುವಾಗ ಇಬ್ಬರೂ ಸ್ಪರ್ಧಿಗಳು, ಫಿನಾಲೆ ತಲುಪಲು ಅರ್ಹರು ಯಾರು ಎಂದಾಗ ಒಬ್ಬರದ್ದೇ ಹೆಸರು ಹೇಳಿದ್ದಾರೆ. ಅವರು ಯಾರು?
Karnataka News Live 19 October 2025 ಹಾವೇರಿಯಲ್ಲೋಂದು ಶಾಕಿಂಗ್ ಘಟನೆ, ಪಿಂಚಣಿ ಹಣಕ್ಕಾಗಿ ಸಹೋದರಿಯನ್ನೇ ಗೃಹಬಂಧನದಲ್ಲಿಟ್ಟ ಅಣ್ಣಂದಿರು!
ಹಾವೇರಿ ಜಿಲ್ಲೆಯ ಯಲವಿಗಿ ಗ್ರಾಮದಲ್ಲಿ, ಪಿಂಚಣಿ ಹಣಕ್ಕಾಗಿ ಸಹೋದರರೇ ಮಹಿಳೆಯೊಬ್ಬರನ್ನು ನಾಲ್ಕು ತಿಂಗಳ ಕಾಲ ಗೃಹಬಂಧನದಲ್ಲಿಟ್ಟ ಅಮಾನುಷ ಘಟನೆ ನಡೆದಿದೆ. ಬಂಧನದಿಂದ ತಪ್ಪಿಸಿಕೊಂಡು ಬಂದ ಮಹಿಳೆ, ತನ್ನ ಮೊಬೈಲ್, ಎಟಿಎಂ ಕಾರ್ಡ್ ಕಿತ್ತುಕೊಂಡು ನರಕ ತೋರಿಸಿದ್ದ ಅಣ್ಣಂದಿರ ವಿರುದ್ಧ ದೂರು ದಾಖಲಿಸಿದ್ದಾರೆ.
Karnataka News Live 19 October 2025 ಅನಗತ್ಯ ಶಾಪಿಂಗ್ ಇಲ್ಲ, ಐಷಾರಾಮಿ ಇಲ್ಲ, ಖರ್ಚಿಲ್ಲ, ಏನಿದು 'ಮಿನಿಮಲಿಸಂ' ಲೈಫ್‌ಸ್ಟೈಲ್?
Minimalism Life: ಅನಗತ್ಯ ಶಾಪಿಂಗ್ ಇಲ್ಲ, ಐಷಾರಾಮಿ ಇಲ್ಲ, ಖರ್ಚಿಲ್ಲ, ಏನಿದು 'ಮಿನಿಮಲಿಸಂ' ಲೈಫ್‌ಸ್ಟೈಲ್? ಎಲ್ಲವೂ ಬೇಕು ಅನ್ನೋದಕ್ಕಿಂತ, ನಿಜವಾಗ್ಲೂ ನಮಗೆ ಏನೆಲ್ಲಾ ಬೇಕು ಅಂತ ಯೋಚಿಸೋದು ಇಲ್ಲಿ ಮುಖ್ಯ. ಬೇಕಾದ ಬಟ್ಟೆಗಳು ಮಾತ್ರ, ಮನೆಗೆ ಬೇಕಾದ ವಸ್ತುಗಳು ಮಾತ್ರ ಸಾಕು ಅಂತ ತಿಳ್ಕೊಳ್ಳೋದು.
Karnataka News Live 19 October 2025 ಬೆಂಗಳೂರು ಜೈಲಿನಿಂದ ಬಂದವನಿಗೆ ಮತ್ತೆ ಪೊಲೀಸ್ ಕಾಟ? ಮನೆಗೆ ನುಗ್ಗಿದ ಖಾಕಿ, ಕುಟುಂಬದಿಂದ ವಿರೋಧ
ಡಕಾಯಿತಿ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆ ಮುಗಿಸಿ ಬಿಡುಗಡೆಯಾದ ಪ್ರಸಾದ್ ಎಂಬ ವ್ಯಕ್ತಿಗೆ ವಿದ್ಯಾರಣ್ಯಪುರ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಮೀಟರ್ ಸೀನಾ ಎಂಬಾತನ ವಿರುದ್ಧ ದಾಖಲಿಸಿದ್ದ ಅಟ್ರಾಸಿಟಿ ಕೇಸ್ ಹಿಂಪಡೆಯಲು ಒತ್ತಡ ಹೇರಲು ಪೊಲೀಸರು ಈ ಕೃತ್ಯ ಎಸಗಿದ್ದಾರಂತೆ.
Karnataka News Live 19 October 2025 ಕಲಬುರಗಿಯ ಸೇಡಂನಲ್ಲಿ ಪಥ ಸಂಚಲನ ಹೊರಟ RSS ಕಾರ್ಯಕರ್ತರು ಅರೆಸ್ಟ್
ಕಲಬುರಗಿಯ ಸೇಡಂನಲ್ಲಿ ಪಥ ಸಂಚಲನ ಹೊರಟ RSS ಕಾರ್ಯಕರ್ತರು ಅರೆಸ್ಟ್, ಅನುಮತಿ ಇಲ್ಲದೆ ಆರ್‌ಎಸ್ಎಸ್ ಕಾರ್ಯಕರ್ತರು ಪಥಸಂಚಲನ ಮಾಡಲಾಗುತ್ತಿದೆ ಎಂದು ಪೊಲೀಸರು ಸಂಘದ ಕಾರ್ಯಕರ್ತರನ್ನು ಬಂಧಿಸಿದ್ದಾರೆ.