ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಾವಿರಾರು ಜನರು ತಮ್ಮ ಊರುಗಳಿಗೆ ತೆರಳಿದ್ದರಿಂದ, ಬೆಂಗಳೂರಿನ ರಸ್ತೆಗಳು ಅನಿರೀಕ್ಷಿತವಾಗಿ ಖಾಲಿಯಾಗಿವೆ. ಹಿಂದೆ ಟ್ರಾಫಿಕ್ ಜಾಮ್‌ನಿಂದ ತುಂಬಿರುತ್ತಿದ್ದ ನಗರದ ಬೀದಿಗಳು ಈಗ ಶಾಂತವಾಗಿದ್ದು, ಪ್ರಯಾಣಿಕರು ಈ ಬದಲಾವಣೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ!
ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದಂತೆ ಬೆಂಗಳೂರಿನ ಬೀದಿ ಬೀದಿಗಳು ಒಮ್ಮಿಂದೊಮ್ಮೆ ಭಯಂಕರ ಶಾಂತವಾಗಿವೆ! ಕೇವಲ ಒಂದು ವಾರದ ಹಿಂದೆ, ರಜಾದಿನದಂದದು ಸಾವಿರಾರು ಜನರು ಊರಿಗೆ ತೆರಳುವ ಉನ್ಮಾದದಲ್ಲಿ ರಸ್ತೆಗಳು ಕಿಕ್ಕಿರಿದಿದ್ದವು. ಆದರೆ ಈಗ? ರಸ್ತೆಗಳೆಲ್ಲ ಖಾಲಿ ಖಾಲಿ, ಹಾರ್ನ್‌ಗಳ ಶಬ್ದವಿಲ್ಲ, ಟ್ರಾಫಿಕ್ ಜಾಮ್ ಇಲ್ಲದಂತಾಗಿದೆ!
ಇಡೀ ಬೆಂಗಳೂರೇ ಖಾಲಿಯಾಗಿದೆ:
ಒಬ್ಬ ಪ್ರಯಾಣಿಕರು ಎಕ್ಸ್ ನಲ್ಲಿ ಬರೆದುಕೊಂಡಿದ್ದು, 'ಉಮ್ಮ್, ಬೆಂಗಳೂರು ಅರ್ಧದಷ್ಟು ಖಾಲಿಯಾಗಿದೆ, ಅಂದರೆ ನಾನು ಇಂದಿರಾನಗರಕ್ಕೆ 15 ನಿಮಿಷ, ಎಂಜಿ ರಸ್ತೆಗೆ 20 ನಿಮಿಷ, ವಿಮಾನ ನಿಲ್ದಾಣಕ್ಕೆ ಒಂದು ಗಂಟೆಯಲ್ಲಿ ತಲುಪಬಹುದು. ಆದರೆ ನಾನೇನು ಮಾಡ್ತಿದ್ದೀನಿ? ಕ್ಲೈಂಟ್ ಸಭೆಗೆ ಕಚೇರಿಗೆ ಹೋಗ್ತಿದ್ದೀನಿ! ಎಂದು ತಮಾಷೆ ಮಾಡಿದ್ದಾರೆ.
ದೀಪಾವಳಿ ಹುಡುಗ್ರು ಉಳಿದರು, ದೀವಾಳಿ ಹುಡುಗ್ರು ಹೋದ್ರು:
ಮತ್ತೊಬ್ಬರು ಬೆಂಗಳೂರಿನಲ್ಲಿ ಏನು ಮಾಡೋದು? ರಸ್ತೆಗಳು ಖಾಲಿಯಾಗಿವೆ. ಬೆಂಗಳೂರಿಗರನ್ನು ಹೊರತುಪಡಿಸಿ ಎಲ್ಲರೂ ಬೆಂಗಳೂರಿನಲ್ಲಿ ವಾಸಿಸುತ್ತಿರುವಂತೆ ತೋರುತ್ತಿದ. ಈಗ ಬೆಂಗಳೂರೇ ಖಾಲಿಯಾಗಿರುವುದಕ್ಕೆ ತಮಾಷೆ ಮಾಡಿದ್ದಾರೆ. ಎಲ್ಲರೂ ದೀಪಾವಳಿಗೆ ಊರಿಗೆ ಹೋಗಿದ್ದಾರೆ. ಬೆಂಗಳೂರು, ಮುಂಬೈ, ದೆಹಲಿ ಎಲ್ಲವೂ ಭೂತ ಪಟ್ಟಣಗಳಂತೆ ಭಾಸವಾಗುತ್ತಿದೆ. ಬೆಂಗಳೂರಿನ ಪರಿಸ್ಥಿತಿ ಈಗ ಹೇಗಿದೆಯೆಂದರೆ ದೀವಾಳಿಗೆ ಹುಡುಗರು ಹೋದರು. ದೀಪಾವಳಿ ಹುಡುಗರು ಉಳಿದರು. ಖಾಲಿ ರಸ್ತೆಗಳು ಆಹಾ ಆನಂದದಾಯಕ!
ಕೆಲವೇ ದಿನಗಳ ಹಿಂದೆ, ಹೊರ ವರ್ತುಲ ರಸ್ತೆಯಲ್ಲಿ ಬಸ್ ಸ್ಥಗಿತಗೊಂಡಿದ್ದರಿಂದ 12 ಕಿ.ಮೀ. ದೂರಕ್ಕೆ ತೆರಳಲು ಎರಡು ಗಂಟೆ ಸಮಯ ಬೇಕಾಯ್ತು. ಹೆಬ್ಬಾಳ, ಮೈಸೂರು ರಸ್ತೆ, ಹೊಸೂರು ರಸ್ತೆಯಂತಹ ನಿರ್ಗಮನ ಮಾರ್ಗಗಳಲ್ಲಿ ಭಾರೀ ವಾಹನ ದಟ್ಟಣೆಯ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದರು. ಆದರೆ ಈಗ, ದೀರ್ಘ ವಾರಾಂತ್ಯಕ್ಕೆ ಜನರು ಬೆಂಗಳೂರು ತೊರೆದಿರುವುದರಿಂದದ ನಗರದ ಕೆಲಸದ ಲಯ ಮುಂದುವರಿದರೂ ರಸ್ತೆಗಳು ಖಾಲಿ ಖಾಲಿಯಾಗಿವೆ. ಒಟ್ಟಾರೆ ಗಿಜಿಗುಡುತ್ತಿದ್ದ ಬೆಂಗಳೂರು ಇದೀಗ ಅವಾಸ್ತವಿಕ ಶಾಂತತೆಯೊಂದಿಗೆ ಅಪರೂಪದ ನಗರವಾಗಿ ಕಾಣುತ್ತಿದೆ.
