ಮಂಗಳೂರು ಫರ್ಟಿಲೈಸರ್ಸ್ ಅಂಡ್ ಕೆಮಿಕಲ್ಸ್ ಲಿಮಿಟೆಡ್ (ಎಂಸಿಎಫ್) ಕಂಪನಿಯು ಜುವಾರಿ ಗ್ರೂಪ್‌ನ ಪಾರಾದೀಪ್ ಫಾಸ್ಟೇಟ್ ಲಿಮಿಟೆಡ್ (ಪಿಪಿಎಲ್) ಜೊತೆ ವಿಲೀನಗೊಂಡಿದೆ. ಈ ಮೂಲಕ ಎಂಸಿಎಫ್ ಹೆಸರು ಅಧಿಕೃತವಾಗಿ ಪಿಪಿಎಲ್ ಎಂದು ಬದಲಾಗಿದೆ. 

ದಕ್ಷಿಣ ಕನ್ನಡ: ಮಂಗಳೂರು ಫರ್ಟಿಲೈಸರ್ಸ್ ಅಂಡ್ ಕೆಮಿಕಲ್ಸ್ ಲಿಮಿಟೆಡ್ (ಎಂಸಿಎಫ್) ಕಂಪನಿ ಹೆಸರು ಇನ್ನು ನೆನಪು ಮಾತ್ರ. ಈ ಕಾರ್ಖಾನೆ ಜುವಾರಿ ಗ್ರೂಪ್ ಜೊತೆ ವಿಲೀನಗೊಂಡಿದ್ದು, ಇನ್ನು ಮುಂದೆ ಪಾರಾದೀಪ್ ಫಾಸ್ಟೇಟ್ ಲಿಮಿಟೆಡ್ ಆಗಿ ಹೆಸರು (ಪಿಪಿಎಲ್) ಬದಲಾಯಿಸಿಕೊಂಡಿದೆ. ಪಿಪಿಎಲ್ ಶುಕ್ರವಾರದಿಂದ ಎಂಸಿಎಫ್ ಹೆಸರು ಆಗಿ ಅಧಿಕೃತವಾಗಿ ಬದಲಾವಣೆಗೊಂಡಿದ್ದು, ಅ. 31ರಿಂದ ನಾಮಫಲಕವೂ ಬದಲಾಗಲಿದೆ. ಪಿಪಿಎಲ್ ನ ಈ ಘಟಕದಲ್ಲಿ ಬೃಹತ್ ಪ್ರಮಾಣದಲ್ಲಿ ಹೂಡಿಕೆಯಾಗಿ ವಿಸ್ತರಣೆಗೊಳ್ಳಲಿದೆ.

ರಾಜ್ಯದ ಅತೀ ದೊಡ್ಡ ಘಟಕ

ಎಂಪಿಎಫ್ 1974ರಲ್ಲಿ ಪಣಂಬೂರಿನಲ್ಲಿ ಆರಂಭವಾಗಿದ್ದು, ಈಗ ಸರ್ಕಾರದ ಅಧೀನಕ್ಕೆ ಒಳಪಟ್ಟಿತ್ತು. 1976ರಲ್ಲಿ ಈ ಸಂಸ್ಥೆ ಉತ್ಪಾದನೆ ಆರಂಭಿಸಿದ್ದು, ರಾಸಾಯನಿಕ ರಸಗೊಬ್ಬರ ಉತ್ಪಾದನೆಯ ರಾಜ್ಯದ ಅತೀ ದೊಡ್ಡ ಘಟಕ ಇದಾಗಿತ್ತು. 1990ರಲ್ಲಿ ವಿಜಯ್ ಮಲ್ಯ ನೇತೃತ್ವದ ಯು.ಬಿ.ಮಲ್ಯ ಗ್ರೂಪ್ ಇದನ್ನು ಖರೀದಿಸಿತ್ತು.

ಪಾರಾದೀಪ್ ಫಾಸ್ಟೇಟ್ ಲಿಮಿಟೆಡ್ ಜೊತೆ ವಿಲೀನಗೊಂಡ ಎಂಸಿಎಫ್ ಕಂಪನಿ

2015ರಲ್ಲಿ ಈ ಸಂಸ್ಥೆಯ ಷೇರನ್ನು ಷೆ ಜುವಾರಿ ಅಡ್ವಾನ್ಸ್ ಗ್ರೂಪ್ ಖರೀದಿಸಿತ್ತು. ಇದೀಗ ಜುವಾರಿ ಗ್ರೂಪ್ ತನ್ನದೇ ಸಂಸ್ಥೆ ಪಿಪಿಎಲ್ ಹೆಸರಿನಿಂದ ಕಾರ್ಯಾಚರಣೆ ಆರಂಭಿಸಿದೆ. ಅಮೋನಿಯಂ ಈ ಘಟಕದಲ್ಲಿ ಯೂರಿಯಾ, ಡೈಮೋನಿಯಂ ಫಾಸ್ಪೇಟ್, ಹರಳು ರಸಗೊಬ್ಬರ, ದ್ರವ ಗೊಬ್ಬರ, ಮಣ್ಣಿನ ಕಂಡಿಷನರ್‌ಗಳು, ಪೊಟ್ಯಾಶ್, ಮಣ್ಣಿನ ಸೂಕ್ಷ್ಮ ಪೋಷಕಾಂಶಗಳು, ವಿಶೇಷ ರಸಗೊಬ್ಬರ, ಬೈಕಾರ್ಬನೈಟ್, ಕೈಗಾರಿಕಾ ರಾಸಾಯನಿಕ ಗಳಾದ ಸಲ್‌ಪ್ಯೂರಿಕ್‌ ಆಮ್ಲ, ಸಲ್ಫನೇ ಟೆಡ್ ಹರಳು ರಸಗೊಬ್ಬರಗಳನ್ನು ಉತ್ಪಾದಿ ಸುತ್ತಿದೆ. ಮಂಗಳೂರು ನಗರದಲ್ಲಿ ರೈಲು ಸಂಪರ್ಕ ಹೊಂದಿದ ಪ್ರಥಮ ಕಾರ್ಖಾನೆ ಇದಾಗಿದ್ದು, ಪ್ರಸಕ್ತ ನಾಫ್ತಾ ಬಳಕೆ ಮೂಲಕ ರಸಗೊಬ್ಬರ ಉತ್ಪಾದನೆ ನಡೆಸುತ್ತಿದೆ.