ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ, ಮನೆಯ ಮುಂದೆ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸಂತೋಷ ಗೌಡ ಮತ್ತು ಸೀತಾ ಗೌಡ ದಂಪತಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಪತಿಯನ್ನು ರಕ್ಷಿಸಲು ಹೋದ ಪತ್ನಿಗೂ ವಿದ್ಯುತ್ ತಗುಲಿದ್ದು, ಈ ಘಟನೆಗೆ ಹೆಸ್ಕಾಂನ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪ

ಉತ್ತರಕನ್ನಡ ಕಾರವಾರ (ಅ.19): ಮನೆಯ ಮುಂದೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ದಾರುಣವಾಗಿ ಮೃತಪಟ್ಟ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಗ್ರಾಮದ ವಿನಾಯಕ ಕೇರಿಯಲ್ಲಿ ನಡೆದಿದೆ.

ಪತಿ ಸಂತೋಷ ಗೌಡ ಹಾಗೂ ಪತ್ನಿ ಸೀತಾ ಗೌಡ ಮೃತ ದುರ್ದೈವಿಗಳು.

ಸಂಜೆ ವೇಳೆ ಮನೆಯ ಮುಂಭಾಗ ಬಿದ್ದಿದ್ದ ವಿದ್ಯುತ್ ತಂತಿ ಸಂತೋಷ್ ಗೌಡನಿಗೆ ತಗುಲಿದೆ. ವಿದ್ಯುತ್ ಪ್ರವಹಿಸಿ ಪತಿ ಒದ್ದಾಡಿದ್ದಾನೆ. ಪತಿಗೆ ವಿದ್ಯುತ್ ಸ್ಪರ್ಶಿಸಿದನ್ನ ಕಂಡು ಪತ್ನಿ ಭಯಭೀತಳಾಗಿ ಪತಿಯ ರಕ್ಷಣೆಗೆ ಮುಂದಾಗಿದ್ದಾಳೆ. ಈ ವೇಳೆ ಪತ್ನಿಗೂ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ದಂಪತಿಗಳು ದಾರುಣವಾಗಿ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಹೊನ್ನಾವರ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: ರಾಮನಗರ: ವೈದ್ಯರ ನಿರ್ಲಕ್ಷ್ಯ ಆರೋಪ, ಕೈ ಆಪರೇಷನ್ ಗೆ ಬಂದವ ಶವವಾದ!

ಹೆಸ್ಕಾಂ ಅಧಿಕಾರ ನಿರ್ಲಕ್ಷ:

ಸ್ಥಳೀಯರು ಈ ಘಟನೆಗೆ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ