ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ, ಭಾರೀ ಮಳೆಯ ನಡುವೆಯೂ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತರು ಶಿಸ್ತುಬದ್ಧ ಪಥ ಸಂಚಲನ ನಡೆಸಿದರು. ಸುಮಾರು 400ಕ್ಕೂ ಹೆಚ್ಚು ಗಣವೇಶಧಾರಿಗಳು ಈ ಮಾರ್ಚ್‌ಫಾಸ್ಟ್‌ನಲ್ಲಿ ಭಾಗವಹಿಸಿ, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿದರು.
ತುಮಕೂರು (ಅ.19): ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದಲ್ಲಿ ಇಂದು ಮಳೆಯ ನಡುವೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತರು ಪಥ ಸಂಚಲನ ನಡೆಸಿದರು.
ಗುಬ್ಬಿಯ ಜೂನಿಯರ್ ಕಾಲೇಜು ಮೈದಾನದಿಂದ ಆರಂಭಗೊಂಡ ಈ ಮಾರ್ಚ್‌ಫಾಸ್ಟ್ ಕೆನರಾ ಬ್ಯಾಂಕ್, ಟಿಪ್ಪು ಸರ್ಕಲ್ ಸೇರಿದಂತೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಾಗಿತು. ಸುಮಾರು ೪೦೦ ಕ್ಕೂ ಹೆಚ್ಚು ಗಣವೇಶಧಾರಿಗಳು ಪಥ ಸಂಚಲನದಲ್ಲಿ ಭಾಗವಹಿಸಿದರು.
ಇದನ್ನೂ ಓದಿ:ಸಚಿವ ಪ್ರಿಯಾಂಕ್ ಸುದ್ದಿಗೋಷ್ಠಿ: 11 ಪ್ರಶ್ನೆಗಳಿಗೆ ಉತ್ತರ ಕೊಟ್ಟು ಪಥಸಂಚಲನ ಮಾಡಿ..
ಮಳೆಯ ನಡುವೆಯೂ ಪಥಸಂಚಲನ:
ಸಮಾವೇಶ ನಡೆಯುತ್ತಿದ್ದಂತೆಯೇ ಧೋ ಧೋವಾಗಿ ಮಳೆ ಸುರಿದರೂ ಕಾರ್ಯಕರ್ತರು ಹಿಂದೆ ಸರಿಯದೆ, ಆರ್‌ಎಸ್‌ಎಸ್ ಗೀತೆ ಹಾಡುತ್ತಾ ಶಿಸ್ತಿನಿಂದ ಪಥ ಸಂಚಲನ ಮುಂದುವರೆಸಿದರು.
ಈ ವೇಳೆ ಸ್ಥಳೀಯರು ಹಾಗೂ ಸಾರ್ವಜನಿಕರು ಪಥ ಸಂಚಲನ ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು. ಪಟ್ಟಣದಾದ್ಯಂತ ಭದ್ರತಾ ಕ್ರಮ ಕೈಗೊಳ್ಳಲಾಗಿತ್ತು.
