
ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
ಚಿಕ್ಕಬಳ್ಳಾಪುರದಲ್ಲಿ ಗಂಡನ ಮನೆಯವರ ಕಿರುಕುಳದಿಂದ ನವವಿವಾಹಿತೆ ಪುಷ್ಪಾ ಕೊಲೆಯಾಗಿದ್ದಾಳೆ. ಕಳ್ಳತನದ ನಾಟಕವಾಡಿದ ಅತ್ತೆ, ನಾದಿನಿ ಸೇರಿದಂತೆ ಆರೋಪಿಗಳನ್ನು ಪೊಲೀಸರು ತನಿಖೆ ನಡೆಸಿ ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ (ಜೂ.8): ಗಂಡನ ಮನೆಯವರ ಕಿರುಕುಳಕ್ಕೆ ಮತ್ತೊಂದು ಅಮಾಯಕ ಜೀವ ಬಲಿಯಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಮದುವೆಯಾಗಿ ಮೂರೇ ತಿಂಗಳಿಗೆ ಅತ್ತೆ ಮತ್ತು ನಾದಿನಿ ನೀಡುತ್ತಿದ್ದ ಹಿಂಸೆ ತಾಳಲಾರದೆ ಪುಷ್ಪಾ ಎಂಬಾಕೆ ತವರು ಮನೆ ಸೇರಿದ್ದಳು. ಗಂಡ ಬೇರೆ ಮನೆ ಮಾಡುವುದಾಗಿ ಭರವಸೆ ನೀಡಿ ಆಕೆಯನ್ನು ಕರೆತಂದು, ಹೊಸ ಮನೆಗೂ ಬದಲಾಗಿದ್ದ. ಆದರೆ, ಮಗ ದೂರಾಗಲು ಸೊಸೆಯೇ ಕಾರಣ ಎಂದು ರೊಚ್ಚಿಗೆದ್ದ ಅತ್ತೆ, ನಾದಿನಿ ಮತ್ತು ಅಜ್ಜಿ ಸೇರಿ ಪುಷ್ಪಾಳ ಕೊಲೆಗೆ ಸ್ಕೆಚ್ ಹಾಕಿದ್ದರು.
ಭೀಮಾತೀರದಲ್ಲಿ ರಕ್ತದೋಕುಳಿ: ವಿಜಯಪುರದಲ್ಲಿ ಆಸ್ತಿ ವಿವಾದಕ್ಕೆ 6 ಜನರ ಭೀಕರ ಹ*ತ್ಯೆ!
ಯಾರಿಗೂ ಅನುಮಾನ ಬಾರದಂತೆ ಕುಟುಂಬಸ್ಥರು ಕೇರಳದ ದೇವಸ್ಥಾನಕ್ಕೆ ತೆರಳಿದ್ದರು. ಅತ್ತೆಯ ಸ್ಕೆಚ್ ಪ್ರಕಾರ, ಸಂಬಂಧಿಕರು ಸೇರಿ ಮನೆಯಲ್ಲಿದ್ದ ಪುಷ್ಪಾಳ ಕತ್ತು ಕೊಯ್ದು ಕೊಲೆ ಮಾಡಿದ್ದರು. ಬಳಿಕ ಇದೊಂದು ಕಳ್ಳತನಕ್ಕಾಗಿ ನಡೆದ ಹತ್ಯೆ (ರಾಬರಿ ಮರ್ಡರ್) ಎಂದು ಬಿಂಬಿಸಲು ನಾಟಕವಾಡಿದ್ದರು. ಆದರೆ, ಪೊಲೀಸರ ತನಿಖೆ ವೇಳೆ ತೆರೆದ ಬಾಗಿಲು ಹಾಗೂ ಮೃತರ ಕತ್ತಿನ ಗಾಯಗಳು ಪ್ರಮುಖ ಕ್ಲೂ ನೀಡಿದ್ದವು. ಕಥೆ ಕಟ್ಟಿದ ಆರೋಪಿಗಳ ನಾಟಕವನ್ನು ಪತ್ತೆಹಚ್ಚಿದ ಪೊಲೀಸರು, ಅತ್ತೆ, ನಾದಿನಿ ಸೇರಿದಂತೆ ಪ್ರಮುಖ ಕಿರಾತಕರನ್ನು ಜೈಲಿಗಟ್ಟಿದ್ದಾರೆ.