
ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್ ಸಿಗ್ನಲ್ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
ರಿಸರ್ವ್ ಬ್ಯಾಂಕ್ ಈಗ ಹಳೆಯ ಕಾಗದದ ನೋಟುಗಳ ಜಾಗಕ್ಕೆ ಅತ್ಯಾಧುನಿಕ ಪಾಲಿಮರ್ ಅಥವಾ ಪ್ಲಾಸ್ಟಿಕ್ ನೋಟುಗಳನ್ನ ತರೋದಕ್ಕೆ ಡಿಸೈಡ್ ಮಾಡಿದೆ. RBI ಈ ಬಗ್ಗೆ ಹಣಕಾಸು ಸಚಿವಾಲಯಕ್ಕೆ ಸಲಹೆಯನ್ನು ನೀಡಿತ್ತು. RBI ನೀಡಿದ್ದ ಸಲಹೆಯನ್ನು ಮಾನ್ಯ ಮಾಡಿರುವ ಹಣಕಾಸು ಸಚಿವಾಲಯ, ಗ್ರೀನ್ ಸಿಗ್ನಲ್ ಕೊಟ್ಟಿದೆ
ಭಾರತದ ಹಣಕಾಸು ವ್ಯವಸ್ಥೆಯಲ್ಲಿ ಮತ್ತೊಮ್ಮೆ ದೊಡ್ಡ ಬದಲಾವಣೆ ಆಗುವ ದಿನಗಳು ಹತ್ತಿರ ಬಂದಿವೆ. ಈಗಿರುವ ನೋಟುಗಳ ಬದಲಾಗಿ ಹೊಸ ನೋಟುಗಳನ್ನ ಚಾಲ್ತಿಗೆ ತರೋದಕ್ಕೆ ಹಣಕಾಸು ಇಲಾಖೆ ಆರ್.ಬಿ.ಐಗೆ ಸೂಚನೆ ನೀಡಿದೆ. ಸದ್ಯ ಚಲಾವಣೆಯಲ್ಲಿರೋ ಕಾಗದದ ನೋಟುಗಳ ಬದಲಿಗೆ ಪ್ಲಾಸ್ಟಿಕ್ ನೋಟುಗಳು ನಿಮ್ಮ ಕೈ ಸೇರಲಿವೆ. ಹಾಗಾದ್ರೆ 2016ರಲ್ಲಿ ಆದಂತೆ ಮತ್ತೆ ಡಿಮಾನಟೈಸೇಶನ್ ನಡೆಯುತ್ತಾ..? ಹೊಸ ಕರೆನ್ಸಿ ಹೇಗಿರುತ್ತೆ..? ಅವು ಭಾರತದ ಆರ್ಥಿಕತೆಯನ್ನ ಹೇಗೆ ಸುಧಾರಿಸುತ್ವೆ? ಪ್ಲಾಸ್ಟಿಕ್ ನೋಟುಗಳ ಕರೆನ್ಸಿ ಕ್ರಾಂತಿ ಕುರಿತು ಇನ್ಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.