11:02 PM (IST) Sep 08

India News Liveಏಷ್ಯನ್ ಗೇಮ್ಸ್ ಹೋಟೆಲ್ ವಿವಾದ - ಕೊನೆಗೂ ಮೌನ ಮುರಿದ ಬಿಸಿಸಿಐ

ಏಷ್ಯನ್ ಗೇಮ್ಸ್ ನಡೆಯುವ ಜಪಾನ್‌ನ ನಗೋಯಾದಲ್ಲಿ ಪಂಚತಾರಾ ಹೋಟೆಲ್‌ಗಳ ಕೊರತೆ ಇರುವುದರಿಂದ ಆಯೋಜಕರು ನೀಡಿರುವ ವಸತಿಯಲ್ಲೇ ಭಾರತೀಯ ಕ್ರಿಕೆಟಿಗರು ಉಳಿಯಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಹೋಟೆಲ್‌ಗಿಂತ ಹೆಚ್ಚಾಗಿ ಮೈದಾನ ಮತ್ತು ಪಿಚ್‌ಗಳ ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದ್ದು, ಪ್ರತಿಭಾವಂತ ಆಟಗಾರರನ್ನೇ ಕಳುಹಿಸಲಾಗುತ್ತಿದೆ ಎಂದು ರಾಜೀವ್ ಶುಕ್ಲಾ ಸ್ಪಷ್ಟಪಡಿಸಿದ್ದಾರೆ.

Read Full Story
10:49 PM (IST) Sep 08

India News Liveದಿಢೀರ್ 300 ವಿಮಾನ ಹಾರಾಟ ರದ್ದು, ಯುಕೆ ಏರ್ ಟ್ರಾಫಿಕ್ ಸಿಸ್ಟಮ್ ಸಮಸ್ಯೆಯಿಂದ ಕೋಲಾಹಲ

ಬರೋಬ್ಬರಿ 300 ವಿಮಾನ ಹಾರಾಟ ರದ್ದಾಗಿದೆ. ಏರ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದ ಸಮಸ್ಯೆ ಎದುರಾಗಿದೆ. ಇದೇ ವೇಳೆ ಹಲವು ಅನುಮಾನಗಳಿಗೂ ಕಾರಣವಾಗಿದೆ.

Read Full Story
08:57 PM (IST) Sep 08

India News Liveದುಲೀಪ್‌ ಟ್ರೋಫಿ ಫೈನಲ್‌ನಿಂದ ಹೊರಬಿದ್ದ ಬೆನ್ನಲ್ಲೇ ಕರುಣ್‌ ನಾಯರ್‌ ಶತಕ; ತಿಲಕ್‌ ವರ್ಮಾಗೆ ಸೋಷಿಯಲ್‌ ಮೀಡಿಯಾದಲ್ಲಿ ಟಾಂಗ್‌

ದುಲೀಪ್ ಟ್ರೋಫಿ ಫೈನಲ್‌ನಿಂದ ಅನಿರೀಕ್ಷಿತವಾಗಿ ಕೈಬಿಡಲ್ಪಟ್ಟ ಕರ್ನಾಟಕದ ಕರುಣ್ ನಾಯರ್, ಕೆಎಸ್‌ಸಿಎ ಟೂರ್ನಿಯಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಇದರ ಬೆನ್ನಲ್ಲೇ, ತಮ್ಮನ್ನು ಆಯ್ಕೆ ಮಾಡದ ದಕ್ಷಿಣ ವಲಯದ ನಾಯಕ ತಿಲಕ್ ವರ್ಮಾ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಪರೋಕ್ಷವಾಗಿ ಟ್ರೋಲ್ ಮಾಡಿದ್ದಾರೆ.
Read Full Story
08:55 PM (IST) Sep 08

India News Liveಕಷ್ಟಪಟ್ಟು ದುಡಿದ ಹಣದಲ್ಲಿ ಮೊಬೈಲ್ ಆರ್ಡರ್ ಮಾಡಿದ್ದ - ಬಾಕ್ಸ್‌ನಲ್ಲಿ ಸಗಣಿ ತುಂಬಿ ಪಾರ್ಸಲ್ ಮಾಡಿದ್ರು

ಆನ್‌ಲೈನ್‌ನಲ್ಲಿ ಆಂಡ್ರಾಯ್ಡ್ ಸಾಧನವನ್ನು ಆರ್ಡರ್ ಮಾಡಿ ಹಣ ಪಾವತಿಸಿದ್ದ ಗ್ರೇಟರ್ ನೋಯ್ಡಾದ ಯುವಕನಿಗೆ ಪಾರ್ಸೆಲ್‌ನಲ್ಲಿ ಸಗಣಿ ಬರುವ ಮೂಲಕ ವಂಚನೆಯಾಗಿದೆ. ಈ ಬಗ್ಗೆ ಸಂತ್ರಸ್ತ ಯುವಕ ಸೈಬರ್ ಸೆಲ್‌ಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Read Full Story
07:45 PM (IST) Sep 08

India News Liveಟೀಂ ಇಂಡಿಯಾ ಕೋಚ್ ಆದ್ರೆ ನಂಗೆ ಡಿವೋರ್ಸ್‌ ಪಕ್ಕಾ - ನೆಹ್ರಾ ಬಿಗ್ ಸ್ಟೇಟ್‌ಮೆಂಟ್

ಟೀಮ್ ಇಂಡಿಯಾ ಕೋಚ್ ಆದರೆ 9 ತಿಂಗಳು ಪ್ರವಾಸದಲ್ಲಿ ಇರಬೇಕಾಗುತ್ತದೆ, ಹೀಗಾದರೆ ನನ್ನ ಹೆಂಡತಿ ನನಗೆ ಡಿವೋರ್ಸ್ ನೀಡಬಹುದು ಎಂದು ಆಶಿಶ್ ನೆಹ್ರಾ ತಮಾಷೆಯಾಗಿ ಹೇಳಿದ್ದಾರೆ. ಭಾರತ ತಂಡದ ಕೋಚ್ ಆಗುವುದು ಗೌರವದ ವಿಷಯವಾದರೂ, ಸದ್ಯಕ್ಕೆ ಅಂತಹ ಯಾವುದೇ ಆಸೆ ತನಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Read Full Story
06:46 PM (IST) Sep 08

India News Liveಮೋದಿ ಕಾರ್ಯಕ್ರಮದೊಳಕ್ಕೆ ನುಗ್ಗಿದ ಗನ್ ಮ್ಯಾನ್ ಅರೆಸ್ಟ್, PMO ಅಧಿಕಾರಿ ಸೋಗಿನಲ್ಲಿ ಬಂದ ಇಬ್ಬರು

ಪ್ರಧಾನಿ ನರೇಂದ್ರ ಮೋದಿ ಮುಂಬೈ ಕಾರ್ಯಕ್ರಮದಲ್ಲಿ ಭದ್ರತಾ ಆತಂಕ ಎದುರಾದ ಘಟನೆ ನಡೆದಿದೆ. ಪ್ರಧಾನ ಮಂತರಿ ಕಾರ್ಯಾಲಯದ ಅಧಿಕಾರಿ ಸೋಗಿನಲ್ಲಿ ಗನ್ ಹಿಡಿದು ಕಾರ್ಯಕ್ರಮ ಬಂದ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ.

Read Full Story
06:40 PM (IST) Sep 08

India News Liveಮಾಲ್ಡೀವ್ಸ್ ಕಥೆ ಹೇಳಿ ಗುರುವಿನ ಕಾಲೆಳೆದು ಕಿಚಾಯಿಸಿದ ಕೆಎಲ್ ರಾಹುಲ್; ಈ ಕಾಮೆಂಟ್ ಭಾರೀ ವೈರಲ್

ಇಂಗ್ಲೆಂಡ್ ಸೀಮಿತ ಓವರ್‌ಗಳ ಕ್ರಿಕೆಟ್ ತಂಡಕ್ಕೆ ಮೆಂಟರ್ ಆಗಿ ನೇಮಕಗೊಳ್ಳುವ ಮೂಲಕ ಮಾಜಿ ನಾಯಕ ಕೆವಿನ್ ಪೀಟರ್ಸನ್ ಮತ್ತೆ ಇಂಗ್ಲೆಂಡ್ ತಂಡಕ್ಕೆ ಮರಳಿದ್ದಾರೆ. ಈ ಹೊಸ ಜವಾಬ್ದಾರಿಯಲ್ಲೂ ‘ಮಾಲ್ಡೀವ್ಸ್ ರಜೆ’ ಇದೆಯೇ ಎಂದು ಕೇಳುವ ಮೂಲಕ ಕೆಎಲ್ ರಾಹುಲ್ ಅವರು ಪೀಟರ್ಸನ್ ಅವರ ಕಾಲೆಳೆದು ಕಿಚಾಯಿಸಿದ್ದಾರೆ.

Read Full Story
06:29 PM (IST) Sep 08

India News Liveಬಜೆಟ್‌ Vs ಕಂಟೆಂಟ್ - ಸ್ಟಾರ್ ಹೀರೋಗಳಿದ್ದರೂ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಏನಾಗುತ್ತಿದೆ?

ನೂರಾರು ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾಗಳು ನಿಜಕ್ಕೂ ನಿರ್ಮಾಪಕರಿಗೆ ನಿರೀಕ್ಷಿತ ಲಾಭ ತರುತ್ತಿವೆಯಾ ಎಂಬ ಚರ್ಚೆ ಶುರುವಾಗಿದೆ. ಸ್ಟಾರ್ ಪವರ್ ಮತ್ತು ಭಾರೀ ಬಜೆಟ್‌ಗಿಂತ ಕಂಟೆಂಟ್‌ಗೆ ಪ್ರೇಕ್ಷಕರು ಹೆಚ್ಚು ಆದ್ಯತೆ ನೀಡುತ್ತಿರುವುದು.

Read Full Story
06:23 PM (IST) Sep 08

India News Liveಬಿಟ್ಟು ತಹಾರಹಿ ಎಫೆಕ್ಟ್, ಭಾರತದ ನದಿ, ಕೆರೆ, ಕೊಳ ಸ್ವಚ್ಚಗೊಳಿಸಲು ಇಳಿದ ಯುವಕರ ತಂಡ

ಬಿಟ್ಟು ತಬಾಹಿ ಯುವಕ ಕೈಯಾರೆ ನದಿ ಸ್ವಚ್ಚಗೊಳಿಸಿ ಸರ್ಕಾರದ ಸನ್ಮಾನಕ್ಕೂ ಪಾತ್ರವಾಗಿದ್ದಾನೆ. ಇದೀಗ ಬಿಟ್ಟು ಪ್ರೇರಣೆಯಿಂದ ಯುವಕರ ತಂಡ ದೇಶದ ನದಿ, ಕೆರೆ, ಕೊಳ ಸ್ವಚ್ಚಗೊಳಿಸುತ್ತಿದೆ. ಈ ತಂಡದ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Read Full Story
06:02 PM (IST) Sep 08

India News Liveಎಸ್‌ಬಿಐ ಮಹಾ ಯೋಜನೆ - 35 ಸ್ಪೆಷಲಿಸ್ಟ್ ಕ್ಯಾಡರ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2026-27ನೇ ಹಣಕಾಸು ವರ್ಷದಲ್ಲಿ ಸುಮಾರು 12,000 ಹೊಸ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಮತ್ತು 250 ಹೊಸ ಶಾಖೆಗಳನ್ನು ತೆರೆಯಲು ಯೋಜಿಸಿದೆ. ಈ ಹಿನ್ನೆಲೆಯಲ್ಲಿ, ಬ್ಯಾಂಕ್ ಪ್ರಸ್ತುತ ಸ್ಪೆಷಲಿಸ್ಟ್ ಕ್ಯಾಡರ್ ಆಫೀಸರ್ (SCO) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
Read Full Story
05:26 PM (IST) Sep 08

India News Liveಪ್ಲಾಸ್ಟಿಕ್ ಸ್ಟೂಲ್ ನ ಮಧ್ಯದಲ್ಲೇಕೆ ರಂಧ್ರ ಇರುತ್ತದೆ? ಇದರ ಹಿಂದಿದೆ ಅದ್ಭುತ ತಲೆ!

ಪ್ಲಾಸ್ಟಿಕ್ ಸ್ಟೂಲ್‌ನ ಮಧ್ಯದಲ್ಲಿರುವ ರಂಧ್ರವು ಕೇವಲ ವಿನ್ಯಾಸವಲ್ಲ. ಇದು ಸ್ಟೂಲ್‌ಗಳನ್ನು ಒಂದರ ಮೇಲೊಂದು ಇಟ್ಟಾಗ ನಿರ್ವಾತ ಸೃಷ್ಟಿಯಾಗುವುದನ್ನು ತಡೆಯುತ್ತದೆ, ಸುಲಭವಾಗಿ ಎತ್ತಲು ಹ್ಯಾಂಡಲ್‌ನಂತೆ ಕೆಲಸ ಮಾಡುತ್ತದೆ. ಈ ವಿನ್ಯಾಸವು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

Read Full Story
04:38 PM (IST) Sep 08

India News Liveಕೋರಿಯನ್ ಮದ್ವೆಯಲ್ಲಿ ಭಾರತೀಯ ಯುವತಿಗೆ ಊಟ ನೀಡದೇ ನಿಲ್ಲಿಸಿದ್ದರು; ಕಾರಣ ಕ್ಯೂಟ್ ಆಗಿದೆ

ಮದುವೆ ಸಂಪ್ರದಾಯಗಳು ಒಂದೊಂದು ಕಡೆ ವಿಚಿತ್ರ ವಿಚಿತ್ರವಾಗಿರುತ್ತವೆ. ಅದರಂತೆ ಭಾರತೀಯ ಯುವತಿಯೊಬ್ಬಳು ಕೋರಿಯನ್ ಮದುವೆಗೆ ಹೋಗಿ ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಆಕೆಗೆ ಊಟ ಮಾಡಲು ಬಿಡದೇ ತಡೆದು ನಿಲ್ಲಿಸಿದ ಪ್ರಸಂಗ ನಡೆಯಿತು. ಅಷ್ಟಕ್ಕೂ ಆಕೆ ಮಾಡಿದ ಯಡವಟ್ಟು ಏನು ಗೊಯತ್ತಾ?

Read Full Story
04:37 PM (IST) Sep 08

India News Liveಹುಡುಗಿಯರಿರುವ ಪಿಜಿ ಕೋಣೆಯೊಳಗೆ ಮಾಲೀಕನ ಕಣ್ಣು, ಲಿವಿಂಗ್ ರೂಂ ಗೆ ಸಿಸಿಟಿವಿ ಅಳವಡಿಸಿ ಸಭ್ಯ ಬಟ್ಟೆ ಧರಿಸಲು ತಾಕೀತು!

ಮುಂಬೈನಲ್ಲಿ, ಯುವತಿಯರ ಪಿಜಿಯ ಲಿವಿಂಗ್ ರೂಮ್‌ನಲ್ಲಿ ಮನೆ ಮಾಲೀಕನು ಅವರ ಅನುಮತಿಯಿಲ್ಲದೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾನೆ. ಸುರಕ್ಷತೆಯ ಕಾರಣ ನೀಡಿದರೂ, ಇದು ತಮ್ಮ ಗೌಪ್ಯತೆಯ ಹಕ್ಕಿನ ಉಲ್ಲಂಘನೆ ಎಂದು ಯುವತಿಯರು ರೆಡ್ಡಿಟ್‌ನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದು, ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Read Full Story
04:31 PM (IST) Sep 08

India News LiveNMACC - ಭಾರತದ ಕಲೆಗೆ ಅಂತಾರಾಷ್ಟ್ರೀಯ ಮೆರಗು; 3 ವರ್ಷ, 3500ಕ್ಕೂ ಹೆಚ್ಚು ಪ್ರದರ್ಶನ

ಮುಂಬೈನಲ್ಲಿರುವ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ (NMACC) ಮೂರು ವರ್ಷ ಪೂರೈಸಿದ್ದು, ಜಾಗತಿಕವಾಗಿ ವಿಸ್ತರಿಸಿದೆ. ಇದು ಭಾರತೀಯ ಕಲಾವಿದರಿಗೆ ವಿಶ್ವಮಟ್ಟದ ವೇದಿಕೆ ಒದಗಿಸುವುದರ ಜೊತೆಗೆ, ಅಂತರರಾಷ್ಟ್ರೀಯ ಪ್ರದರ್ಶನಗಳನ್ನು ಭಾರತಕ್ಕೆ ತರುವ ಮೂಲಕ ಕಲೆಗೆ ಹೊಸ ಆಯಾಮ ನೀಡಿದೆ. ಇಲ್ಲಿಯವರೆಗೆ 3500ಕ್ಕೂ ಹೆಚ್ಚು ಪ್ರದರ್ಶನಗಳು ನಡೆದಿವೆ.

Read Full Story
04:20 PM (IST) Sep 08

India News Liveಹೃದಯಾಘಾತದಿಂದ ಕುಸಿದು ಬಿದ್ದ ಅಧಿಕಾರಿ ಪಿಎಸ್‌ಗೆ ಸಚಿವರಿಂದ ತಕ್ಷಣ ಸಿಪಿಆರ್, ಬದುಕಲಿಲ್ಲ ರಾಜು

ಅಸೆಂಬ್ಲಿಯಲ್ಲಿ ಕರ್ತವ್ಯದಲ್ಲಿದ್ದ ಐಎಎಸ್ ಅಧಿಕಾರಿಯ ಪರ್ಸನಲ್ ಸೆಕ್ರಟರಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸಚಿವ ನೆರವಿಗೆ ಧಾವಿಸಿದ್ದಾರೆ. ಸಿಪಿಆರ್ ಮೂಲಕ ಬದುಕಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಸಚಿವರ ಪ್ರಯತ್ನ ವ್ಯರ್ಥವಾಗಿದೆ.

Read Full Story
04:08 PM (IST) Sep 08

India News Live3 ವರ್ಷಗಳಲ್ಲಿ 1.55 ಕೋಟಿ ವಿದ್ಯಾರ್ಥಿಗಳ ದಾಖಲಾತಿ ಕುಸಿತ - ಶಿಕ್ಷಣ ಕ್ಷೇತ್ರದ ಶಾಕಿಂಗ್ ಸತ್ಯ ಬಿಚ್ಚಿಟ್ಟ TISS ವರದಿ!

ಟಾಟಾ ಇನ್‌ಸ್ಟಿಟ್ಯೂಟ್‌ನ 2025ರ ವರದಿಯು ಭಾರತದ ಶಾಲಾ ಶಿಕ್ಷಣದಲ್ಲಿ ಆತಂಕಕಾರಿ ಚಿತ್ರಣವನ್ನು ನೀಡಿದೆ. ಕಳೆದ ಮೂರು ವರ್ಷಗಳಲ್ಲಿ 1.55 ಕೋಟಿ ವಿದ್ಯಾರ್ಥಿಗಳ ದಾಖಲಾತಿ ಕುಸಿದಿದ್ದು, ಶಿಕ್ಷಕರ ಸಂಖ್ಯೆ ಹೆಚ್ಚಾಗಿದ್ದರೂ ಗಣಿತ, ವಿಜ್ಞಾನದಂತಹ ವಿಷಯವಾರು ಶಿಕ್ಷಕರ ತೀವ್ರ ಕೊರತೆ ಮತ್ತು ಬಹು-ದರ್ಜೆ ತರಗತಿಗಳ ಹೆಚ್ಚಳದಂತಹ ಗಂಭೀರ ಸವಾಲುಗಳನ್ನು ವರದಿ ಎತ್ತಿ ತೋರಿಸಿದೆ.
Read Full Story
03:44 PM (IST) Sep 08

India News Liveಪ್ರಧಾನಿ ಮೋದಿಯ ಧುರಂಧರ್ ಎಂಟ್ರಿಗೆ ಜನ ಫಿದಾ, ವೇದಿಕೆಗೆ ಬರುತ್ತಿದ್ದಂತೆ ಆರಿ..ಆರಿ ಸಾಂಗ್ ಪ್ಲೇ

ಪ್ರಧಾನಿ ನರೇಂದ್ರ ಮೋದಿಗೆ ವಡೋದರದಲ್ಲಿ ಧುರಂಧರ್ ರೀತಿಯ ಸ್ವಾಗತ ಸಿಕ್ಕಿದೆ. ಜನಸಾಗರದ ನಡುವೆ ಮೋದಿ ವೇದಿಕೆ ಮೇಲೆ ಆಗಮಿಸುತ್ತಿದ್ದಂತೆ ಧುರಂಧರ್ 2 ಸಿನಿಮಾದ ಆರಿ..ಆರಿ ಸಾಂಗ್ ಪ್ಲೇ ಮಾಡಲಾಗಿದೆ. ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

Read Full Story
03:20 PM (IST) Sep 08

India News Liveಶೋಷಣೆಗೊಳಗಾದ ಭಾರತೀಯ ಮನೆಗೆಲಸದಾಕೆಗೆ ಸ್ವಂತ ಮನೆ ಕನಸು, ಆಕೆ ಕಣ್ಣೀರಿಗೆ ಸ್ಪಂದಿಸಿದ ಜಗತ್ತು, ₹47 ಲಕ್ಷ ಸಂಗ್ರಹ!

ಹಾಂಗ್ ಕಾಂಗ್‌ನ ಕಂಟೆಂಟ್ ಕ್ರಿಯೇಟರ್ ಅಬೀರ್, ತಮ್ಮ ಮನೆಗೆಲಸದಾಕೆ ಮರಿಯಮ್ ಶೇಖ್ ಅವರಿಗಾಗಿ ನಿಧಿಸಂಗ್ರಹ ಅಭಿಯಾನ ಆರಂಭಿಸಿದ್ದಾರೆ. ಬಾಲ್ಯದಿಂದಲೂ ಶೋಷಣೆಗೊಳಗಾಗಿ, ಸ್ವಂತ ಮನೆಯಿಲ್ಲದೆ ಕಷ್ಟಪಡುತ್ತಿದ್ದ ಮರಿಯಮ್‌ಗೆ ಭಾರತದಲ್ಲಿ ಮನೆ ಕಟ್ಟಿಸಿಕೊಡಲು ಆರಂಭವಾದ ಈ ಅಭಿಯಾನಕ್ಕೆ ಜಗತ್ತಿನಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ₹47 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದೆ.
Read Full Story
03:11 PM (IST) Sep 08

India News LiveNew OTT Cinema 'DC' - ನಿರ್ದೇಶಕನೇ ಹೀರೋ, OOTಗೆ ಬಂತು 'ಡಿಸಿ'; 100 ಕೋಟಿ ಕ್ಲಬ್ ಸೇರಿದ ಸಿನಿಮಾ ಎಲ್ಲಿ ನೋಡಬಹುದು?

ಲೋಕೇಶ್ ಕನಕರಾಜ್ ನಾಯಕರಾಗಿ ನಟಿಸಿ, 100 ಕೋಟಿಗೂ ಹೆಚ್ಚು ಗಳಿಕೆ ಕಂಡ 'ಡಿಸಿ' ಸಿನಿಮಾ ಇದೀಗ ಓಟಿಟಿಗೆ ಲಗ್ಗೆ ಇಟ್ಟಿದೆ. ಸೆಪ್ಟೆಂಬರ್ 04 ರಿಂದ ಸನ್ ನೆಕ್ಟ್ಸ್ ವೇದಿಕೆಯಲ್ಲಿ ಈ ಬ್ಲಾಕ್ ಬಸ್ಟರ್ ಚಿತ್ರವು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ.
Read Full Story
02:57 PM (IST) Sep 08

India News Live'ನನ್ಮಾತು ಕೇಳಿ, ಧೈರ್ಯವಾಗಿ ತಗೊಳ್ಳಿ' ಅಂತ ಇಶಾನ್‌ಗೆ ಹೇಳಿ DRS ತಗೊಂಡ ವೈಭವ್; ಮೊದಲ ಸಲ ಸಕ್ಸಸ್, ಎರಡನೇ ಸಲ ಫೇಲ್! ವಿಡಿಯೋ ವೈರಲ್

ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಈಸ್ಟ್ ಝೋನ್ 708 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಇದಕ್ಕೆ ಉತ್ತರವಾಗಿ, ವೈಭವ್ ಸೂರ್ಯವಂಶಿ ಅವರ ಒತ್ತಾಯದ ಮೇರೆಗೆ ಇಶಾನ್ ಕಿಶನ್ ತೆಗೆದುಕೊಂಡ ಯಶಸ್ವಿ ಡಿಆರ್‌ಎಸ್‌ನಿಂದ ಸೌತ್ ಝೋನ್ ಆರಂಭಿಕ ಆಘಾತ ಅನುಭವಿಸಿತು. ಸದ್ಯ ದೇವದತ್ ಪಡಿಕ್ಕಲ್ ಅರ್ಧಶತಕದ ಹೊರತಾಗಿಯೂ ಸೌತ್ ಝೋನ್ ತಂಡವು ಸಂಕಷ್ಟದಲ್ಲಿದೆ.
Read Full Story