ಲೋಕೇಶ್ ಕನಕರಾಜ್ ನಾಯಕರಾಗಿ ನಟಿಸಿ, 100 ಕೋಟಿಗೂ ಹೆಚ್ಚು ಗಳಿಕೆ ಕಂಡ 'ಡಿಸಿ' ಸಿನಿಮಾ ಇದೀಗ ಓಟಿಟಿಗೆ ಲಗ್ಗೆ ಇಟ್ಟಿದೆ. ಸೆಪ್ಟೆಂಬರ್ 04 ರಿಂದ ಸನ್ ನೆಕ್ಟ್ಸ್ ವೇದಿಕೆಯಲ್ಲಿ ಈ ಬ್ಲಾಕ್ ಬಸ್ಟರ್ ಚಿತ್ರವು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ.
ಓಟಿಟಿ ಆಡಿಯನ್ಸ್ ಬಹುದಿನಗಳಿಂದ ಕುತೂಹಲದಿಂದ ಕಾಯುತ್ತಿದ್ದ ಡಿಸಿ ಸಿನಿಮಾ ಓಟಿಟಿಗೆ ಎಂಟ್ರಿ ಕೊಟ್ಟಿದೆ. ಯಾವುದ ನಿರೀಕ್ಷೆಗಳು ಇಲ್ಲದೆ ಸಿನಿಮಾ ಥಿಯೇಟರ್‌ಗೆ ಎಂಟ್ರಿ ಕೊಟ್ಟಿದ್ದ ಈ ಸಿನಿಮಾ 100 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ಸೆಪ್ಟೆಂಬರ್ 04ರ ನಡುರಾತ್ರಿ ಓಟಿಟಿಗೆ ಎಂಟ್ರಿ ಕೊಟ್ಟಿದೆ. ಈ ಸಿನಿಮಾ ಕನ್ನಡದಲ್ಲಿಯೂ ಲಭ್ಯವಿದೆ.
ಖೈದಿ, ಮಾಸ್ಟರ್, ಲಿಯೋ, ಕೂಲಿದಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಸ್ಟಾರ್ ಡೈರೆಕ್ಟರ್ ಕನಕರಾಜ್ ಹೀರೋ ಆಗಿ ಎಂಟ್ರಿಕೊಟ್ಟ ಸಿನಿಮಾ ಡಿಸಿ. ಕಾಪ್ಟನ್ ಮಿಲ್ಲರ್‌ಅವರೊಂದಿಗೆ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡ ಅರುಣ್ ಮಾಥೆಶ್ವರನ್ ರಾ ಅಂಡ್ ರಸ್ಟಿಕ್ ಯಾಕ್ಷನ್ ಥ್ರಿಲ್ಲರ್ ಸಿನಿಮಾವನ್ನು ಮಾಡಿದ್ದರು. ವಾಮಿಕಾ ಗಬ್ಬಿ ಸಿನಿಮಾದಲ್ಲಿ ಹೀರೋಯಿನ್ ಮಾಡಿಕೊಂಡಿದ್ದಾರೆ.
ರಾತ್ರೋರಾತ್ರಿ ಓಟಿಟಿಗೆ ಬಂದ 100 ಕೋಟಿಯ ಆ ಸಿನಿಮಾ!
ಆಗಸ್ಟ್ 07ರಂದು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾದ 'ಡಿಸಿ' ಸಿನಿಮಾ ಬ್ಲಾಕ್ ಬ್ಲಸ್ಟರ್ ಹಿಟ್ ಆಗಿತ್ತು. ಪಾಸಿಟಿವ್ ರಿವ್ಯೂವ್‌ಗಳೊಂದಿಗೆ ಮೌತ್ ಟಾಕ್ ನಿಂದ ಬಾಕ್ಸ್ ಆಫೀಸ್ ಬಳಿ ಭಾರೀ ಕಲೆಕ್ಷನ್ಸ್ ಮಾಡಿತ್ತು. ಲೋಕೇಶ್, ವಾಮಿಕ ನಟನೆ, ಅರುಣ್ ಅವರ ಟೇಕಿಂಗ್ ಎಲ್ಲದಕ್ಕೂ ಮೀರಿ, ಅನಿರುಧ್ ಬಿಜಿಎಮ್ 'ಡಿಸಿ' ಸಿನಿಮಾವ ಬ್ಲಾಸ್ಟ್ ಬಸ್ಟರ್ ಮಾಡಿದೆ ಎಂದು ಹೇಳಬಹುದು.
ಒಟ್ಟಾರೆಯಾಗಿ ಈ ಸಿನಿಮಾ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಅಧಿಕೃತವಾಗಿ ಸಿನಿಮಾ ತಂಡ ಘೋಷಣೆ ಮಾಡಿದೆ. ಕೇವಲ ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲದೇ ಹಲವು ಸ್ಟಾರ್ ನಟ, ಕಲಾವಿದರು ಸಿನಿಮಾ ಬಗ್ಗೆ ಬೆಂಬಲ ನೀಡಿದ್ದರು. ಥಿಯೇಟರ್‌ನಲ್ಲಿ ಸೂಪರ್ ಹಿಟ್ ಆದ ಸಿನಿಮಾ ಓಟಿಟಿಯಲ್ಲಿ ನೋಡಬೇಕು ಎಂದು ಹಲವು ಕಾದುಕುಳಿತ್ತಿದ್ದರು. ಡಿಸಿ ಸಿನಿಮಾ ಸ್ಟ್ರಿಮಿಂಗ್ ಹಕ್ಕುಗಳನ್ನು ಪ್ರಮುಖ ಓಟಿಟಿ ಸಂಸ್ಥೆ ಸನ್ ನೆಕ್ಟ್ಸ್ ಪಡೆದುಕೊಂಡಿದ್ದು, ಸೆಪ್ಟೆಂಬರ್ 04 ರಿಂದ ಈ ಸಿನಿಮಾವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಿರುವುದಾಗಿ ಸನ್ ನೆಕ್ಟ್ಸ್ ತಿಳಿಸಿದೆ. ಶುಕ್ರವಾರ ಮಧ್ಯರಾತ್ರಿಯಿಂದಲೇ ಸಿನಿಮಾ ಓಟಿಟಿಯಲ್ಲಿ ಪ್ರಸಾರ ಆಗುತ್ತಿದ್ದು, ತಮಿಳುನೊಂದಿಗೆ ತೆಲುಗು, ಕನ್ನಡ, ಮಲಯಾಳಂ ಭಾಷೆಯಲ್ಲೂ ಈ ಸಿನಿಮಾ ನೋಡಬಹುದಾಗಿದೆ.
ಸಿನಿಮಾವನ್ನು ತಮಿಳು ನಿರ್ಮಾಣ ಸಂಸ್ಥೆ ಸನ್ ಪಿಕ್ಷರ್ಸ್ ಭಾರೀ ಬಜೆಟ್‌ನೊಂದಿಗೆ ನಿರ್ಮಾಣ ಮಾಡಿದೆ. ವಾಮಿಕಾ ಗಬ್ಬಿ, ಸಂಜನಾ ಕೃಷ್ಣಮೂರ್ತಿ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ತಲೈವಾಸಲ್ ವಿಜಯ್, ಅವಿನಾಶ್ ರಘು ದೇವನ್, ಕಸ್ತೂರಿ ರಾಜಾ, ಬಾಲಾಜಿ ದೇವಿ ಪ್ರಸಾದ್, ಶ್ರೀಕೃಷ್ಣ ದಯಾಲ್ ರಂತರ ಕಲಾವಿದರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಗೆ ರಾಕ್ ಸ್ಟಾರ್ ಅನಿರುಧ್ ಸಂಗೀತ ನೀಡಿದ್ದು, ಯಾರು ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಲು ಮಿಸ್ ಆಗಿದ್ದರೆ ಅಥವಾ ಮತ್ತೆ ನೋಡಬೇಕು ಎಂದು ಕೊಂಡರೆ ಸನ್ ನೆಕ್ಟ್ಸ್‌ನಲ್ಲಿ ನೋಡಬಹುದು.


