11:13 PM (IST) Apr 12

India news liveವಿರಾಟ್ ಕೊಹ್ಲಿ ಅಪರೂಪದ ದಾಖಲೆ ನುಚ್ಚುನೂರು! ಐಪಿಎಲ್‌ನಲ್ಲಿ ಹೊಸ ಇತಿಹಾಸ ಬರೆದ ಶುಭ್‌ಮನ್ ಗಿಲ್!

ಶುಭಮನ್ ಗಿಲ್ ಐಪಿಎಲ್‌ನಲ್ಲಿ 4000 ರನ್ ಪೂರೈಸಿದ ಅತಿ ಕಿರಿಯ ಆಟಗಾರನಾಗಿ, ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿದಿದ್ದಾರೆ. ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ನಾಯಕನ ಆಟವಾಡಿದ ಅವರು, ಅರ್ಧಶತಕ ಸಿಡಿಸಿ ಗುಜರಾತ್ ಟೈಟನ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು.
Read Full Story
10:18 PM (IST) Apr 12

India news liveಗ್ರಾಮೀಣ ಭಾಗದ ಮಹಿಳೆಯರಿಂದ ಕಮಾಲ್! ಹಿತ್ತಲಿನಿಂದಲೇ ತಿಂಗಳಿಗೆ 25 ಸಾವಿರ ಸಂಪಾದನೆ

 'ದೀದಿ ಕೆ ಬಖ್ರಿ' ಎಂಬ ಯೋಜನೆ ಮಹಿಳೆಯರ ಬದುಕನ್ನೇ ಬದಲಿಸುತ್ತಿದೆ. ತರಕಾರಿ, ಮೀನು, ಕೋಳಿ ಸಾಕಣೆಯಂತಹ ಕೆಲಸಗಳಿಂದ ಅವರು ಪ್ರತಿ ತಿಂಗಳು 20-25 ಸಾವಿರ ರೂಪಾಯಿ ಸಂಪಾದಿಸುತ್ತಿದ್ದಾರೆ. ಈ ಯಶಸ್ಸಿನ ಕಥೆಯನ್ನು ತಿಳಿಯೋಣ ಬನ್ನಿ.

Read Full Story
09:32 PM (IST) Apr 12

India news liveಅಮೆರಿಕ ಕಂಡೀಷನ್ ಒಪ್ಪಿಕೊಳ್ಳಲಿಲ್ಲವಾ ಇರಾನ್? ಮತ್ತೆ ನೀವೇ ಬರಬೇಕು ನಾನಲ್ಲ ಎಂದ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಅನ್ನು ಒಂದೇ ದಿನದಲ್ಲಿ ನಾಶಮಾಡುವುದಾಗಿ ಎಚ್ಚರಿಸಿದ್ದಾರೆ. ಮಾತುಕತೆ ವಿಫಲವಾದ ಬೆನ್ನಲ್ಲೇ ಈ ಹೇಳಿಕೆ ಬಂದಿದ್ದು, ಹಾರ್ಮುಝ್ ಜಲಸಂಧಿಗೆ ಅಮೆರಿಕದ ಯುದ್ಧನೌಕೆಗಳು ಪ್ರವೇಶಿಸಿರುವುದು ಮಧ್ಯಪ್ರಾಚ್ಯದಲ್ಲಿ ಯುದ್ಧದ ಆತಂಕವನ್ನು ಹೆಚ್ಚಿಸಿದೆ.
Read Full Story
08:51 PM (IST) Apr 12

India news liveಬೆಂಕಿಯ ಕೆನ್ನಾಲಿಗೆಯಲ್ಲಿ ಧಗಧಗ ಹೊತ್ತಿ ಉರಿದ ಐವರು ಮದುವೆಗೆ ತೆರಳುತ್ತಿದ್ದವರ ಕಾರ್

ಮದುವೆಗೆ ತೆರಳುತ್ತಿದ್ದ ಐವರು ಪ್ರಯಾಣಿಸುತ್ತಿದ್ದ ಕಾರೊಂದು ಚಲಿಸುತ್ತಿದ್ದಂತೆಯೇ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಚಾಲಕನ ಸಮಯಪ್ರಜ್ಞೆಯಿಂದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.

Read Full Story
07:54 PM (IST) Apr 12

India news liveSoundarya Assets - ಆ ರಹಸ್ಯ ಯಾರಿಗೂ ಗೊತ್ತಿಲ್ಲ - ನಟಿ ಸೌಂದರ್ಯ ಆಸ್ತಿ ಎಲ್ಲಿ ಹೋಯ್ತು?

ಖ್ಯಾತ ಹಾಸ್ಯನಟ ಬಾಬು ಮೋಹನ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ನೂರಾರು ಚಿತ್ರಗಳಲ್ಲಿ ನಟಿಸಿರುವ ಅವರು, ಸುಮಾರು 3 ದಶಕಗಳಿಂದ ಚಿತ್ರರಂಗದಲ್ಲಿದ್ದಾರೆ. ರಾಜಕೀಯದಲ್ಲೂ ಯಶಸ್ಸು ಕಂಡಿದ್ದಾರೆ.

Read Full Story
07:49 PM (IST) Apr 12

India news liveಕುಂಭಮೇಳದ ಮೊನಾಲಿಸಾ ನಿಗೂಢ ಕಣ್ಮರೆ! ಹುಡುಕಿ ಕೊಡಿ ಎಂದ ಪತಿ ಫರ್ಮಾನ್​ ಖಾನ್ - ಎಲ್ಲಿ ಹೋದಳು ಬಾಲೆ

ಕುಂಭಮೇಳದಲ್ಲಿ ವೈರಲ್ ಆಗಿದ್ದ ರುದ್ರಾಕ್ಷಿ ಬೆಡಗಿ ಮೊನಾಲಿಸಾ, ಮುಸ್ಲಿಂ ಯುವಕ ಫರ್ಮಾನ್ ಖಾನ್‌ನನ್ನು ಮದುವೆಯಾಗಿದ್ದರು. ಪತಿಯ ವಿರುದ್ಧ ಪೋಕ್ಸೋ ಕೇಸ್ ದಾಖಲಾದ ಬೆನ್ನಲ್ಲೇ ಆಕೆ ನಿಗೂಢವಾಗಿ ಕಣ್ಮರೆಯಾಗಿದ್ದು, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
Read Full Story
07:45 PM (IST) Apr 12

India news liveಇರಾನ್ ಜೊತೆಗಿನ ಮಾತುಕತೆ ವಿಫಲ - ಕೆರಳಿದ ಟ್ರಂಪ್‌ನಿಂದ ಶಾಕಿಂಗ್ ಘೋಷಣೆ, ಇಡೀ ವಿಶ್ವವೇ ಸ್ತಬ್ಧ!

ಇರಾನ್ ಜೊತೆಗಿನ 21 ಗಂಟೆಗಳ ಶಾಂತಿ ಮಾತುಕತೆ ವಿಫಲವಾದ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹರ್ಮೋಜ್ ಜಲಸಂಧಿ ಮೂಲಕ ಸಾಗುವ ಹಡಗುಗಳನ್ನು ತಡೆಯಲು ನೌಕಾಪಡೆಗೆ ಆದೇಶಿಸಿದ್ದಾರೆ. ಇರಾನ್‌ನ ಕಾನೂನುಬಾಹಿರ ಸುಂಕ ವಸೂಲಿಗೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಇದು ಜಾಗತಿಕ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿದೆ.
Read Full Story
07:16 PM (IST) Apr 12

India news liveಮಾತೃಭೂಮಿ ರಿಲೀಸ್‌ಗೆ ಸಂಕಷ್ಟ! ಶೇ. 40ರಷ್ಟು ಸಲ್ಮಾನ್ ಖಾನ್ ಸಿನಿಮಾ ಮತ್ತೆ ಶೂಟಿಂಗ್ ಮಾಡಿದ್ದೇಕೆ?

ಸಲ್ಮಾನ್ ಖಾನ್ ಅವರ ಮಾತೃಭೂಮಿ ಚಿತ್ರದ ದೊಡ್ಡ ಅಪ್‌ಡೇಟ್ ಬಂದಿದೆ. ಮೊದಲು 'ಬ್ಯಾಟಲ್ ಆಫ್ ಗಲ್ವಾನ್' ಎಂದು ಹೆಸರಿಡಲಾಗಿತ್ತು. ಆದರೆ ನಂತರ, ಇದರ ಶೀರ್ಷಿಕೆಯನ್ನು 'ಮಾತೃಭೂಮಿ' ಎಂದು ಬದಲಾಯಿಸಲಾಯಿತು.

Read Full Story
07:07 PM (IST) Apr 12

India news liveಕುಂಭಮೇಳ ವೈರಲ್ ಹುಡುಗಿ ಮದುವೆ ವಯಸ್ಸಿನ ವಿವಾದದಲ್ಲಿ ಹೊಸ ತಿರುವು! ಕೇರಳ ಪೊಲೀಸರ ತನಿಖೆ

ಕುಂಭಮೇಳದ ಫೋಟೋದಿಂದ ವೈರಲ್ ಆಗಿದ್ದ ಹುಡುಗಿಯ ಮದುವೆ ವಿವಾದಕ್ಕೆ ತಿರುಗಿದೆ. ಆಕೆ ಅಪ್ರಾಪ್ತೆ ಎಂದು ರಾಷ್ಟ್ರೀಯ ಆಯೋಗ ಹೇಳಿದರೆ, ಮದುವೆಗೆ ನೀಡಿದ್ದ ಆಧಾರ್ ಕಾರ್ಡ್ ಅಸಲಿ ಎಂದು ಕೇರಳ ಪೊಲೀಸ್ ವರದಿ ತಿಳಿಸಿದೆ. ಈ ವಯಸ್ಸಿನ ಗೊಂದಲದಿಂದಾಗಿ ಆಕೆಯ ಪತಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
Read Full Story
06:57 PM (IST) Apr 12

India news liveಅಂಬಾನಿ ಮನೆಯಲ್ಲಿ ರೊಟ್ಟಿ ಮಾಡಿದ್ರೆ ಸಿಗತ್ತೆ 24 ಲಕ್ಷ ರೂ. ಸಂಬಳ - ಇದೊಂದು ಕ್ವಾಲಿಫಿಕೇಷನ್​ ಇದ್ರೆ ಸಾಕು ನೋಡಿ

ಮುಖೇಶ್ ಅಂಬಾನಿ ಮನೆಯಲ್ಲಿ ರೊಟ್ಟಿ ಮಾಡುವ ಬಾಣಸಿಗನಿಗೆ ತಿಂಗಳಿಗೆ 2 ಲಕ್ಷ ರೂಪಾಯಿ ಸಂಬಳವಿದೆ. 600ಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಅತಿಥಿಗಳಿಗಾಗಿ ದಿನಕ್ಕೆ ಸುಮಾರು 4,000 ರೊಟ್ಟಿಗಳನ್ನು ತಯಾರಿಸುವುದೇ ಈ ಭಾರೀ ಸಂಬಳಕ್ಕೆ ಕಾರಣವಾಗಿದೆ.
Read Full Story
05:56 PM (IST) Apr 12

India news live'ಬಾವ ಮಾತ್ರ ಅಲ್ಲ, ನನ್ನ ನಿಜವಾದ ಅಣ್ಣ'.. ವಿಜಯ್ ದೇವರಕೊಂಡಗೆ 'ಬ್ರದರ್' ಸ್ಥಾನ ನೀಡಿದ ರಶ್ಮಿಕಾ ತಂಗಿ ಶಿಮನ್!

ವಿಜಯ್ ದೇವರಕೊಂಡ ಅವರನ್ನು ಕಂಡರೆ ಶಿಮನ್‌ಗೆ ಎಲ್ಲಿಲ್ಲದ ಪ್ರೀತಿ. ‘ವಿಜಯ್ ದೇವರಕೊಂಡ ಈಗ ಅಧಿಕೃತವಾಗಿ ನನ್ನ ಬ್ರದರ್-ಇನ್-ಲಾ (ಬಾವ). ಆದರೆ ಅವರು ನನಗೆ ನನ್ನ ಸ್ವಂತ ಅಣ್ಣನಂತೆಯೇ ಕಾಣುತ್ತಾರೆ. ನಿಮ್ಮಂತಹ ಒಬ್ಬ ಅಣ್ಣನನ್ನು ಪಡೆಯಬೇಕು ಎಂಬುದು ನನ್ನ ಕನಸಾಗಿತ್ತು. ನೀವು ಬರಿ ಬಾವ ಅಲ್ಲ, ನನ್ನ ನಿಜವಾದ ಅಣ್ಣ’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

Read Full Story
05:44 PM (IST) Apr 12

India news liveಆಶಾ ಭೋಸ್ಲೆ ಎಂಬ ನಿರ್ಭಿಡೆಯ ಅದ್ಭುತ ಗಾಯಕಿ - ತನ್ನದೇ ಶೈಲಿಯಲ್ಲಿ ಬದುಕಿದ ಗಾನ ಗಂಧರ್ವಿ!

“ದುನಿಯಾ ನೇ ಹಮ್ ಕೋ ದಿಯಾ ಕ್ಯಾ ?…. ದುನಿಯಾ ಸೇ ಹಮ್ ನೇ ಲಿಯಾ ಕ್ಯಾ ? ಹಮ್ ಸಬ್ ಕಿ ಪರವಾ ಕರೇ ಕ್ಯೂ ? ಸಬನೆ ಹಮರಾ ಕೀಯಾ ಕ್ಯಾ ???? (ಈ ಜಗತ್ತು ನನಗೇನು ಕೊಟ್ಟಿದೆ? ಈ ಜಗತ್ತಿನಿಂದ ನಾನೇನು ಪಡೆದೆ?

Read Full Story
05:21 PM (IST) Apr 12

India news liveವಿಜಯ್ ಜನ ನಾಯಗನ್ ಸಿನಿಮಾ ಸೀನ್‌ ಲೀಕ್‌ - ಬೇಸರದಿಂದ ನಟಿ ಮಮಿತಾ ಬೈಜು ಹೇಳಿದ್ದೇನು?

ರಾಜಕೀಯಕ್ಕೆ ಬರುವ ಮುನ್ನ ನಟ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾದ 'ಜನ ನಾಯಗನ್' ರಿಲೀಸ್ ತಡವಾಗಿದೆ. ಇದರ ನಡುವೆಯೇ ಸಿನಿಮಾದ ಕೆಲವು ದೃಶ್ಯಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ.

Read Full Story
05:08 PM (IST) Apr 12

India news liveಗರ್ಭಕೋಶವನ್ನೇ ಕೈಯಿಂದ ಕಿತ್ತು ಬಿಸಾಕೋಣ ಅನಿಸಿತ್ತು - ನಟಿ ಐಶ್ವರ್ಯಾ ಭಾಸ್ಕರನ್ ನೋವಿನ ಮಾತು

ತಮ್ಮ ಮೆನೋಪಾಸ್ ದಿನಗಳಲ್ಲಿ ಅನುಭವಿಸಿದ ದೈಹಿಕ ಮತ್ತು ಮಾನಸಿಕ ಹಿಂಸೆಯ ಬಗ್ಗೆ ನಟಿ ಐಶ್ವರ್ಯಾ ಭಾಸ್ಕರನ್ ಮುಕ್ತವಾಗಿ ಮಾತನಾಡಿದ್ದಾರೆ. ಆ ದಿನಗಳು ಒಂದು ರೀತಿ ಟ್ರಾಮಾ ಆಗಿತ್ತು ಎಂದಿದ್ದಾರೆ.

Read Full Story
04:49 PM (IST) Apr 12

India news live'ಅದು ತಿಳಿದೇ ನಡೆದಿದ್ದು' - ನಟಿ ಮಂಜು ವಾರಿಯರ್‌ಗೆ ಬಲವಂತವಾಗಿ ಮುತ್ತಿಟ್ಟ ಅಭಿಮಾನಿ ಹೇಳಿದ್ದೇನು?

ನಟಿ ಮಂಜು ವಾರಿಯರ್‌ ಅವರಿಗೆ ಅಭಿಮಾನಿಯೊಬ್ಬರು ವೇದಿಕೆ ಮೇಲೆ ಬಂದು ಬಲವಂತವಾಗಿ ಮುತ್ತಿಟ್ಟ ಘಟನೆ ದೊಡ್ಡ ಸುದ್ದಿಯಾಗಿತ್ತು. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

Read Full Story
04:37 PM (IST) Apr 12

India news liveAsha Bhosle Networth - ಪ್ರಸಿದ್ಧ ಗಾಯಕಿ ಮಾತ್ರವಲ್ಲ ವಿದೇಶದಲ್ಲಿ ಯಶಸ್ವಿ ಉದ್ಯಮಿಯೂ ಹೌದು! ನಿವ್ವಳ ಆಸ್ತಿ ಎಷ್ಟು?

92ನೇ ವಯಸ್ಸಿನಲ್ಲಿ ನಿಧನರಾದ ಗಾಯಕಿ ಆಶಾ ಭೋಸ್ಲೆ, ಎಂಟು ದಶಕಗಳ ಸಂಗೀತ ಪಯಣದಲ್ಲಿ 12,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಗಾಯನ, ಜಾಗತಿಕ ಸಂಗೀತ ಕಚೇರಿಗಳು, 'ಆಶಾ'ಸ್' ರೆಸ್ಟೋರೆಂಟ್ ಸರಣಿ ಮತ್ತು ರಿಯಲ್ ಎಸ್ಟೇಟ್ ಮೂಲಕ ಅವರು ಸುಮಾರು 250 ಕೋಟಿ ರೂಪಾಯಿಗಳಷ್ಟು ಅಪಾರ ಸಂಪತ್ತನ್ನು ಗಳಿಸಿದ್ದರು.
Read Full Story
04:31 PM (IST) Apr 12

India news liveಹೊಸ ನಾಟಕಕ್ಕೂ ಮುನ್ನ ಖಾಲಿ ಆಡಿಟೋರಿಯಂನಲ್ಲಿ ಅನುಪಮ್ ಖೇರ್ - ಏನಿದು 'ಸ್ಟ್ರೇಂಜ್/ಸ್ಕ್ಯಾರಿ' ಫೀಲಿಂಗ್?

ತಮ್ಮ ಹೊಸ ನಾಟಕ 'ಜಾನೆ ಪೆಹಚಾನೆ ಅಂಜಾನೆ'ಯ ವರ್ಲ್ಡ್ ಪ್ರೀಮಿಯರ್‌ಗೆ ಒಂದು ದಿನ ಮುಂಚೆ, ನಟ ಅನುಪಮ್ ಖೇರ್ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಈ ಸಮಯದಲ್ಲಿ ತಮಗಾಗುತ್ತಿರುವ ಭಾವನೆಗಳ ಬಗ್ಗೆ ಅವರು ಬರೆದುಕೊಂಡಿದ್ದಾರೆ.

Read Full Story
04:17 PM (IST) Apr 12

India news liveಅನಂತ್ ಅಂಬಾನಿ ಬರ್ತ್‌ಡೇ - 'ಬಬಮ್ ಬಮ್' ಹಾಡಿಗೆ ಶಾರುಖ್, ಸಲ್ಮಾನ್ ಭರ್ಜರಿ ಡ್ಯಾನ್ಸ್! ವಿಡಿಯೋ ವೈರಲ್

ಅನಂತ್ ಅಂಬಾನಿ ತಮ್ಮ ಹುಟ್ಟುಹಬ್ಬವನ್ನು ಗುಜರಾತ್‌ನ ಜಾಮ್‌ನಗರದಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡರು. ಈ ಪಾರ್ಟಿಗೆ ಬಾಲಿವುಡ್‌ನ ದೊಡ್ಡ ತಾರೆಯರ ದಂಡೇ ಆಗಮಿಸಿತ್ತು. ಈ ಸಂಭ್ರಮದ ಕ್ಷಣಗಳು ವೈರಲ್ ಆಗಿವೆ.

Read Full Story
04:16 PM (IST) Apr 12

India news liveಪಂದ್ಯಕ್ಕೂ ಮೊದಲು ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಗೌರವ ನಮನ ಸೂಚಿಸಿದ ಆರ್‌ಸಿಬಿ

ಪಂದ್ಯಕ್ಕೂ ಮೊದಲು ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಗೌರವ ನಮನ ಸೂಚಿಸಿದ ಆರ್‌ಸಿಬಿ, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ಸಜ್ಜಾಗುತ್ತಿದೆ. ಇದರ ನಡುವೆ ಆಶಾ ಭೋಸ್ಲೆ ನಿಧನಕ್ಕೆ ಕಂಬನಿ ಮಿಡಿದಿದೆ

Read Full Story
04:15 PM (IST) Apr 12

India news liveಇಡ್ಲಿ, ದೋಸೆ ಹುಟ್ಟಿದ್ದೇ ಕರ್ನಾಟಕದಲ್ಲಿ - 3-9ನೇ ಶತಮಾನದ ಪುಸ್ತಕದಲ್ಲಿರೋ ರೋಚಕ ಸ್ಟೋರಿ ಕೇಳಿ

ಇಡ್ಲಿ ಮತ್ತು ದೋಸೆ ಇಂಡೋನೇಷ್ಯಾದಿಂದ ಬಂದ ತಿನಿಸುಗಳಲ್ಲ, ಬದಲಿಗೆ ಇವುಗಳ ತವರು ನಮ್ಮ ಕರ್ನಾಟಕ. 9ನೇ ಶತಮಾನದ 'ವಡ್ಡಾರಾಧನೆ'ಯಲ್ಲಿ ಇಡ್ಲಿಯ ಉಲ್ಲೇಖವಿದ್ದರೆ, 3ನೇ ಶತಮಾನದ 'ಮಾನಸೋಲ್ಲಾಸ' ಕೃತಿಯಲ್ಲಿ ದೋಸೆಯ ಬಗ್ಗೆ ಹೇಳಲಾಗಿದೆ. ಜೊತೆಗೆ, ಉಪ್ಪಿಟ್ಟಿನ ಹುಟ್ಟಿನ ಹಿಂದಿರುವ ವಿಭಿನ್ನ ಇತಿಹಾಸವನ್ನೂ ಈ ಲೇಖನ ವಿವರಿಸುತ್ತದೆ.
Read Full Story