- Home
- Life
- Relationship
- ಕುಂಭಮೇಳದ ಮೊನಾಲಿಸಾ ನಿಗೂಢ ಕಣ್ಮರೆ! ಹುಡುಕಿ ಕೊಡಿ ಎಂದ ಪತಿ ಫರ್ಮಾನ್ ಖಾನ್: ಎಲ್ಲಿ ಹೋದಳು ಬಾಲೆ
ಕುಂಭಮೇಳದ ಮೊನಾಲಿಸಾ ನಿಗೂಢ ಕಣ್ಮರೆ! ಹುಡುಕಿ ಕೊಡಿ ಎಂದ ಪತಿ ಫರ್ಮಾನ್ ಖಾನ್: ಎಲ್ಲಿ ಹೋದಳು ಬಾಲೆ
ಕುಂಭಮೇಳದಲ್ಲಿ ವೈರಲ್ ಆಗಿದ್ದ ರುದ್ರಾಕ್ಷಿ ಬೆಡಗಿ ಮೊನಾಲಿಸಾ, ಮುಸ್ಲಿಂ ಯುವಕ ಫರ್ಮಾನ್ ಖಾನ್‌ನನ್ನು ಮದುವೆಯಾಗಿದ್ದರು. ಪತಿಯ ವಿರುದ್ಧ ಪೋಕ್ಸೋ ಕೇಸ್ ದಾಖಲಾದ ಬೆನ್ನಲ್ಲೇ ಆಕೆ ನಿಗೂಢವಾಗಿ ಕಣ್ಮರೆಯಾಗಿದ್ದು, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ರುದ್ರಾಕ್ಷಿ ಬೆಡಗಿ ಕಣ್ಮರೆ
ಮುಸ್ಲಿಂ ಯುವಕನನ್ನು ಲವ್ ಮಾಡಿ ಮದುವೆಯಾಗಿರುವ ಕುಂಭಮೇಳದಲ್ಲಿ ರುದ್ರಾಕ್ಷಿ ಯುವತಿ, ಕಣ್ಣುಗಳಿಂದಲೇ ಮೋಡಿ ಮಾಡಿದ್ದ ವೈರಲ್ ಗರ್ಲ್ ಮೊನಾಲಿಸಾ (Kumbhamala Monalisa) ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ತಮ್ಮದು ಹಿಂದೂ-ಮುಸ್ಲಿಂ ಮದುವೆಯಾಗಿರುವ ಕಾರಣ, ಸೋಷಿಯಲ್ ಮೀಡಿಯಾಗಳಲ್ಲಿ, ಮೊಬೈಲ್ ಮೂಲಕ ನಮ್ಮನ್ನು ಸಾ*ಯಿಸುವುದಾಗಿ, ಕ*ತ್ತರಿಸುವುದಾಗಿ ಜೀವ ಬೆದರಿಕೆ ಹಾಕಲಾಗುತ್ತಿದೆ. ಈ ಬಗ್ಗೆ ಪೊಲೀಸರು, ಮಾಧ್ಯದವರ ಗಮನಕ್ಕೆ ತಂದಿದ್ದೇವೆ. ದಯವಿಟ್ಟು ನಮ್ಮನ್ನು ಕಾಪಾಡಿ ಎಂದು ಕೋರಿಕೊಂಡಿದ್ದಾಳು ಮೊನಾಲಿಸಾ.
ಪೋಕ್ಸೋ ಅಡಿ ದೂರು
ಇದರ ಬೆನ್ನಲ್ಲೇ, ಮೊನಾಲಿಸಾಗೆ ಇನ್ನೂ 18 ವರ್ಷ ತುಂಬಿಲ್ಲ ಎನ್ನುವ ಕಾರಣಕ್ಕೆ ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಾಗಿದೆ. ಆಕೆ ತೋರಿದ ಪ್ರಮಾಣ ಪತ್ರದಲ್ಲಿ ವಯಸ್ಸು 18 ಇದ್ದುದಕ್ಕೆ ಮದುವೆಗೆ ಅನುಮತಿ ಕೊಟ್ಟಿರುವುದಾಗಿ ಕೇರಳ ಪೊಲೀಸರು ಸ್ಪಷ್ಟನೆ ಕೊಟ್ಟಿದ್ದಾರೆ.
ಪತಿ ಕಣ್ಣೀರು
ಇದರ ನಡುವೆಯೇ, ಇದೀಗ ಭಾರಿ ಕುತೂಹಲ ಎನ್ನುವಂತೆ ಪತಿಯ ವಿರುದ್ಧ ದೂರು ದಾಖಲಾಗುತ್ತಲೇ ಮೊನಾಲಿಸಾ ನಿಗೂಢವಾಗಿ ಕಣ್ಮರೆಯಾಗಿದ್ದಾಳಂತೆ! ಈ ಕುರಿತು ಖುದ್ದು ಪತಿ ಫರ್ಮಾನ್ ಖಾನ್ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಳ್ಳುತ್ತಿದ್ದಾನೆ.
ಎಲ್ಲೂ ಸಿಗುತ್ತಿಲ್ಲ
ಅವಳಿಗೆ ಎಲ್ಲಾ ಕಡೆ ಹುಡುಕಿದೆ. ಆದರೆ ಎಲ್ಲೂ ಸಿಗುತ್ತಿಲ್ಲ. ನಿಮಗೆ ಎಲ್ಲಿಯಾದರೂ ಸಿಕ್ಕರೆ ಹೇಳಿ ಎಂದು ಕೇಳಿಕೊಳ್ಳುತ್ತಿದ್ದಾನೆ ಫರ್ಮಾನ್ ಖಾನ್.
ಫ್ರಿಜ್ನಲ್ಲಿ ಹುಡುಕಿ ಅಂತಿದ್ದಾರೆ!
ಆದರೆ, ಮೊದಲೇ ಹಿಂದೂ-ಮುಸ್ಲಿಂ ಮದುವೆ ಎಂದು ಇಲ್ಲಸಲ್ಲದ ಕಮೆಂಟ್ಸ್ ಬರುತ್ತಿದ್ದವು. ಇನ್ನು ಕೇಳಬೇಕೆ? ಫ್ರಿಜ್ನಲ್ಲಿ ಹುಡುಕಿ ಎಂದು ಕೆಲವರು ಹೇಳುತ್ತಿದ್ದರೆ, ಆಕೆಯನ್ನು ಸಾಯಿಸಿ ಎಲ್ಲಿ ಇಟ್ಟಿದ್ದಿ ಎಂದು ಇನ್ನೊಬ್ಬರು ಪ್ರಶ್ನೆ ಮಾಡುತ್ತಿದ್ದಾರೆ. ಇವಳಿಗೆ ಇದೇ ಗತಿ ಬರುತ್ತಿದೆ ಎಂದು ಗೊತ್ತಿತ್ತು, ಆದ್ರೆ ಇಷ್ಟು ಬೇಗ ಎಂದು ಎಣಿಸಿರಲಿಲ್ಲ ಎಂದು ಮತ್ತಷ್ಟು ಮಂದಿ ಕಮೆಂಟ್ ಮಾಡುತ್ತಿದ್ದಾರೆ.
ಹೋಗಿದ್ದೆಲ್ಲಿ ಮೊನಾಲಿಸಾ
ಒಟ್ಟಿನಲ್ಲಿ ಮೊನಾಲಿಸಾ ಹೋಗಿದ್ದೆಲ್ಲಿಗೆ ಎನ್ನುವ ಬಗ್ಗೆ ಸದ್ಯ ಕುತೂಹಲವಿದೆ. ಹಿಂದೂ ಹೆಣ್ಣುಮಕ್ಕಳನ್ನು ಲವ್ ಜಿಹಾದ್ ಪಾಶಕ್ಕೆ ಸಿಲುಕಿಸಲು ಮೊನಾಲಿಸಾಳನ್ನು ಬಳಸಿಕೊಳ್ಳಲಾಗುತ್ತದೆ. ಆಕೆಗೆ ಏನೂ ಮಾಡುವುದಿಲ್ಲ. ಆದರೆ ಸೆಲೆಬ್ರಿಟಿಗಳಾದ ಹಿಂದೂ ಹೆಣ್ಣುಮಕ್ಕಳನ್ನು ಮದುವೆಯಾಗಿ ಅವರನ್ನು ಉದಾಹರಣೆ ರೂಪದಲ್ಲಿ ತೋರಿಸಿ, ಉಳಿದ ಹೆಣ್ಣುಮಕ್ಕಳ ಬ್ರೇನ್ವಾಷ್ಗೆ ಬಳಸಿಕೊಳ್ಳಲಾಗುತ್ತದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಮಾತುಗಳು ಕೇಳಿ ಬರ್ತಿರೋ ನಡುವೆಯೇ ಈ ಘಟನೆ ನಡೆದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

