- Home
- Astrology
- 2028ರಿಂದ ಡಿಕೆಶಿಗೆ ಡೇಂಜರ್: ವಿಜಯ್ ಪಿಎಂ ಆಗೋ ಮೊದಲು ಜೈಲಿಗೆ- ತ್ರಿಷಾ ಸಿಎಂ; ಗುರೂಜಿ ಭವಿಷ್ಯವಾಣಿ ಏನಿದೆ
2028ರಿಂದ ಡಿಕೆಶಿಗೆ ಡೇಂಜರ್: ವಿಜಯ್ ಪಿಎಂ ಆಗೋ ಮೊದಲು ಜೈಲಿಗೆ- ತ್ರಿಷಾ ಸಿಎಂ; ಗುರೂಜಿ ಭವಿಷ್ಯವಾಣಿ ಏನಿದೆ
ಆರ್ಯವರ್ಧನ್ ಗುರೂಜಿ ಅವರು ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡಿದ್ದು, 2028 ರಿಂದ ಅವರಿಗೆ ಅಪಾಯದ ಅವಧಿ ಎಂದು ಹೇಳಿದ್ದಾರೆ. ಹಾಗೆಯೇ, ವಿಜಯ್ ಎರಡು ಬಾರಿ ಸಿಎಂ ಆಗಲಿದ್ದು, ನಂತರ ಜೈಲಿಗೆ ಹೋಗುವ ಸಾಧ್ಯತೆಯಿದ್ದು, ಆ ವೇಳೆ ತ್ರಿಷಾ ಸಿಎಂ ಆಗ್ರಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಆರ್ಯವರ್ಧನ್ ಗುರೂಜಿ ಭವಿಷ್ಯ
ಕೊನೆಗೂ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವ ಹಾದಿಯಲ್ಲಿ ಇದ್ದಾರೆ. ಇವರು ಸಿಎಂ ಆಗಲಿದ್ದಾರೆ ಎಂದು ಆರ್ಯವರ್ಧನ್ ಗುರೂಜಿ ಈ ಹಿಂದೆ ಭವಿಷ್ಯ ನುಡಿದಿದ್ದರು. ಅದೇ ರೀತಿ ತಮಿಳುನಾಡಿನಲ್ಲಿ ಜೋಸೆಫ್ ವಿಜಯ್ ಅವರ ಗೆಲುವಿನ ಬಗ್ಗೆಯೂ ಸೂಚನೆ ಕೊಟ್ಟಿದ್ದರು.
2028ರಿಂದ ಸಮಸ್ಯೆ
ಇದೀಗ ಅವರು ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ಬಾಸ್ಟಿವಿಗೆ ನೀಡಿರುವ ಸಂದರ್ಶನದಲ್ಲಿ ಆರ್ಯವರ್ಧನ್ ಗುರೂಜಿ, 2028ರಿಂದ ಸೆಪ್ಟೆಂಬರ್ನಿಂದ ರಾಹುಭುಕ್ತಿ ಬರಲಿದೆ. 2031ರವರೆಗೆ ಡಿ.ಕೆ.ಶಿವಕುಮಾರ್ ಅವರ ಜಾತಕದ ಪ್ರಕಾರ ಸ್ವಲ್ಪ ಅಪಾಯವಿದೆ. ಇದು ಅವರಿಗೆ ಡೇಂಜರಸ್ ಅವಧಿಯಾಗಿದೆ. ಆದರೆ ಅದಕ್ಕೆ ಸರಿಯಾದ ಪರಿಹಾರ ಮಾಡಿಕೊಂಡರೆ ಮುಂದೆ ಅವರಿಗೆ ಯಾವುದೇ ಕಂಟಕ ಇರುವುದಿಲ್ಲ. ರಾಜಯೋಗವಿದ್ದು, ತುಂಬಾ ಒಳ್ಳೆಯದಾಗಲಿದೆ ಎಂದಿದ್ದಾರೆ.
ಒಡಕು ಬರಲ್ಲ
ಕಾಂಗ್ರೆಸ್ನಲ್ಲಿ ಸದ್ಯ ಯಾವುದೇ ಒಡಕು ಬರುವುದಿಲ್ಲ. ಡಿ.ಕೆ.ಶಿವಕುಮಾರ್ ಅವರು ಚೆನ್ನಾಗಿ ನಡೆಸಿಕೊಂಡು ಹೋಗುತ್ತಾರೆ. 2028ರಲ್ಲಿ ಸ್ವಲ್ಪ ಜರಕ್ ಹೊಡೆಯಲಿದೆ. ಅದನ್ನು ಸರಿ ಮಾಡಿಕೊಳ್ಳಬೇಕಿದೆ ಅಷ್ಟೇ ಎಂದಿದ್ದಾರೆ ಗುರೂಜಿ.
ಪ್ರಧಾನಿಯಾಗೋ ಯೋಗ
ಇದೇ ವೇಳೆ ತಮಿಳುನಾಡಿನ ಸಿಎಂ ದಳಪತಿ ಜೋಸೆಫ್ ವಿಜಯ್ ಅವರ ಭವಿಷ್ಯದ ಬಗ್ಗೆಯೂ ಮಾತನಾಡಿರುವ ಆರ್ಯವರ್ಧನ್ ಗುರೂಜಿ, ಕಟಕ ರಾಶಿ, ಕಟಕ ಲಗ್ನದ ವಿಜಯ್ ಅವರಿಗೆ ಪ್ರಧಾನಿಯಾಗುವ ಎಲ್ಲಾ ಯೋಗವೂ ಇದೆ. ಆದರೆ ಇನ್ನು 10 ವರ್ಷದಲ್ಲಿ ಅವರಿಗೆ ಒಂದು ಅಪಾಯವೂ ಇದೆ ಎಂದಿದ್ದಾರೆ.
ವಿಜಯ್ ಜೈಲಿಗೆ
ವಿಜಯ್ ಅವರು ಎರಡು ಬಾರಿ ಮುಖ್ಯಮಂತ್ರಿ ಆಗಲಿದ್ದಾರೆ. ಆದರೆ, ಇದೇ ವೇಳೆ ಅವರಿಗೆ ಜೈಲಿಗೆ ಹೋಗುವ ಯೋಗವಿದೆ. ಆ ಸಮಯದಲ್ಲಿ ತ್ರಿಷಾ ತಮಿಳುನಾಡಿನ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಗುರೂಜಿ ಹೇಳಿದ್ದಾರೆ.

