“ದುನಿಯಾ ನೇ ಹಮ್ ಕೋ ದಿಯಾ ಕ್ಯಾ ?…. ದುನಿಯಾ ಸೇ ಹಮ್ ನೇ ಲಿಯಾ ಕ್ಯಾ ? ಹಮ್ ಸಬ್ ಕಿ ಪರವಾ ಕರೇ ಕ್ಯೂ ? ಸಬನೆ ಹಮರಾ ಕೀಯಾ ಕ್ಯಾ ???? (ಈ ಜಗತ್ತು ನನಗೇನು ಕೊಟ್ಟಿದೆ? ಈ ಜಗತ್ತಿನಿಂದ ನಾನೇನು ಪಡೆದೆ?

ವಿನಯ್ ಶಿವಮೊಗ್ಗ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

1971ರಲ್ಲಿ happy sensation ಇದ್ದ ಕಾಲ . ಹರೇ ರಾಮ ಹರೇ ಕೃಷ್ಣ ಅನ್ನುವ ಹಿಂದಿ ಚಿತ್ರ ಬಿಡುಗಡೆಯಾಗಿ ಜನಪ್ರಿಯತೆ ಗಳಿಸಿತ್ತು. ಅದರಲ್ಲಿನ ಎಂದು ಹಾಡು ಧಮ್ ಮರೋ ಧಮ್ ಮಿಠ್ ಜಾಯೇ ಗಮ್” ಒಂದು ರೀತಿಯಲ್ಲಿ ಹವಾ ಸೃಷ್ಟಿಸಿತ್ತು !!! ಎಲ್ಲಿನೋಡಿದರೂ ಅದೇ ಹಾಡನ್ನ ಕೇಳ್ತಿದ್ರಂತೆ !!! RD Burman ಸಂಗೀತದಲ್ಲಿ ಅಂಥಹಾ ಮೋಡಿ ಇತ್ತು . ಆ ಹಾಡಿನ ಒಂದು ಸಾಲು ಹೀಗಿದೆ.

“ದುನಿಯಾ ನೇ ಹಮ್ ಕೋ ದಿಯಾ ಕ್ಯಾ ?…. ದುನಿಯಾ ಸೇ ಹಮ್ ನೇ ಲಿಯಾ ಕ್ಯಾ ? ಹಮ್ ಸಬ್ ಕಿ ಪರವಾ ಕರೇ ಕ್ಯೂ ? ಸಬನೆ ಹಮರಾ ಕೀಯಾ ಕ್ಯಾ ???? (ಈ ಜಗತ್ತು ನನಗೇನು ಕೊಟ್ಟಿದೆ? ಈ ಜಗತ್ತಿನಿಂದ ನಾನೇನು ಪಡೆದೆ? ನಾನೇಕೆ ಎಲ್ಲರ ಕುರಿತು ಯೋಚಿಸಲಿ ? ಎಲ್ಲರೂ ನನಗೇನು ಮಾಡಿದ್ದಾರೆ ?! ). ಈ ಪ್ರಸಿದ್ಧ ಗೀತೆಯನ್ನು ಹಾಡಿದ ಆಶಾ ಭೋಸ್ಲೆ ಬದುಕಿದ್ದೂ ಒಂದು ರೀತಿ ಅದೇ ದಾಟಿಯಲ್ಲಿ !!!! Just ಬಿಂದಾಸ್.

1971ರಲ್ಲೇ ಬಂದ ಈ ಗೀತೆ my life-my choice ಅನ್ನುವ ಇವತ್ತಿನ ಅದೆಷ್ಟೋ ಮಂದಿಯ ಜೀವನಕ್ಕೆ ಹೆಚ್ಚು ಹತ್ತಿರವಾಗಿದೆ. ಅಕ್ಕ ಲತಾ ಮಂಗೇಶ್ಕರ್ ಸ್ವರ ಲೋಕದ ಸಾಮ್ರಾಜ್ಞಿ!! ಅಕ್ಕನದು ಆಚಾರ , ವಿಚಾರ , ಸಂಪ್ರದಾಯ, ಸಭ್ಯತೆಯ ಬೇಲಿಯೊಳಗಿನ ಬಿಳಿಯ ಮಲ್ಲಿಗೆಯಂತಹ ಶುಭ್ರ ಜೀವನ. ತಂದೆಯ ನೆರಳಿಲ್ಲದ ಕಷ್ಟಕರ ದಿನಗಳ ಬಾಲ್ಯ . ತನಗೆ ಅಕ್ಕನ ಕುರಿತಾಗಿ ಅಪಾರ ಅಭಿಮಾನವಿದ್ದರೂ ಅಕ್ಕನ ಆಸರೆಯಿಂದ ಹೊರ ಬಂದು ತನ್ನದೇ ಅಸ್ಥಿತ್ವ ಕಂಡುಕೊಳ್ಳುವ ಹಂಬಲ.

ಮನೆಯವರ ವಿರೋಧದ ನಡುವೆ ಪ್ರೀತಿಸಿದವನ ಜೊತೆ ಮದುವೆ , ಮದುವೆಯ ಬಂಧ ಬಂಧನವಾದಾಗ ಧಿಕ್ಕರಿಸಿ ಹೊರ ಬಂದ ದಿಟ್ಟೆ . ಹಾಡುವ ಶೈಲಿಯಲ್ಲೂ ಅಕ್ಕನನ್ನು ಅನುಕರಿಸದೇ ತನ್ನದೇ ಆದ ಸೊಗಡನ್ನು ಸೃಷ್ಟಿಸಿಕೊಂಡ ಪ್ರತಿಭೆ . ಅಕ್ಕ ಹಾಡದ ಅದೆಷ್ಟೋ ಜನಪ್ರಿಯ ಕ್ಯಾಬರೆ ಸಾಲುಗಳಿಗೆ ಧ್ವನಿಯಾದ ಹೆಗ್ಗಳಿಕೆ. Versatile ಎಂಬ ವೈವಿಧ್ಯತೆಗೆ ಪರ್ಯಾಯವಾಗಿ ಬೆಳೆದ ಗಾಯಕಿ.

ಅದು ಮರಾಠಿ ಅಭಂಗ್, ಸಂತ ವಾಣಿ, ಭಾವಗೀತ್ , ಲಾವಣಿ , ಸಿನಿಮಾ ಗೀತೆ , ಶಾಸ್ತ್ರೀಯ ಗಾಯನ , ಗಝಲ್ , ಇಂಡಿ ಪಾಪ್ , western, fusion ಮುಂತಾದ ಯಾವುದೇ ಪ್ರಕಾರವನ್ನು ಸಮರ್ಥವಾಗಿ ಹಾಡಬಲ್ಲ ಛಾತಿ. ಮರಾಠಿ, ಹಿಂದಿ , ಬಾಂಗ್ಲ , ಕನ್ನಡ ಸೇರಿದಂತೆ ಹತ್ತು ಹಲವಾರು ಭಾಷೆಗಳಲ್ಲಿ ಹನ್ನೊಂದು ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಜೀವ ಕೊಟ್ಟ ಗಾಯಕಿ . ಜೀವನಕ್ಕೆ ಸಂಗಾತಿ ಬೇಕೆನ್ನಿಸಿದಾಗ ಮತ್ತೆ RD ಬರ್ಮನ್ ಎಂಬ ಸಂಗೀತ ಮಾಂತ್ರಿಕನ ಕೈಹಿಡಿದ ಗಟ್ಟಿಗತ್ತಿ .

ಮೇರು ಕಲಾವಿದೆ ಆಶಾ ಭೋಸ್ಲೆ

ಉಮ್ರಾವ್ ಜಾನ್ , ಇಝಾಜತ್ ಹಾಡುಗಳ ಮೂಲಕ ಹೊಸ ಎತ್ತರಕ್ಕೆ ಬೆಳೆದ ಕಲಾವಿದೆ.ಅಂದಿನ ನೂತನ್ ನರ್ಗಿಸಿನಿಂದ ಹಿಡಿದು ಇಂದಿನ ಊರ್ಮಿಳ - ಕಾಜಲ್ ವರೆಗಿನ ನಾಯಕಿಯರಿಗೆ ಧ್ವನಿಯಾದ ಹಿರಿಮೆ. ಅಂದಿನ OP ನಯ್ಯರ್ ನಿಂದ ಇಂದಿನ AR ರೆಹೆಮಾನ್ ವರೆಗಿನ ಸಂಗೀತ ನಿರ್ದೇಶಕರಿಗೆ ಜೊತೆಯಾದ ಮೇರು ಕಲಾವಿದೆ. ದಾದಾ ಸಾಹೇಬ್ ಫಾಲ್ಕೆ , ಪದ್ಮ ವಿಭೂಷಣ ಈ ಕಲಾ ತಪಸ್ವಿಗೆ ಸಂದ ಅಸಂಖ್ಯಾತ ಉಪಾದಿಗಳಲ್ಲಿ ಕೆಲವು ಮಾತ್ರ.

ಒಟ್ಟಿನಲ್ಲಿ ನಮ್ಮಂತಹ ಲಕ್ಷಾಂತರ ಅಭಿಮಾನಿಗಳಿಗೆ ಆಶಾ ಭೋಂಸ್ಲೇ ಎಂದರೆ ಅದು ಬರೀ ಹೆಸರಲ್ಲ , ವ್ಯಕ್ತಿಯಲ್ಲ. ಒಂದು phenomenon.. ಒಂದು ದೃಷ್ಟಾಂತ.. ತನ್ನದೇ ಷರತ್ತಿನಲ್ಲಿ ಬದುಕನ್ನು ಸಂಭ್ರಮಿಸಿ ತೆರಳಿದ ನಿಜ ಕಲಾವಿದೆಗೆ ನಮೋನಮಃ.