ವಿಜಯ್ ದೇವರಕೊಂಡ ಅವರನ್ನು ಕಂಡರೆ ಶಿಮನ್‌ಗೆ ಎಲ್ಲಿಲ್ಲದ ಪ್ರೀತಿ. ‘ವಿಜಯ್ ದೇವರಕೊಂಡ ಈಗ ಅಧಿಕೃತವಾಗಿ ನನ್ನ ಬ್ರದರ್-ಇನ್-ಲಾ (ಬಾವ). ಆದರೆ ಅವರು ನನಗೆ ನನ್ನ ಸ್ವಂತ ಅಣ್ಣನಂತೆಯೇ ಕಾಣುತ್ತಾರೆ. ನಿಮ್ಮಂತಹ ಒಬ್ಬ ಅಣ್ಣನನ್ನು ಪಡೆಯಬೇಕು ಎಂಬುದು ನನ್ನ ಕನಸಾಗಿತ್ತು. ನೀವು ಬರಿ ಬಾವ ಅಲ್ಲ, ನನ್ನ ನಿಜವಾದ ಅಣ್ಣ’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಬರಿ 'ಬಾವ' ಅಲ್ಲ, ಇವರು ನಮ್ಮ 'ಅಣ್ಣ'! ರೌಡಿ ಸ್ಟಾರ್ ವಿಜಯ್ ಬಗ್ಗೆ ರಶ್ಮಿಕಾ ತಂಗಿ ಶಿಮನ್ ಭಾವುಕ ಮಾತು!
ಸಿನೆಮಾ ಪ್ರೇಮಿಗಳ ಬಹುದಿನಗಳ ಕಾತುರಕ್ಕೆ ಕೊನೆಗೂ ತೆರೆ ಬಿದ್ದಿದೆ. ಸ್ಯಾಂಡಲ್‌ವುಡ್‌ನಿಂದ ಟಾಲಿವುಡ್‌ವರೆಗೂ ಹಬ್ಬಿದ್ದ ರಶ್ಮಿಕಾ ಮಂದಣ್ಣ (Rashmika Manadanna) ಮತ್ತು ವಿಜಯ್ ದೇವರಕೊಂಡ (Vijay Deverakonda) ಅವರ ಪ್ರೇಮ ಪುರಾಣ ಈಗ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಹೌದು, ನ್ಯಾಷನಲ್ ಕ್ರಶ್ ರಶ್ಮಿಕಾ ಮತ್ತು ರೌಡಿ ಸ್ಟಾರ್ ವಿಜಯ್ ದೇವರಕೊಂಡ ಕಳೆದ ಫೆಬ್ರವರಿ 26 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ರಾಜವೈಭೋಗದ ನಡುವೆ ಹಸೆಮಣೆ ಏರಿದ್ದಾರೆ. ಈ ಅದ್ಧೂರಿ ಮದುವೆಯ ಸುಂದರ ಕ್ಷಣಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿವೆ.
ರಾಜಸ್ಥಾನದಲ್ಲಿ ಕೊಡವ ಸಂಪ್ರದಾಯದ ಸೊಬಗು!
ಈ ಜೋಡಿಯ ಮದುವೆ ರಾಜಸ್ಥಾನದ ಅರಮನೆಯಲ್ಲಿ ನಡೆದಿದ್ದರೂ, ರಶ್ಮಿಕಾ ಮಂದಣ್ಣ ಮಾತ್ರ ತಮ್ಮ ಕೊಡಗಿನ ಬೇರುಗಳನ್ನು ಮರೆತಿರಲಿಲ್ಲ. ಕೊಡವ ಸಂಪ್ರದಾಯದಂತೆ ನಡೆದ ಮದುವೆಯ ಶಾಸ್ತ್ರಗಳು, ಕೊಡಗಿನ ವಿಶಿಷ್ಟ ಉಡುಗೆ ತೊಟ್ಟ ರಶ್ಮಿಕಾ ಅವರ ಸೌಂದರ್ಯ ಎಲ್ಲರ ಕಣ್ಣು ಕೋರೈಸುವಂತಿತ್ತು. ಹಳದಿ ಶಾಸ್ತ್ರ, ಸಂಗೀತ ಕಾರ್ಯಕ್ರಮಗಳಲ್ಲಿ ಇಡೀ ಕುಟುಂಬವೇ ಒಂದಾಗಿ ಸಂಭ್ರಮಿಸಿದೆ. ಈ ಮದುವೆಯ ಪ್ರತಿ ಕ್ಷಣವೂ ಫೋಟೋಗಳ ಮೂಲಕ ಈಗ ಅಭಿಮಾನಿಗಳ ಮುಂದೆ ಬರುತ್ತಿದೆ.
ಅಕ್ಕನ ಮದುವೆಗಾಗಿ ಶಾಲೆಗೆ ಟೋಪಿ ಹಾಕಿದ ಶಿಮನ್!
ಈ ಸಂಭ್ರಮದ ನಡುವೆ ಎಲ್ಲರ ಗಮನ ಸೆಳೆಯುತ್ತಿರುವುದು ರಶ್ಮಿಕಾ ಅವರ ಮುದ್ದಿನ ತಂಗಿ ಶಿಮನ್ ಮಂದಣ್ಣ. ತನ್ನ ಪ್ರೀತಿಯ ಅಕ್ಕನ ಮದುವೆಯ ಬಗ್ಗೆ ಶಿಮನ್ (Shiman Mandanna) ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಷಯಗಳು ಬಹಳ ಕ್ಯೂಟ್ ಆಗಿವೆ. "ಅಕ್ಕನ ಮದುವೆಯ ಪ್ರತಿಯೊಂದು ಸಂಭ್ರಮದಲ್ಲೂ ಭಾಗಿಯಾಗಲು ನಾನು ಶಾಲೆಯನ್ನೇ ಬಂಕ್ ಮಾಡಿದ್ದೆ!" ಎಂದು ಹೇಳಿಕೊಳ್ಳುವ ಮೂಲಕ ಶಿಮನ್ ತನಗಿದ್ದ ಉತ್ಸಾಹವನ್ನು ಹೊರಹಾಕಿದ್ದಾರೆ. "ದಿನಗಳು ಎಷ್ಟು ಬೇಗ ಕಳೆದು ಹೋದವು ಎಂದು ನಂಬಲು ಸಾಧ್ಯವಾಗುತ್ತಿಲ್ಲ" ಎನ್ನುತ್ತಾ ಶಿಮನ್ ಆ ದಿನಗಳ ಸುಂದರ ನೆನಪುಗಳಿಗೆ ಜಾರಿದ್ದಾರೆ.
'ವಿಜಯ್ ಬರಿ ಬಾವ ಅಲ್ಲ, ಅವರು ನನ್ನ ರಿಯಲ್ ಬ್ರದರ್'
ಮದುವೆಯ ನಂತರ ವಿಜಯ್ ದೇವರಕೊಂಡ ಅವರನ್ನು ಕಂಡರೆ ಶಿಮನ್‌ಗೆ ಎಲ್ಲಿಲ್ಲದ ಪ್ರೀತಿ. ವಿಜಯ್ ಬಗ್ಗೆ ಮಾತನಾಡುತ್ತಾ, "ವಿಜಯ್ ದೇವರಕೊಂಡ ಈಗ ಅಧಿಕೃತವಾಗಿ ನನ್ನ ಬ್ರದರ್-ಇನ್-ಲಾ (ಬಾವ). ಆದರೆ ಅವರು ನನಗೆ ನನ್ನ ಸ್ವಂತ ಅಣ್ಣನಂತೆಯೇ ಕಾಣುತ್ತಾರೆ. ನಿಮ್ಮಂತಹ ಒಬ್ಬ ಅಣ್ಣನನ್ನು ಪಡೆಯಬೇಕು ಎಂಬುದು ನನ್ನ ಕನಸಾಗಿತ್ತು. ನೀವು ಬರಿ ಬಾವ ಅಲ್ಲ, ನನ್ನ ನಿಜವಾದ ಅಣ್ಣ" ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಬಾವ-ತಂಗಿಯ ಈ ಸುಂದರ ಬಾಂಧವ್ಯ ಕಂಡು ನೆಟ್ಟಿಗರು ಕೂಡ ಫಿದಾ ಆಗಿದ್ದಾರೆ.
ಒಟ್ಟಿನಲ್ಲಿ ಕೊಡಗಿನ ಕುವರಿ ರಶ್ಮಿಕಾ ಈಗ ಅಧಿಕೃತವಾಗಿ ತೆಲುಗಿನ ಅಳಿಯ ವಿಜಯ್ ಪಾಲಾಗಿದ್ದಾರೆ. ಈ ತಾರಾ ಜೋಡಿಯ ಹೊಸ ಜೀವನಕ್ಕೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದರೆ, ತಂಗಿ ಶಿಮನ್ ಅವರ ಈ ಭಾವನಾತ್ಮಕ ಪೋಸ್ಟ್ ಎಲ್ಲರ ಹೃದಯ ಗೆಲ್ಲುತ್ತಿದೆ. ವಿಜಯ್ ದೇವರಕೊಂಡ ಅವರು ಕೇವಲ ರಶ್ಮಿಕಾ ಅವರ ಬಾಳಸಂಗಾತಿಯಾಗಿ ಮಾತ್ರವಲ್ಲ, ಮಂದಣ್ಣ ಕುಟುಂಬದ ಒಬ್ಬ ಜವಾಬ್ದಾರಿಯುತ ಅಣ್ಣನಾಗಿಯೂ ಮಿಂಚುತ್ತಿದ್ದಾರೆ.


