ಅಸ್ಸಾಂ ಸರ್ಕಾರ ಬಹುಪತ್ನಿತ್ವ ಮಸೂದೆಯನ್ನು ಅಂಗೀಕರಿಸಿದ್ದು, ಒಂದಕ್ಕಿಂತ ಹೆಚ್ಚು ಮದುವೆಯಾಗುವುದನ್ನು ಅಪರಾಧ ಎಂದು ಪರಿಗಣಿಸಿದೆ. ಅಪರಾಧಿಗೆ ಜೈಲು ಮತ್ತು ದಂಡ ವಿಧಿಸಬಹುದು. ಇದರೊಂದಿಗೆ, ಯಾರಾದರೂ ಕಾನೂನು ಮುರಿದರೆ, ಅವರ ಸರ್ಕಾರಿ ಉದ್ಯೋಗ ಮತ್ತು ಮತದಾನದ ಹಕ್ಕನ್ನು ಸಹ ಕಳೆದುಕೊಳ್ಳುತ್ತಾರೆ.
- Home
- News
- India News
- India Latest News Live: ಒಂದಕ್ಕಿಂತ ಹೆಚ್ಚು ಮದುವೆಯಾದರೆ 7 ವರ್ಷ ಜೈಲು ಫಿಕ್ಸ್, ಅಸ್ಸಾಂನಲ್ಲಿ ಬಹುಪತ್ನಿತ್ವ ಮಸೂದೆ ಪಾಸ್!
India Latest News Live: ಒಂದಕ್ಕಿಂತ ಹೆಚ್ಚು ಮದುವೆಯಾದರೆ 7 ವರ್ಷ ಜೈಲು ಫಿಕ್ಸ್, ಅಸ್ಸಾಂನಲ್ಲಿ ಬಹುಪತ್ನಿತ್ವ ಮಸೂದೆ ಪಾಸ್!

ನವದೆಹಲಿ: ಅಯೋಧ್ಯೆಯ ರಾಮಮಂದಿರದ ನಿರ್ಮಾಣ ಸಂಪನ್ನವಾದ ನಿಮಿತ್ತ ಮಂಗಳವಾರ ಮಂದಿರದ ಶಿಖರದ ಮೇಲೆ ಹಾರಿಸಲಾದ ಭಗವಾಧ್ವಜಕ್ಕೆ ಪಾಕಿಸ್ತಾನ ಆಕ್ಷೇಪಿಸಿದೆ. ಈ ಕುರಿತು ಹೇಳಿಕೆ ಬಿಡು ಗಡೆ ಮಾಡಿರುವ ಪಾಕ್ನ ವಿದೇಶಾಂಗ ಸಚಿವಾಲಯ, 'ಇದು ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ವ್ಯಾಪಕ ಒತ್ತಡ ಹೇರುವ ತಂತ್ರ. ಬಹುಸಂಖ್ಯಾತ ಹಿಂದೂಗಳ ಪ್ರಭಾವದಿಂದ ಮುಸ್ಲಿಮರ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆ ನಾಶಮಾಡುವ ಉದ್ದೇಶಪೂರ್ವಕ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ' ಎಂದಿದೆ.
ಜತೆಗೆ, ಭಾರತದಲ್ಲಿ ಹೆಚ್ಚುತ್ತಿ ರುವ ಮುಸ್ಲಿಂ ದ್ವೇಷದತ್ತ ಅಂತಾರಾಷ್ಟ್ರೀಯ ಸಮುದಾಯ ಗಮನ ಹರಿಸಬೇಕು ಎಂದೂ ಆಗ್ರಹಿಸಲಾಗಿದೆ. ಇದಕ್ಕೆ ಭಾರತದ ವಿದೇಶಾಂಗ ಇಲಾಖೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿ ಪಾಕ್ನಿಂದ ಪಾಠ ಕಲಿಯಬೇಕಿಲ್ಲ ಎಂದು ಕಪಾಳಮೋಕ್ಷ ಮಾಡಿದೆ.
India Latest News Live 27 November 2025ಒಂದಕ್ಕಿಂತ ಹೆಚ್ಚು ಮದುವೆಯಾದರೆ 7 ವರ್ಷ ಜೈಲು ಫಿಕ್ಸ್, ಅಸ್ಸಾಂನಲ್ಲಿ ಬಹುಪತ್ನಿತ್ವ ಮಸೂದೆ ಪಾಸ್!
India Latest News Live 27 November 2025ಟ್ರ್ಯಾಕ್ಟರ್ ಮೇಲೆ ನಡುಗುವ ಏಣಿ ಹತ್ತಿ ಎಸ್‌ಬಿಐ ಬ್ಯಾಂಕ್ ತಲುಪಿದ ಸಿಬ್ಬಂದಿ ಗ್ರಾಹಕರು..!
ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಎಸ್‌ಬಿಐ ಬ್ಯಾಂಕ್‌ನ ಮೆಟ್ಟಿಲುಗಳನ್ನು ಕೆಡವಲಾಯಿತು. ಇದರಿಂದಾಗಿ, ಸಿಬ್ಬಂದಿ ಮತ್ತು ಗ್ರಾಹಕರು ಏಣಿಯ ಸಹಾಯದಿಂದ ಬ್ಯಾಂಕ್ ಪ್ರವೇಶಿಸಬೇಕಾಯಿತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ತಮಾಷೆಯ ಕಾಮೆಂಟ್‌ಗಳಿಗೆ ಕಾರಣವಾಯಿತು.
India Latest News Live 27 November 2025ದೇಶದ ಅತ್ಯಂತ ಶ್ರೀಮಂತ ಶಾಸಕರು ಯಾರು? ಟಾಪ್ 5 ರಲ್ಲಿ 2ನೇ ಸ್ಥಾನದಲ್ಲಿರುವ ಕರ್ನಾಟಕದ ಈ ನಾಯಕ ಯಾರು?
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿಯು ದೇಶದ 4,092 ಶಾಸಕರ ಸಂಪತ್ತಿನ ಅಂತರ ಬಹಿರಂಗಪಡಿಸಿದೆ. ಮಹಾರಾಷ್ಟ್ರದ ಪರಾಗ್ ಶಾ ₹3,383 ಕೋಟಿ ಆಸ್ತಿಯೊಂದಿಗೆ ಅತ್ಯಂತ ಶ್ರೀಮಂತರಾಗಿದ್ದರೆ, ಪ.ಬಂಗಾಳದ ನಿರ್ಮಲ್ ಕುಮಾರ್ ಧಾರ ಕೇವಲ ₹1,700 ಆಸ್ತಿಯೊಂದಿಗೆ ಅತ್ಯಂತ ಬಡ ಶಾಸಕರಾಗಿದ್ದ
India Latest News Live 27 November 2025WPL Auction - ಬಿಗ್ ಹಿಟ್ಟರ್ ಕೈಬಿಟ್ಟ ಆರ್‌ಸಿಬಿ; ದೀಪ್ತಿ, ಕೆರ್ರ್‌ಗೆ ಜಾಕ್‌ಪಾಟ್! ಬೆಂಗಳೂರು ಪಾಲಾದ ಸ್ಟಾರ್ ಆಲ್ರೌಂಡರ್
ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ, ಆರ್‌ಸಿಬಿ ತಂಡವು ಸ್ಟಾರ್ ಆಟಗಾರ್ತಿ ಸೋಫಿ ಡಿವೈನ್ ಅವರನ್ನು ಕಳೆದುಕೊಂಡಿದೆ. ಮತ್ತೊಂದೆಡೆ, ದೀಪ್ತಿ ಶರ್ಮಾ ಅವರು 3.20 ಕೋಟಿ ರುಪಾಯಿಗೆ ಯುಪಿ ವಾರಿಯರ್ಸ್ ಪಾಲಾಗಿದ್ದಾರೆ. ಆರ್‌ಸಿಬಿ ಖರೀದಿಸಿದ ಆಟಗಾರ್ತಿಯರ ವಿವರ ಇಲ್ಲಿದೆ.
India Latest News Live 27 November 2025ಸುಮಾತ್ರಾದ ಕಾಡಿನಲ್ಲಿ ವಿಶ್ವದ ಅತ್ಯಂತ ದೊಡ್ಡ ಹೂವು - 13 ವರ್ಷಗಳ ಹುಡುಕಾಟಕ್ಕೆ ತೆರೆ
India Latest News Live 27 November 20254ನೇ ಆವೃತ್ತಿಯ WPL ವೇಳಾಪಟ್ಟಿ ಪ್ರಕಟ; ಈ ಎರಡು ನಗರಗಳಲ್ಲಿ ನಡೆಯಲಿದೆ ಮಹಿಳಾ ಐಪಿಎಲ್!
India Latest News Live 27 November 2025ವಿಡಿಯೋ - ವಸತಿ ಯೋಜನೆ ಮನೆಗಳ ಪರಿಶೀಲನೆ ವೇಳೆ ನೆಲಮಾಳಿಗೆ ಕುಸಿತ, ಕಾಂಗ್ರೆಸ್ ಶಾಸಕ ಕೂದಲೆಳೆ ಅಂತರದಲ್ಲಿ ಪಾರು!
ತೆಲಂಗಾಣದ ವೇಮುಲವಾಡದಲ್ಲಿ ನಿರ್ಮಾಣ ಹಂತದ ಡಬಲ್ ಬೆಡ್‌ರೂಮ್ ಮನೆಗಳ ಪರಿಶೀಲನೆ ವೇಳೆ, ಕಾಂಗ್ರೆಸ್ ಶಾಸಕ ಆದಿ ಶ್ರೀನಿವಾಸ್ ಮತ್ತು ಅಧಿಕಾರಿಗಳಿದ್ದಾಗಲೇ ನೆಲಮಾಳಿಗೆ ಕುಸಿದುಬಿದ್ದಿದೆ. ಈ ಘಟನೆಗೆ ಹಿಂದಿನ ಬಿಆರ್‌ಎಸ್ ಸರ್ಕಾರ ಕಾರಣ ಎಂದು ಶಾಸಕರು ಆರೋಪಿಸಿದ್ದು, ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
India Latest News Live 27 November 2025ಮನೆ ನಿರ್ಮಾಣ ಸೈಟ್‌ಗೆ ಭೇಟಿ ವೇಳೆ ಕುಸಿದ ಛಾವಣಿ, ಕಾಂಗ್ರೆಸ್ ಶಾಸಕ ಪ್ರಾಣಪಾಯದಿಂದ ಪಾರು
ಮನೆ ನಿರ್ಮಾಣ ಸೈಟ್‌ಗೆ ಭೇಟಿ ವೇಳೆ ಕುಸಿದ ಛಾವಣಿ, ಕಾಂಗ್ರೆಸ್ ಶಾಸಕ ಪ್ರಾಣಪಾಯದಿಂದ ಪಾರು, ಬಡವರಿಗೆ, ಸೂರಿಲ್ಲದವರಿಗೆ ನಿರ್ಮಿಸುತ್ತಿರವ ಮನೆ ಇದಾಗಿದೆ. ಛಾವಣಿ ಕುಸಿತ ಘಟನೆ ಬೆನ್ನಲ್ಲೇ ಗುಣಮಟ್ಟ, ಸರ್ಕಾರದ ಭ್ರಷ್ಟಾಚಾರ ಕುರಿತು ಭಾರಿ ಟೀಕೆ ಕೇಳಿಬಂದಿದೆ.
India Latest News Live 27 November 2025ದೀದೀ ನಾಡಲ್ಲಿ ಹೆಣ್ಣು ದೆವ್ವ - ರೈಲು ಓಡಾಟ ಸಂಪೂರ್ಣ ಬಂದ್- ಮದುವೆಗೂ ಸಂಕಷ್ಟ - ಬೆಚ್ಚಿ ಬೀಳೋ ಸ್ಟೋರಿ ಇದು
ಪಶ್ಚಿಮ ಬಂಗಾಳದ ಬೇಗುಂಕೋಡರ್ ರೈಲು ನಿಲ್ದಾಣವು ಹೆಣ್ಣು ದೆವ್ವದ ಕಾಟದ ವದಂತಿಯಿಂದಾಗಿ ದಶಕಗಳ ಕಾಲ ಮುಚ್ಚಲ್ಪಟ್ಟಿತ್ತು. ಈ ಭಯದಿಂದಾಗಿ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಅಂತಿಮವಾಗಿ, ಸಂಘ-ಸಂಸ್ಥೆಗಳ ಪ್ರಯತ್ನ ಮತ್ತು ವೈಚಾರಿಕ ಸವಾಲಿನ ನಂತರ, 2009ರಲ್ಲಿ ರೈಲು ಸೇವೆ ಪುನರಾರಂಭಗೊಂಡಿದೆ.
India Latest News Live 27 November 2025ಮೇರಿ ಡಿಕೋಸ್ಟಾ ಬಳಿಕ ಪಲಾಶ್ ಜೊತೆ ಮತ್ತೊಬ್ಬ ಕೊರಿಯೋಗ್ರಾಫರ್ ಎಂಟ್ರಿ? ಯಾರೀಕೆ? ಏನಿದು ಹೊಸ ಕಥೆ?
ಮೇರಿ ಡಿಕೋಸ್ಟಾ ಈ ಹಿಂದೆ ಪಲಾಶ್ ಜೊತೆಗಿನ ಫ್ಲರ್ಟಿ ಚಾಟ್‌ಗಳ ಫೋಟೋಗಳನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದರು. ಈಗ, ಮತ್ತೊಬ್ಬ ಮಹಿಳೆಯ ಹೆಸರು ವೈರಲ್ ಆಗುತ್ತಿದ್ದು, ಪಲಾಶ್ ಜೊತೆ ತಳುಕು ಹಾಕಿಕೊಂಡಿದೆ.
India Latest News Live 27 November 2025ಟ್ರೇಡ್ ಫ್ರಾಡ್ - 4 ವರ್ಷದಲ್ಲಿ 35 ಕೋಟಿ ರೂಪಾಯಿ ಕಳೆದುಕೊಂಡ 72ರ ವೃದ್ಧ
stock market investment scam: ಮುಂಬೈನ 72 ವರ್ಷದ ಉದ್ಯಮಿಯೊಬ್ಬರಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಾಗಿ ನಂಬಿಸಿ ಬ್ರೋಕರೇಜ್ ಸಂಸ್ಥೆಯೊಂದು ನಾಲ್ಕು ವರ್ಷಗಳಲ್ಲಿ 35 ಕೋಟಿ ರೂಪಾಯಿ ವಂಚಿಸಿದೆ.
India Latest News Live 27 November 2025ಅಳಿವಿನಂಚಿನ ಕಸ್ತೂರಿ ಮೃಗ ಬರೋಬ್ಬರಿ 70 ವರ್ಷದ ಬಳಿಕ ಪಶ್ಚಿಮ ಬಂಗಾಳದಲ್ಲಿ ಪತ್ತೆ
ಅಳಿವಿನಂಚಿನ ಕಸ್ತೂರಿ ಮೃಗ ಬರೋಬ್ಬರಿ 70 ವರ್ಷದ ಬಳಿಕ ಪಶ್ಚಿಮ ಬಂಗಾಳದಲ್ಲಿ ಪತ್ತೆ, ಕಸ್ತೂರಿ ಪರಿಮಳ, ಮಾಂಸಕ್ಕಾಗಿ ಕಸ್ತೂರಿ ಮೃಗವನ್ನು ಬೇಟೆಯಾಡಿದ ಪರಿಣಾಮ ಭಾರತದಲ್ಲಿ ಕಸ್ತೂರಿ ಮೃಗಗಳು ಸಂತತಿ ಅಳಿವಿನಂಚಿನಲ್ಲಿದೆ. ಈ ಕಸ್ತೂರಿ ಮೃಗ ಬಂಗಾಳ ಕಾಡಿನಲ್ಲಿ ಪತ್ತೆಯಾಗಿದೆ.
India Latest News Live 27 November 2025ಸೋಶಿಯಲ್ ಮೀಡಿಯಾದಲ್ಲಿ ಹಾವಳಿ ಸೃಷ್ಟಿಸಿದ MMS; ಬಂಗಾಳಿ ಇನ್‌ಫ್ಲುಯೆನ್ಸರ್ Sofik SK ಫಾಲೋವರ್ಸ್ ಭಾರೀ ಏರಿಕೆ!
India Latest News Live 27 November 2025ಏರ್ ಇಂಡಿಯಾ ಮೇಲೆ ಅಸಮಾಧಾನ ಹೊರಹಾಕಿದ ಮೊಹಮ್ಮದ್ ಸಿರಾಜ್! ಕ್ಷಮೆ ಕೇಳಿದ ವಿಮಾನಯಾನ ಸಂಸ್ಥೆ!
ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಸಿರಾಜ್, ಗುವಾಹಟಿಯಿಂದ ಹೈದರಾಬಾದ್‌ಗೆ ತೆರಳುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ನಾಲ್ಕು ಗಂಟೆಗಳ ಕಾಲ ವಿಳಂಬವಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏರ್‌ಲೈನ್ಸ್‌ನಿಂದ ಸರಿಯಾದ ಮಾಹಿತಿ ಸಿಗದ ಕಾರಣ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.
India Latest News Live 27 November 2025ಕರಿಷ್ಮಾ ಕಪೂರ್ ಮಗಳ ಫೀಸ್ ಕಟ್ಟೋದು ಮಾಜಿ ಗಂಡನ 3ನೇ ಪತ್ನಿಯಂತೆ! ಆಕೆಯನ್ನೇ ಕೋರ್ಟಿಗೆಳೆದ ನಟಿ- ಛೀಮಾರಿ
India Latest News Live 27 November 2025ಅಯೋಧ್ಯೆ ದೇಶದ ಅತಿ ಹೆಚ್ಚು ಲಾಭದಾಯಕ ಮಾರುಕಟ್ಟೆ; ರಿಯಲ್ ಎಸ್ಟೇಟ್‌ನಲ್ಲಿ ಹೊಸ ದಾಖಲೆ!
Ayodhya real estate boom: ರಾಮ ಮಂದಿರ ನಿರ್ಮಾಣದ ನಂತರ ಅಯೋಧ್ಯೆ ದೇಶದ ಪ್ರಮುಖ ರಿಯಲ್ ಎಸ್ಟೇಟ್ ಕೇಂದ್ರವಾಗಿ ಮಾರ್ಪಟ್ಟಿದೆ. ಬೃಹತ್ ಮೂಲಸೌಕರ್ಯ ಅಭಿವೃದ್ಧಿ ಹೆಚ್ಚಿದ ಪ್ರವಾಸೋದ್ಯಮದಿಂದ, ಕಳೆದ 5 ವರ್ಷಗಳಲ್ಲಿ ಭೂಮಿಯ ಬೆಲೆಗಳು ಶೇ. 300-500ರಷ್ಟು ಏರಿಕೆ, ಹೂಡಿಕೆದಾರರಿಗೆ ಲಾಭದಾಯಕ ತಾಣವಾಗಿದೆ.
India Latest News Live 27 November 2025ಬ್ರಿಟನ್ ರಾಣಿ ವಿರುದ್ಧ ಬಟ್ಟೆ ಕದ್ದ ಆರೋಪ ಹೊರಿಸಿದ ಮೀಡಿಯಾ!
ಬ್ರಿಟನ್ ರಾಜಮನೆತನದ ಸೊಸೆ ಮೇಘನ್ ಮಾರ್ಕೆಲ್ ಮೇಲೆ ₹1.5 ಲಕ್ಷ ಮೌಲ್ಯದ ಉಡುಪನ್ನು ಕದ್ದ ಆರೋಪ ಕೇಳಿಬಂದಿದೆ. ನೆಟ್‌ಫ್ಲಿಕ್ಸ್ ಪ್ರೋಮೋದಲ್ಲಿ ಅವರು ಧರಿಸಿದ್ದ ಉಡುಪು ಮೂರು ವರ್ಷಗಳ ಹಿಂದಿನ ಫೋಟೋಶೂಟ್‌ನದ್ದು ಎಂದು ವರದಿಯಾಗಿದೆ.
India Latest News Live 27 November 2025ಹಾವನ್ನು ಉಳಿಸಲು ಹೋಗಿ ಪಲ್ಟಿಯಾದ ಶಾಲಾ ಆಟೋ - ಇಬ್ಬರು ಮಕ್ಕಳ ದುರಂತ ಅಂತ್ಯ
school auto Overturned: ರಸ್ತೆಯಲ್ಲಿ ಸಾಗುತ್ತಿದ್ದ ಹಾವನ್ನು ರಕ್ಷಿಸುವುದಕ್ಕೆ ಹೋಗಿ ಆಟೋವೊಂದು ಉರುಳಿ ಬಿದ್ದ ಪರಿಣಾಮ ಆಟೋದಲ್ಲಿದ್ದ ಎರಡು ಪುಟಾಣಿ ಮಕ್ಕಳು ಸಾವನ್ನಪ್ಪಿದ ಆಘಾತಕಾರಿ ಘಟನೆ ಕೇರಳದ ಪಟ್ಟಣತಿಟ್ಟ ಜಿಲ್ಲೆಯಲ್ಲಿ ನಡೆದಿದೆ.
India Latest News Live 27 November 2025ಲಕ್ಷ್ಮೀ ಮಿತ್ತಲ್ ಶಿಫ್ಟ್ ಆಗುತ್ತಿರುವ ರಹಸ್ಯ ದ್ವೀಪ ನಯಾ ಐಸ್ಲೆಂಡ್ ಎಲ್ಲಿದೆ?
ಪ್ರಸ್ತಾವಿತ ತೆರಿಗೆ ಬದಲಾವಣೆಗಳಿಂದಾಗಿ ಲಕ್ಷ್ಮಿ ಮಿತ್ತಲ್ ಇಂಗ್ಲೆಂಡ್‌ನಿಂದ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ, ದುಬೈನಲ್ಲಿ ನಯಾ ದ್ವೀಪದಲ್ಲಿರುವ ಹೊಸ ಅಲ್ಟ್ರಾ-ಐಷಾರಾಮಿ ಎಸ್ಟೇಟ್‌ನಲ್ಲಿ ತಮ್ಮ ಮುಂದಿನ ಜೀವನ ಕಳೆಯಲಿದ್ದಾರೆ.
India Latest News Live 27 November 2025ಹಲವರೊಂದಿಗೆ ಇತ್ತಾ ರಿಲೇಶನ್‌ಶಿಪ್? ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ಜೊತೆ ಪಲಾಶ್ ವಿಡಿಯೋ ಬಹಿರಂಗ
ಹಲವರೊಂದಿಗೆ ಇತ್ತಾ ರಿಲೇಶನ್‌ಶಿಪ್? ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ಜೊತೆ ಪಲಾಶ್ ವಿಡಿಯೋ ಬಹಿರಂಗ, ಪಲಾಶ್ ಮುಚ್ಚಾಲ್ ಹಾಗೂ ಸ್ಮೃತಿ ಮಂದನಾ ಮದುವೆ ಬಹುತೇಕ ಮುರಿದು ಬಿದ್ದಿದೆ. ಅಧಿಕೃತ ಪ್ರಕಟಣೆ ಮಾತ್ರ ಬಾಕಿ. ಇದಕ್ಕೆ ಕಾರಣವೂ ಬಹಿರಂಗವಾಗಿದೆ.