- Home
- Entertainment
- Cine World
- ಕರಿಷ್ಮಾ ಕಪೂರ್ ಮಗಳ ಫೀಸ್ ಕಟ್ಟೋದು ಮಾಜಿ ಗಂಡನ 3ನೇ ಪತ್ನಿಯಂತೆ! ಆಕೆಯನ್ನೇ ಕೋರ್ಟಿಗೆಳೆದ ನಟಿ- ಛೀಮಾರಿ
ಕರಿಷ್ಮಾ ಕಪೂರ್ ಮಗಳ ಫೀಸ್ ಕಟ್ಟೋದು ಮಾಜಿ ಗಂಡನ 3ನೇ ಪತ್ನಿಯಂತೆ! ಆಕೆಯನ್ನೇ ಕೋರ್ಟಿಗೆಳೆದ ನಟಿ- ಛೀಮಾರಿ
ನಟಿ ಕರಿಷ್ಮಾ ಕಪೂರ್ ಮತ್ತು ಅವರ ದಿವಂಗತ ಮಾಜಿ ಪತಿ ಸಂಜಯ್ ಕಪೂರ್ ಅವರ ಪತ್ನಿ ಪ್ರಿಯಾ ಸಚ್‌ದೇವ್ ನಡುವೆ 30 ಸಾವಿರ ಕೋಟಿ ಆಸ್ತಿಗಾಗಿ ಕಾನೂನು ಹೋರಾಟ ನಡೆಯುತ್ತಿದೆ. ತಮ್ಮ ಮಗಳ ಕಾಲೇಜು ಶುಲ್ಕ ಪಾವತಿಸಿಲ್ಲವೆಂದು ಕರಿಷ್ಮಾ ಕೋರ್ಟ್ ಮೆಟ್ಟಿಲೇರಿದ್ದು, ಈ ಕ್ಷುಲ್ಲಕ ಕಾರಣಕ್ಕೆ ನ್ಯಾಯಾಲಯ ಗರಂ ಆಗಿದೆ.

ಕರಿಷ್ಮಾ ಕಪೂರ್ ವಿವಾದ
ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಉದ್ಯಮಿ, ಸಂಜಯ್ ಕಪೂರ್ ಈಚೆಗೆ ನಿಧನರಾದರು. ಅವರು ನಿಧನರಾದಾಗಿನಿಂದಲೂ ಅವರ ಆಸ್ತಿಗೆ ಸಂಬಂಧಿಸಿದಂತೆ ಕೆಲವೊಂದು ಗಲಾಟೆಗಳು ನಡೆಯುತ್ತಲೇ ಇವೆ. ಅಂದಹಾಗೆ ಸಂಜಯ್ ಕಪೂರ್ ಅವರು ಮೂರು ಮದುವೆಯಾಗಿದ್ದರು. ಫ್ಯಾಷನ್ ಡಿಸೈನರ್ ನಂದಿತಾ ಮಹತಾನಿ, ನಟಿ ಕರಿಷ್ಮಾ ಕಪೂರ್ ಮತ್ತು ಕೊನೆಯದ್ದಾಗಿ ಪ್ರಿಯಾ ಸಚ್‌ದೇವ್.
ಇಬ್ಬರು ಮಕ್ಕಳು
ಕರಿಷ್ಮಾ ಕಪೂರ್ ಅವರಿಗೆ ಸಮೈರಾ ಮತ್ತು ಕಿಯಾನ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಸಂಜಯ್ ಕಪೂರ್ ಎಲ್ಲಾ ಮಕ್ಕಳಿಗೆ ಉಯಿಲು ಬರೆದಿಟ್ಟಿದ್ದರೂ ಅವರ ಹಾಲಿ ಪತ್ನಿ ಪ್ರಿಯಾ ಕಪೂರ್ ಅದನ್ನು ಬದಲಾಯಿಸಿದ್ದಾರೆ ಎನ್ನುವುದು ಕರಿಷ್ಮಾ ಕಪೂರ್ ಆರೋಪ. ಇದೀಗ ಕರಿಷ್ಮಾ ಕಪೂರ್ ಮತ್ತು ಪ್ರಿಯಾ ನಡುವೆ 30 ಸಾವಿರ ಕೋಟಿ ಆಸ್ತಿಗಾಗಿ ಕಲಹ ನಡೆಯುತ್ತಿದ್ದು, ಅದು ಕೋರ್ಟ್ನಲ್ಲಿದೆ.
ಕುತೂಹಲದ ವಿಷಯ
ಇದರ ನಡುವೆಯೇ, ಇನ್ನೊಂದು ಕುತೂಹಲದ ವಿಷಯವೂ ಬೆಳಕಿಗೆ ಬಂದಿದೆ. ಅದೇನೆಂದರೆ, ಕರಿಷ್ಮಾ ಕಪೂರ್ ಅವರ ಪುತ್ರಿ ಅಮೆರಿಕದಲ್ಲಿ ಓದುತ್ತಿದ್ದು, ಪ್ರತಿ ಸೆಮಿಸ್ಟರ್‌ಗೆ 95ಲಕ್ಷ ಹಣವನ್ನು ಕಾಲೇಜ್‌ಗೆ ಪಾವತಿ ಮಾಡುತ್ತಿದ್ದಾರೆ. ಆದರೆ ಅದನ್ನು ಇಲ್ಲಿಯವರೆಗೆ ಅವರ ಮಾಜಿ ಪತಿ ಸಂಜಯ್ ಕಪೂರ್ ಮಾಡುತ್ತಿದ್ದರು. ಅವರ ಬಳಿಕ ಅದನ್ನು ಅವರ ಮೂರನೆಯ ಪತ್ನಿ ಪ್ರಿಯಾ ಮಾಡಬೇಕಿತ್ತು. ಆದರೆ, ಆ ಶುಲ್ಕವನ್ನು ಅವರ ಭರಿಸಿಲ್ಲ ಎಂದು ಕರಿಷ್ಮಾ ತಮ್ಮ ಮಾಜಿ ಪತಿಯ ಹಾಲಿ ಪತ್ನಿ ವಿರುದ್ಧ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಫೀಸ್ ಕಟ್ಟಿರೋ ದಾಖಲೆ
ಆದರೆ ಇನ್ನು ಕುತೂಹಲ ಎನ್ನುವಂತೆ ಇದಾಗಲೇ ಆಕೆಯ ಫೀಸ್ ಕಟ್ಟಿಯಾಗಿದೆ. ಮುಂದಿನ ಕಂತು ಮುಂಬರುವ ಡಿಸೆಂಬರ್‌ನಲ್ಲಿದೆ, ಅದನ್ನು ಕಟ್ಟಬೇಕಿದೆ. ಕರಿಷ್ಮಾ ಕಪೂರ್ ಕೋರ್ಟ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರಿಯಾ ವಕೀಲರು ದಾಖಲೆ ಸಹಿತ ಕೋರ್ಟ್ಗೆ ತೋರಿಸಿದ್ದಾರೆ!
ಕೋರ್ಟ್ ಕೆಂಡಾಮಂಡಲ
ಇಂಥ ಕ್ಷುಲ್ಲಕ ಕಾರಣಕ್ಕೆ ಕೋರ್ಟ್ ಸಮಯವನ್ನು ವ್ಯರ್ಥ ಮಾಡುತ್ತಿರುವುದಕ್ಕೆ ದೆಹಲಿ ಹೈಕೋರ್ಟ್ ಸಿಕ್ಕಾಪಟ್ಟೆ ಗರಂ ಆಗಿದೆ. ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರು, ಇದೇ ಕೊನೆ. ನಾನು ಈ ವಿಚಾರದ ಮೇಲೆ ಇನ್ನು ಟೈಂ ವೇಸ್ಟ್ ಮಾಡುವುದಿಲ್ಲ. ನಾಟಕೀಯವಾಗಿ ಬಂದು ಈ ರೀತಿಯ ಕೋರ್ಟ್ ಸಮಯವನ್ನು ವ್ಯರ್ಥ ಮಾಡುವುದನ್ನು ಸಹಿಸುವುದಿದಲ್ಲ ಎಂದು ಇಬ್ಬರಿಗೂ ಎಚ್ಚರಿಕೆ ನೀಡಿದ್ದಾರೆ.
ಸಮೈರಾ ಕುರಿತು
ಅಂದಹಾಗೆ ಕರಿಷ್ಮಾ ಕಪೂರ್ ಅವರ ಮಗಳು ಸಮೈರಾಗೆ ಈಗ 20 ವರ್ಷ ವಯಸ್ಸು. ಈಕೆ ಅಮೆರಿಕನ್ ಸ್ಕೂಲ್ ಆಫ್ ಬಾಂಬೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಅಮೆರಿಕದ ಟಫ್ಟ್ಸ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಇವರ ವಿದ್ಯಾಭ್ಯಾಸ 2027ರಲ್ಲಿ ಕೊನೆಯಾಗಲಿದೆ.
14 ಕೋಟಿ ಮೌಲ್ಯದ ಬಾಂಡ್
ಸಂಜಯ್ ಕಪೂರ್ ಅವರಿಂದ 2016ರಲ್ಲಿ ಡಿವೋರ್ಸ್ ಪಡೆದ ಕರಿಷ್ಮಾ ಕಪೂರ್ ಆ ನಂತರ ಮುಂಬೈನ ಖಾರ್‌ನಲ್ಲಿರುವ ಸಂಜಯ್ ಕಪೂರ್ ಅವರ ಮನೆಯನ್ನು ತಮ್ಮದಾಗಿಸಿಕೊಂಡರು. ಇಷ್ಟೇ ಅಲ್ಲ ತಮ್ಮ ಇಬ್ಬರು ಮಕ್ಕಳ ಹೆಸರಿನಲ್ಲಿ 14 ಕೋಟಿ ಮೌಲ್ಯದ ಬಾಂಡ್‌ಗಳನ್ನು ಕೂಡ ಖರೀದಿ ಮಾಡಿದರು. ಈ ಬಾಂಡ್‌ಗಳಿಂದ ಪ್ರತಿ ತಿಂಗಳು ಸುಮಾರು ಹತ್ತು ಲಕ್ಷ ಬಡ್ಡಿ ಕರಿಷ್ಮಾ ಕಪೂರ್‌ಗೆ ಬರುತ್ತೆ ಎಂದೂ ಹೇಳಲಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

