ಬಿಸಿಸಿಐ ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ (WPL) ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಟೂರ್ನಿಯು ಜನವರಿ 09 ರಿಂದ ಫೆಬ್ರವರಿ 05 ರವರೆಗೆ ನಡೆಯಲಿದೆ. ಈ ಬಾರಿಯ ಪಂದ್ಯಗಳು ನವಿ ಮುಂಬೈ ಹಾಗೂ ವಡೋದರಾದಲ್ಲಿ ಆಯೋಜನೆಯಾಗಲಿದ್ದು, ಕಳೆದ ಬಾರಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆಗಿತ್ತು.
ಮುಂಬೈ: ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್(WPL) ಟೂರ್ನಿಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದ್ದು, ಮುಂಬರುವ ಜನವರಿ 09ರಿಂದ ಫೆಬ್ರವರಿ 05ರವರೆಗೆ ನಡೆಯಲಿದೆ. ಈ ಟೂರ್ನಿಯು ಭಾರತದ ಎರಡು ನಗರಗಳಾದ ನವಿ ಮುಂಬೈ ಹಾಗೂ ವಡೋದರಾದಲ್ಲಿ ನಡೆಯಲಿದೆ. WPL ಚೇರ್‌ಮನ್ ಜಯೇಶ್ ಜಾರ್ಜ್ ಟೂರ್ನಿಯ ವೇಳಾಪಟ್ಟಿಯನ್ನು ಘೋಷಿಸಿದ್ದಾರೆ.
ಎರಡು ಸ್ಟೇಡಿಯಂನಲ್ಲಿ ನಡೆಯಲಿದೆ ವುಮೆನ್ಸ್ ಪ್ರೀಮಿಯರ್ ಲೀಗ್
ಈ ಬಾರಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯು ತವರು ಹಾಗೂ ತವರಿನಾಚೆಯ ಮೈದಾನಗಳಲ್ಲಿ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿತ್ತು. ಆದರೆ ಇದೀಗ ಬಿಸಿಸಿಐ ಎರಡು ಸ್ಟೇಡಿಯಂನಲ್ಲಿ ಈಗಾಗಲೇ ಮಹಿಳಾ ತಂಡವು 2025ರ ಏಕದಿನ ವಿಶ್ವಕಪ್ ಗೆದ್ದು ಬೀಗಿದ್ದು, ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಅದೇ ಜೋಶ್‌ನಲ್ಲಿ ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ಗೆ ವೇದಿಕೆ ಸಜ್ಜಾಗಿದೆ.
ಮೊದಲ ಸುತ್ತಿನ ಪಂದ್ಯಗಳು ನವಿ ಮುಂಬೈನಲ್ಲಿ ನಡೆಯಲಿವೆ. ಇದಾದ ಬಳಿಕ ಅಂತಿಮ ಸುತ್ತಿನ ಪಂದ್ಯಗಳು ವಡೋದರಾದಲ್ಲಿ ನಡೆಯಲಿವೆ. ಕಳೆದ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯು ಬೆಂಗಳೂರು, ಲಖನೌ, ಮುಂಬೈ ಹಾಗೂ ವಡೋದರಾ ಹೀಗೆ ನಾಲ್ಕು ಸ್ಟೇಡಿಯಂನಲ್ಲಿ ನಡೆದಿತ್ತು. ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಫೈನಲ್‌ನಲ್ಲಿ ಡೆಲ್ಲಿಯನ್ನು ಸೋಲಿಸಿದ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಸತತ ಎರಡನೇ ಐಸಿಸಿ ಟೂರ್ನಿಗೆ ಆತಿಥ್ಯ ವಹಿಸುತ್ತಿರುವ ಭಾರತ
ಇನ್ನು ಇತ್ತೀಚೆಗಷ್ಟೇ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದ ಭಾರತ, ಮುಂದಿನ ವರ್ಷ ಮತ್ತೊಂದು ಪ್ರತಿಷ್ಠಿತ ಐಸಿಸಿ ಟೂರ್ನಿಗೆ ಆತಿಥ್ಯ ವಹಿಸಲು ಸಜ್ಜಾಗಿದೆ. 2026ರ WPL ಟೂರ್ನಿ ಮುಕ್ತಾಯವಾದ ಎರಡು ದಿನಗಳ ಬಳಿಕ ಪುರುಷರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಫೆಬ್ರವರಿ 07ರಿಂದ ಮಾರ್ಚ್ 08ರವರೆಗೆ ನಡೆಯಲಿದೆ. ಭಾರತದ ಚೆನ್ನೈ, ಮುಂಬೈ, ಅಹಮದಾಬಾದ್, ಡೆಲ್ಲಿ ಹಾಗೂ ಕೋಲ್ಕತಾ ಹಾಗೂ ಸಹಾ ಆತಿಥ್ಯ ವಹಿಸಿರುವ ಶ್ರೀಲಂಕಾದ ಕೊಲಂಬೋದಲ್ಲಿ ನಡೆಯಲಿದೆ. ಪಾಕಿಸ್ತಾನದ ಪಂದ್ಯಗಳು ಕೊಲಂಬೊದಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಸೇರಿದಂತೆ 20 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.


