13 ವರ್ಷಗಳ ಸುದೀರ್ಘ ಹುಡುಕಾಟದ ನಂತರ, ಜೀವಶಾಸ್ತ್ರಜ್ಞರೊಬ್ಬರು ಇಂಡೋನೇಷ್ಯಾದ ಸುಮಾತ್ರಾ ಕಾಡಿನಲ್ಲಿ ವಿಶ್ವದ ಅತಿದೊಡ್ಡ ಹೂವಾದ ರಾಫ್ಲೆಸಿಯಾ ಹ್ಯಾಸೆಲ್ಟಿಯನ್ನು ಪತ್ತೆಹಚ್ಚಿದ್ದಾರೆ. ಹುಲಿಗಳ ಭಯದ ನಡುವೆ ನಡೆದ ಈ ಸಂಶೋಧನೆಯು, ಅಳಿವಿನಂಚಿನಲ್ಲಿರುವ ಈ ಅಪರೂಪದ ಹೂವಿನ ಸಂರಕ್ಷಣೆಗೆ ನಿರ್ಣಾಯಕವಾಗಿದೆ.

13 ವರ್ಷಗಳ ಹುಡುಕಾಟಕ್ಕೆ ತೆರೆ: ಕೊನೆಗೂ ಪತ್ತೆಯಾಯ್ತು ರಾಫ್ಲೆಸಿಯಾ ಹ್ಯಾಸೆಲ್ಟಿ

ಇಂಡೋನೇಷ್ಯಾದ ಸುಮಾತ್ರಾದ ದಟ್ಟ ಕಾನನದಲ್ಲಿ 23 ಗಂಟೆಗಳ ಪ್ರಯಾಣದ ಬಳಿಕ ಹುಲಿ ದಾಳಿಯ ಭಯದ ಮಧ್ಯೆ, ಮೊಬೈಲ್ ಬ್ಯಾಟರಿ ಸಾಯುವಂಚಿನಲ್ಲಿದ್ದ ಸಮಯದಲ್ಲಿ ಅವರಿಗೆ ವಿಶ್ವದ ಅತ್ಯಂತ ದೊಡ್ಡ ಹೂವು ಎಂದೇ ಪ್ರಸಿದ್ಧವಾಗಿರುವ ರಾಫ್ಲೆಸಿಯಾ ಹ್ಯಾಸೆಲ್ಟಿ ಎಂಬ ಹೂವು ಕಾಣುವುದಕ್ಕೆ ಸಿಕ್ಕಿದೆ. ಬರೋಬ್ಬರಿ 13 ವರ್ಷಗಳ ನಂತರ ಸುದೀರ್ಘ ಶ್ರಮದ ನಂತರ ಈ ಹೂವನ್ನು ನೋಡುತ್ತಿದ್ದಂತೆ ಸಂಶೋಧಕರು ಮಗುವಿನಂತೆ ಬಿಕ್ಕಿ ಬಿಕ್ಕಿ ಅಳುವುದಕ್ಕೆ ಶುರು ಮಾಡಿದರು. ಹೌದು ಈ ಹೂವಿನ ಗಿಡಕ್ಕಾಗಿ ಜೀವಶಾಸ್ತ್ರಜ್ಞರೊಬ್ಬರ 13 ವರ್ಷಗಳ ಹುಡುಕಾಟ ನಡೆಸಿದ್ದರು. ಕೊನೆಗೂ ಅವರ ಹುಡುಕಾಟಕ್ಕೆ ತೆರೆ ಬಿದ್ದಿದ್ದು, ಅಂತಿಮವಾಗಿ ಅವರ ಕನಸು ನನಸಗಿದ್ದು, ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಸಂಭವಿಸುವ ಕ್ಷಣವಾಗಿ ಬದಲಾಯ್ತು.

ಇಂಡೋನೇಷ್ಯಾದ ಸುಮಾತ್ರಾದಲ್ಲಿ ದಟ್ಟ ಕಾಡಿನಲ್ಲಿ ಪತ್ತೆ:

ಹೌದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಬೊಟಾನಿಕಲ್ ಗಾರ್ಡನ್ ಮತ್ತು ಅರ್ಬೊರೇಟಂನ ಡಾ. ಕ್ರಿಸ್ ಥೊರೊಗುಡ್ ಅವರು ಕ್ಷೇತ್ರ ತಜ್ಞ ಸೆಪ್ಟಿಯನ್ ಆಂಡ್ರಿಕಿ ಅವರೊಂದಿಗೆ, ಇಂಡೋನೇಷ್ಯಾದ ಅತ್ಯಂತ ದೂರದ ಕಾಡಿನಲ್ಲಿಹಗಲು ರಾತ್ರಿ ಪಾದಯಾತ್ರೆ ಮಾಡಿ ರಾಫ್ಲೆಸಿಯಾ ಹ್ಯಾಸೆಲ್ಟಿಯ ಹೂವನ್ನು ಪತ್ತೆ ಮಾಡಿದರು. ಈ ಹೂವನ್ನು ಜನರಿಗಿಂತ ಹೆಚ್ಚಾಗಿ ಹುಲಿಗಳು ನೋಡುತ್ತಾರೆ ಎಂದು ಹೇಳುವಷ್ಟು ಅಪರೂಪ ಎನಿಸಿದೆ ಹಾಗೂ ಈ ಕಾಡಿನಲ್ಲಿ ಹುಲಿಗಳು ಹೆಚ್ಚಾಗಿವೆ.

ಅವರ ಈ ಹೂವಿನ ಹುಡುಕಾಟದ ಪಯಣವೂ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು, ಬೃಹತ್ ಗಾತ್ರದ ಹೂವು ಅವರ ಮುಂದೆ ತೆರೆದುಕೊಂಡ ಕ್ಷಣವನ್ನು ತೋರಿಸುತ್ತದೆ. ಈ ಹೂವಿಗಾಗಿ ಒಂದು ದಶಕಕ್ಕೂ ಹೆಚ್ಚು ಕಾಲ ಹುಡುಕಾಟದ ನಂತರ ಈ ಹೂವಿನ ದಳಗಳು ಕಾಡಿನ ಕತ್ತಲೆಯಲ್ಲಿ ನಿಧಾನವಾಗಿ ಬಿಚ್ಚಿಕೊಳ್ಳುತ್ತಿದ್ದಂತೆ ಥೊರೊಗುಡ್ ಭಾವುಕರಾಗಿ ಅಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

ಈ ವಿಲಕ್ಷಣ ಹೂವು ಶವದ ಹೂವು ಅಥವಾ ಕಾರ್ಪ್ಸ್ ಫ್ಲವರ್ ಎಂದು ಕರೆಯುವ ಕುಟುಂಬದ ಭಾಗವಾಗಿರುದೆ. ರಾಫ್ಲೆಸಿಯಾ ಹ್ಯಾಸೆಲ್ಟಿ ಹೂವು ಅದರ ಅಗಾಧವಾದ ಕೆಂಪು ಬಣ್ಣ ಮತ್ತು ಕಟುವಾದ ಪರಿಮಳಕ್ಕೆ ಹೆಸರುವಾಸಿಯಾಗಿದೆ. ಆದರೆ ಅದರ ಊಹಿಸಲಾಗದ ಗಾತ್ರವೂ ಅದನ್ನು ಪೌರಾಣಿಕವಾಗಿಸಿದೆ. ಇದು ತಿಂಗಳುಗಟ್ಟಲೆ ಕಾಡಿನ ನೆಲದ ಕೆಳಗೆ ಅಡಗಿಕೊಂಡು ಬೆಳೆಯುತ್ತದೆ ಮತ್ತು ಅಂತಿಮವಾಗಿ ಅರಳಿದಾಗ, ಅದು ಕೆಲವು ದಿನಗಳವರೆಗೆ ಹಾಗೆಯೇ ಇರುತ್ತದೆ ಮತ್ತು ನಂತರ ಕುಸಿಯುತ್ತದೆ.

ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಾಗಿ ಮೋಸ: 35 ಕೋಟಿ ರೂಪಾಯಿ ಕಳೆದುಕೊಂಡ 72ರ ವೃದ್ಧ

ಅದು ಅರಳುವ ಸಮಯದಲ್ಲೇ ನಿಖರವಾಗಿ ಆ ದೃಶ್ಯವನ್ನು ಸೆರೆ ಹಿಡಿಯುವುದು ಬಹುತೇಕ ಅಸಾಧ್ಯವೆಂದೇ ಪರಿಗಣಿಸಲಾಗಿದೆ. ಆದರೂ ಕಾಡಿನಲ್ಲಿ ಅರಳುತ್ತಿರುವ ಈ ಹೂವಿನ ಜಾತಿಯನ್ನು ದಾಖಲಿಸಲು ಥೋರೊಗುಡ್ ಒಂದು ದಶಕಕ್ಕೂ ಹೆಚ್ಚು ಕಾಲ ಪ್ರಯತ್ನಿಸಿದ್ದಾರೆ. ತಂಡವು ಇವುಗಳ ಇರುವಿಕೆಯ ಸುಳಿವುಗಳನ್ನು ಪತ್ತೆಹಚ್ಚಿತು. ಮಳೆಕಾಡಿನ ದೂರದ ಪ್ರದೇಶಗಳನ್ನು ಶೋಧಿಸಿತು ಮತ್ತು ಹುಲಿಗಳ ಉಪಸ್ಥಿತಿಯ ನಡುವೆಯೂ ಈ ಪ್ರದೇಶದಲ್ಲಿ ಓಡಾಡಿತ್ತು. ಪರಿಣಾಮವಾಗಿ ಎಲ್ಲಾ ಅಸಾಧ್ಯತೆಗಳ ಮಧ್ಯೆಯೂ ಅವರು ಕೊನೆಗೂ ಗುರಿ ತಲುಪಿದ್ದಾರೆ.

ಇದನ್ನೂ ಓದಿ: ಹಾವನ್ನು ಉಳಿಸಲು ಹೋಗಿ ಪಲ್ಟಿಯಾದ ಶಾಲಾ ಆಟೋ: ಇಬ್ಬರು ಮಕ್ಕಳ ದುರಂತ ಅಂತ್ಯ

ರಾತ್ರಿಯ ಕತ್ತಲ ಹೊದಿಕೆಯ ಕೆಳಗೆ ಹೂವು ಅರಳಲು ಆರಂಭವಾಯ್ತು, ಸಂಶೋಧಕರ ತಂಡದ ಕ್ಯಾಮೆರಾಗಳು ಹೂವಿನ ದಳಗಳು ತೆರೆದುಕೊಳ್ಳುವುದನ್ನು ಸೆರೆ ಹಿಡಿದು, ಅದರ ಅಗಾಧವಾದ ರಚನೆಯನ್ನು ದಾಖಲಿಸಿದ್ದವು. ಈ ಕ್ಷಣದಲ್ಲಿ ಸಂಶೋಧಕ ಥೋರೊಗುಡ್ ಅಕ್ಷರಶಃ ಭಾವುಕರಾಗಿದ್ದರು. ಇದು ನಿಜವೇ ಎಂಬ ಅಪನಂಬಿಕೆಯಲ್ಲೇ ಅವರು ಪಿಸುಗುಟ್ಟುತ್ತಾ ನಿಂತಿದ್ದರು. ಈ ಮೂಲಕ ಅವರ ಹಲವು ವರ್ಷಗಳ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ.

ರಫ್ಲೆಸಿಯಾ ಪ್ರಭೇದಗಳು ವಿಶ್ವದ ಅತ್ಯಂತ ಅಳಿವಿನಂಚಿನಲ್ಲಿರುವ ಸಸ್ಯಗಳಲ್ಲಿ ಒಂದಾಗಿವೆ ಆವಾಸ ಸ್ಥಾನದ ನಷ್ಟ ಮತ್ತು ಅವುಗಳ ಅತ್ಯಂತ ದುರ್ಬಲವಾದ ಜೀವನಚಕ್ರಗಳಿಂದಾಗಿ ಕಣ್ಮರೆಯಾಗುವ ಅಂಚಿನಲ್ಲಿವೆ. ಹೂವನ್ನು ದಾಖಲಿಸುವುದು ಅಪರೂಪ ಮಾತ್ರವಲ್ಲ, ಅವುಗಳನ್ನು ಹೇಗೆ ರಕ್ಷಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ನಿರ್ಣಾಯಕವಾಗಿದೆ. ಥೋರೊಗುಡ್ ಮತ್ತು ಆಂಡ್ರಿಕಿಗೆ ಆ ಕ್ಷಣ ಕೇವಲ ವೈಜ್ಞಾನಿಕ ಮೈಲಿಗಲ್ಲು ಮಾತ್ರವಲ್ಲದೇ. ಭೂಮಿಯ ಮೇಲಿನ ಅತ್ಯಂತ ಕಠಿಣ ಅರಣ್ಯದ ಮೂಲಕ 13 ವರ್ಷಗಳ ಅನ್ವೇಷಣೆ ಅವರ ಪಾಲಿಗೆ ಭಾವನಾತ್ಮಕವಾಗಿತ್ತು.

View post on Instagram